ಬೆಂಗಳೂರು: ಕೊರೊನಾದಿಂದಾಗಿ ಬೆಡ್, ಮೆಡಿಕಲ್ ಎಕ್ವಿಪ್​​ಮೆಂಟ್​​​​​ ಕೊರತೆ ಕಾಡ್ತಿದೆ. ಯಸ್ ಕೊರತೆ ಇದೆ ಅಂತ ಸರ್ಕಾರವೇ ಒಪ್ಪಿಕೊಳ್ತಿದೆ. ಹಾಗಾದ್ರೆ ಕಳೆದ ವರ್ಷ ಬೆಂಗಳೂರಿನ ಹೊರವಲಯದಲ್ಲಿದ್ದ ಕೊರೊನಾ ಸೆಂಟರ್ ಏನಾಯ್ತು? ಸದ್ಯ ಇಂತಹದ್ದೊಂದು ಚರ್ಚೆ ಈಗ ಹುಟ್ಟಿಕೊಂಡಿದೆ.

ಕಳೆದ ವರ್ಷದ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಏನಾಯ್ತು?
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ವರದಿಯಾಗ್ತಿವೆ. ದೊಡ್ಡ ದೊಡ್ಡ ಆಸ್ಪತ್ರೆಗಳಿದ್ರೂ ಬೆಡ್ ಸಾಕಾಗ್ತಿಲ್ಲ. ಅಷ್ಟರಮಟ್ಟಿಗೆ ಸೋಂಕಿತರು ಹೆಚ್ಚಾಗಿದ್ದಾರೆ. ಬೆಡ್​​ಗಳಿಲ್ಲದೆ ಬೀದಿ ಬೀದಿಗಳಲ್ಲಿ, ಌಂಬುಲೆನ್ಸ್​​ಗಳಲ್ಲಿ, ಆಸ್ಪತ್ರೆಯ ಮುಂಭಾಗದಲ್ಲಿ ಬಿದ್ದು ಸೋಂಕಿತರು ನರಳಾಡ್ತಿದಾರೆ. ಹಲವರು ಇದೇ ಕಾರಣಕ್ಕೆ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದ್ರ ನಡುವೆ ಮುನ್ನೆಲೆಗೆ ಬಂದಿದೆ ಕೋವಿಡ್ ಕೇರ್ ಸೆಂಟರ್.

 

ಕಳೆದ ವರ್ಷದ ಬೆಂಗಳೂರಿನ ಹೊರವಲಯದಲ್ಲಿ 10,100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಅದು ಈಗ ಎಲ್ಲಿದೆ? ಇದ್ಯಾ ಅಥವಾ ಇಲ್ವಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇದ್ದರೆ ಯಾಕೆ ಅಲ್ಲಿಗೆ ಸೋಂಕಿತರನ್ನ ದಾಖಲಿಸ್ತಿಲ್ಲ? ಇಲ್ಲದಿದ್ದರೆ ಅದು ಏನಾಯ್ತು? ಮಾರಿಬಿಟ್ಟಿದ್ದಾರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಕೋವಿಡ್ ಕೇರ್ ಸೆಂಟರ್​​​​​​ ಸುತ್ತ ಸುಳಿದಾಡ್ತಿದೆ.

ಇದನ್ನೂ ಓದಿ:  ಸೋಮವಾರದಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲಿದೆ ಬೆಂಗಳೂರಿನ ಅತೀ ದೊಡ್ಡ ಕೊರೊನಾ ಸೆಂಟರ್

ಬೆಂಗಳೂರಿನ ಬಿಐಇಸಿ ಕೇಂದ್ರದಲ್ಲಿ ಕೊರೊನಾ ಸೆಂಟರ್ ನಿರ್ಮಾಣ ಮಾಡಲಾಗಿತ್ತು. 10,100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಮಂಚ, ಬೆಡ್‌ಗಳು, ಕುರ್ಚಿ ಉಪಕರಣಗಳ ವ್ಯವಸ್ಥೆ ಕೂಡ ಮಾಡಲಾಗಿತ್ತು. ಕೊರೊನಾ ಸೋಕು ಇಳಿಕೆಯಾದ ಬಳಿಕ ಸೆಂಟರ್‌ಗಳು ಕ್ಲೋಸ್‌ ಕೂಡ ಮಾಡಲಾಗಿತ್ತು. ಹೀಗೆ ಕೊರೊನಾ ಸೆಂಟರ್‌ಗಳ ಮುಚ್ಚಿದ್ಮೇಲೆ ಉಪಕರಣಗಳು ಏನಾದ್ವು? ಅನ್ನೋ ಪ್ರಶ್ನೆ ಎದ್ದಿದೆ. ಬಿಬಿಎಂಪಿ ತನ್ನಲ್ಲಿಯೇ ಆ‌ ಉಪಕರಣಗಳನ್ನು ಇರಿಸಿಕೊಂಡಿದೆಯೇ? ಅಥವಾ ಸೆಂಟರ್‌ಗಳು ಕ್ಲೋಸ್‌ ಆದ್ಮೇಲೆ ಅವುಗಳನ್ನ ಮಾರಿ ಹಾಕಿದ್ದಾಗಿದೆಯೇ? ಇರೋದಾದ್ರೆ ಎಲ್ಲಿದೆ? ಮಾರಿ ಹಾಕಿದ್ರೆ ಎಷ್ಟು ಹಣಕ್ಕೆ ಮಾರಿ ಹಾಕಿದೆ? ಅನ್ನೋ ವಿಚಾರ ಮುನ್ನೆಲೆಗೆ ಬಂದಿದ್ದು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಇದರ ಮಾಹಿತಿ ನೀಡಬೇಕಿದೆ.

The post ಕಳೆದ ವರ್ಷ ಇದ್ದ 10,100 ಬೆಡ್​ಗಳ ಕೊರೊನಾ ಸೆಂಟರ್​ ಎಲ್ಲಿ ಹೋಯ್ತು.? ಮಾರಿಬಿಟ್ರಾ..? appeared first on News First Kannada.

Source: newsfirstlive.com

Source link