ಕಳ್ಳತನವಾಗಿದ್ದ ಸ್ಕೂಟಿ ವಾಟ್ಸಾಪ್​ ಗ್ರೂಪ್​ನಿಂದ ಪತ್ತೆ; ಸ್ಕೂಟಿ ಸಹಿತ ಆರೋಪಿ‌ ಬಂಧನ | Police arrested man who theft scotty in front of temple in Bengaluru


ಕಳ್ಳತನವಾಗಿದ್ದ ಸ್ಕೂಟಿ ವಾಟ್ಸಾಪ್​ ಗ್ರೂಪ್​ನಿಂದ ಪತ್ತೆ; ಸ್ಕೂಟಿ ಸಹಿತ ಆರೋಪಿ‌ ಬಂಧನ

ಮಧ್ಯಾಹ್ನ ಕದಿದ್ದ ಸ್ಕೂಟಿಯನ್ನು ಸಂಜೆ ವೇಳೆಗೆ ಆರೋಪಿ ಸಮೇತ ಬಂಧಿಸಿದ್ದಾರೆ

ಬೆಂಗಳೂರು: ದೇವಸ್ಥಾನದ ಬಳಿ ಕಳ್ಳನೋರ್ವ ಭಕ್ತನ ಸ್ಕೂಟಿ (scotty) ಒಂದನ್ನು ಕದ್ದು ಆಂಧ್ರ ಪ್ರದೇಶದತ್ತ ಪರಾರಿಯಾಗುತ್ತಿದ್ದ ವೇಳೆ ಸೆರೆ ಸಿಕ್ಕಿದ್ದಾನೆ. ಕಳ್ಳತನ ಮಾಡಿದ ನಾಲ್ಕು ಗಂಟೆಗಳಲ್ಲಿ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಗರೇನಹಳ್ಳಿಯ ಚೌಡೇಶ್ವರಮ್ಮ ದೇವಸ್ಥಾನದ ಬಳಿ ಕಳ್ಳ ಸ್ಕೂಟಿ ಕಳ್ಳತನ ಮಾಡಿದ್ದಾನೆ. ಸ್ಕೂಟಿ ಕಳ್ಳತನದ ಬಗ್ಗೆ ಪೊಲೀಸ್ ಮತ್ತು ಪತ್ರಕರ್ತರ ವಾಟ್ಸಪ್ ಗ್ರೂಪ್​ನಲ್ಲಿ(What’s app group) ಸ್ಕೂಟಿ ನಂಬರ್ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಮಾಹಿತಿ ತಿಳಿದ ಕೂಡಲೆ ಅಲರ್ಟ್ ಆದ ಹೊಸಕೋಟೆ ಡಿವೈಎಸ್​ಪಿ ಉಮಾಶಂಕರ್ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ಹೀಗಾಗಿ ಮಧ್ಯಾಹ್ನ ಕದಿದ್ದ ಸ್ಕೂಟಿಯನ್ನು ಸಂಜೆ ವೇಳೆಗೆ ಆರೋಪಿ ಸಮೇತ ಬಂಧಿಸಿದ್ದಾರೆ.

ಹೊಸಕೋಟೆ ಚಿಂತಾಮಣಿ ರಸ್ತೆ ಮೂಲಕ ನೆರೆಯ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಸ್ಕೂಟಿ ಕಳೆದುಕೊಂಡು ಕಂಗಾಲಾಗಿದ್ದ ಮಾಲೀಕರಿಗೆ ಕಳ್ಳತನವಾದ 4 ಗಂಟೆಗಳಲ್ಲೆ ಮರಳಿ ಸಿಕ್ಕಿದ್ದು, ಪೊಲೀಸರ ಕಾರ್ಯ ವೈಖರಿಯಿಂದ ಸಹಜವಾಗಿಯೇ ಖುಷಿ ತಂದಿದೆ.

ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಫೈರಿಂಗ್
ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅಶೋಕನಗರದಲ್ಲಿ ನಡೆದಿದೆ. ನವೆಂಬರ್ 10 ರಂದು ಬೆಳ್ಳಂದೂರಿನಲ್ಲಿ ಮುನ್ನಾಕುಮಾರ್ ಕೊಲೆ ಮಾಡಿದ್ದ ಪಳನಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಎಸಿಪಿ ಪರಮೇಶ್ವರ್ ಹಾಗೂ ಇನ್ಸ್​ಪೆಕ್ಟರ್​ ಹರೀಶ್ ಕುಮಾರ್ ತಂಡ ಅರೋಪಿ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಅಶೋಕನಗರ ಸ್ಮಶಾನದ ಬಳಿ ಆರೋಪಿ ಪಳಸಿ ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಪಳನಿ ದಾಳಿ ಮಾಡಿದ್ದಾನೆ. ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸುತ್ತಿದ್ದ ವೇಳೆ ಎಸಿಪಿ ಪರಮೇಶ್ವರ್  ಫೈರಿಂಗ್ ಮಾಡಿದ್ದಾರೆ.

ಎಡಗಾಲಿಗೆ ಶೂಟ್ ಮಾಡಿ ಆರೋಪಿ ಅಲಿಯಾಸ್ ಕರ್ಚಿಫ್ ಪಳನಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಪಳನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 20 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಪಳನಿಗಾಗಿ ಬೆಳ್ಳಂದೂರು ಪೊಲೀಸರು, ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದರು. ಸದ್ಯ ಆರೋಪಿ ಪಳನಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮತ್ತು ಶೂಟೌಟ್ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಬೆಂಗಳೂರು: ಒಂದೇ ರಾತ್ರಿ 30ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕದ್ದ ಕಳ್ಳರು; ಸಿಸಿಟಿವಿ ಇದ್ದರೂ ಮನೆ ಮುಂದೆ ವಾಹನ ನಿಲ್ಲಿಸುವಾಗ ಎಚ್ಚರ

ಬಾಗಲಕೋಟೆ: ಬೆತ್ತಲೆ ದೇಹಕ್ಕೆ ಕೊಬ್ಬರಿ ಎಣ್ಣೆ ಬಳಿದು ಕಳ್ಳತನ; ಅಂತಾರಾಜ್ಯ ಕಳ್ಳನನ್ನು ಬಂಧಿಸಿದ ಪೊಲೀಸರು

TV9 Kannada


Leave a Reply

Your email address will not be published. Required fields are marked *