ನೀವು ಸಾಕಷ್ಟು ಬೈಕ್ ಕಳ್ಳತನ ಮತ್ತು ಕಳ್ಳರ ಬಗ್ಗೆ ಕೇಳ್ತೀರಾ.. ಅದ್ರೆ ಪರ್ಟಿಕ್ಯೂಲರ್ ಅಗಿ ಒಂದೇ ಕಂಪನಿಯ ಒಂದು ಬ್ರಾಂಡ್ ಬೈಕ್ ಕದಿಯೋದನ್ನ ಕೇಳಿರೋದಿಲ್ಲ ಬಿಡಿ.. ಇಲ್ಲೊಬ್ಬ ಜಗತ್ ಕಿಲಾಡಿ ಅ ಒಂದು ಬೈಕ್ ಅನ್ನ ಬಿಟ್ಟು ಬೇರೆ ಬೈಕ್ ಕದಿತಾನೆ ಇರ್ತಿಲಿಲ್ಲ.. ಅ ಬೈಕ್ ಯಾವುದು.. ಅದನ್ನೆ ಕದಿಯೋಕೆ ಅವನು ಕೊಟ್ಟ ಕಾರಣಗಳನ್ನ ಕೇಳಿದ್ರೆ ನೀವೂ ನಿಜಕ್ಕೂ ಶಾಕ್ ಅಗ್ತೀರಾ!

ಮಾಡೋದೆ ಬೈಕ್ ಕಳ್ಳತನ ಅದ್ರಲ್ಲೂ ಆ ಒಂದು ಬೈಕ್ ಈತನ ಟಾರ್ಗೆಟ್
ಇವನು ಅಂತಿಲ್ಲ ಕಳ್ಳ ಅಲ್ಲ.. ಖತರ್ನಾಕ್ ಅಲ್ಲೇ ಖತರ್ನಾಕ್. ಆದರೆ ಸ್ವಲ್ಪ ಢಿಪರೆಂಟ್. ನೀವು ಬೈಕ್ ಕಳ್ಳರು ಅಂದ್ರೆ ಯಾವ ಬೈಕ್ ಬೇಕಾದ್ರೂ ಕದಿತಾರೆ ಅಂತಾ ಕೇಳಿರ್ತಿರಾ ಅಲ್ವಾ? ಆದ್ರೆ ಈ ಕಳ್ಳ ಸ್ವಲ್ಪ ವಿಚಿತ್ರ, ಇವನಿಗೆ ದುಬಾರಿ ಮತ್ತು ಐಷರಾಮಿ ಬೈಕ್​​ಗಳನ್ನು ನೋಡಿದ್ರೆ ಸ್ವಲ್ಪ ಅಲರ್ಜಿ. ಹಾಗಾಗಿ ಅಂತಾ ಬೈಕ್ ಗಳನ್ನ ಮುಟ್ಟೊಕೊ ಹೋಗೊಲ್ಲ. ಹಾಗಾದ್ರೆ ಇವನಿಗೆ ಅದ್ಯಾವಾ ಬೈಕ್ ಮೈಲೆ ತುಂಬಾ ಲವ್ ಅಂತಾ ಕೇಳ್ತಿದೀರಾ? ಅದೇನೋ ಈ ಕಳ್ಳನಿಗೆ TVS XL ಬೈಕ್  ಅಂದ್ರೆ ಅದೆಲ್ಲಿಲ್ಲದ ಲವ್.

ಹೌದು ಅದ್ಯಾರಪ್ಪ ಆ ಅಸಾಮಿ ಅಂತಾ ಯೋಚನೆ ಮಾಡ್ತೀದಿರಾ. ಹೆಸರು ರಾಜಾ ಅಲಿಯಾಸ್ ರಘುರಾಮ್ ಅಂತಾ. ಇವನು ಕದಿಯೋದು ಕೇವಲ ಟಿವಿಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ ಮತ್ತು ಎಕ್ಸ್ ಎಲ್ 100 ಬೈಕ್ ಗಳನ್ನ ಮಾತ್ರ. ಅದರ ಪಕ್ಕದಲ್ಲಿ ನೀವು ಅದೆಷ್ಟೆ ಕೋಟಿ ಬೆಲೆ ಬಾಳೋ ಬೈಕ್ ನಿಲ್ಲಿಸಿದ್ರೂ ಅದನ್ನ ಈತ ಟಚ್ ಕೂಡ ಮಾಡೋಲ್ಲ. ಹಾಗಾಂತ ನೀವೆನಾದ್ರೂ ಇವನಿಗೆ ಟಿವಿಎಸ್ ಕಂಪನಿ ಮೇಲೆ ಭಾರಿ ಲವ್ ಇದಿಯೇನೋ ಅಂದ್ಕೋಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ. ಇದೆ ಪ್ರಶ್ನೆಯನ್ನ ಜ್ಞಾನ ಭಾರತಿ ಠಾಣೆ ಪೊಲೀಸರು ಕೂಡ ಕೇಳಿದ್ದಾರೆ ಅದಿಕ್ಕೆ ಅವನು ಕೊಟ್ಟ ಉತ್ತರ ಎಷ್ಟು ಡಿಫರೆಂಟ್ ಅಗಿತ್ತು ಗೊತ್ತಾ.

ಟಿವಿಎಸ್ ಎಕ್ಸ್ ಎಲ್ ಮಾತ್ರ ಕದಿಯೋಕೆ ಕಾರಣಗಳು!
ಈ ಕಳ್ಳನಿಗೆ ಈ ಎಕ್ಸ್ ಎಲ್ ಗಾಡಿ ಬಿಟ್ಟು ಬೇರೆ ಗಾಡಿ ಓಡಿಸೋಕೆ ಬರೋದಿಲ್ವಂತೆ. ಅಲ್ಲದೆ ಈ ಬೈಕ್ ಅನ್ನ ಕದಿಯೋದು ಬೇರೆ ಎಲ್ಲಾ ಬೈಕ್ ಗಳಿಗಿಂತ ತೀರಾ ಸಲೀಸಂತೆ. ಅಷ್ಟೇ ಅಲ್ಲದೆ ಕಡಿಮೆ ಬೆಲೆ ಬೈಕ್ ಅಗಿರೋದ್ರಿಂದ ಪೊಲೀಸರು ಕೂಡ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡು ಹುಡುಕಲ್ವಂತೆ. ಹಾಗೂ ಈ ಬೈಕ್ ಅನ್ನ ಅತಿ ಕಡಿಮೆ ಬೆಲೆಗೆ ಮಾರೋದು ಕೂಡು ಸುಲಭವಂತೆ. ಅಬ್ಬಾ ಟಿವಿಎಸ್ ಎಕ್ಸ್ ಎಲ್ ಬೈಕ್ ಕದಿಯೋಕೆ ಇಷ್ಟೆಲ್ಲಾ ಕಾರಣ ಇದೀಯಾ ಅಂತಾ ಬಾಯಿ ಮೇಲೆ ಬೆರಳಿಡ್ತೀದೀರಾ ಅಲ್ವಾ, ಅದ್ರೆ ಇದೆ ನಿಜಾ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಬೈಕ್ ಕಳ್ಳತನ ಮಾಡುತ್ತಿದ್ದ ರಾಜಾನನ್ನ ಜ್ಞಾನ ಭಾರತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮೀನಾರಯಣ್ ಮತ್ತು ಪಿಎಸ್ ಐ ದತ್ತುಬಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 3 ಲಕ್ಷ ಮೌಲ್ಯದ ಒಟ್ಟು 7 ಟಿವಿಎಸ್ ಎಕ್ಸ್ ಎಲ್ ಗಳನ್ನ ವಶಪಡಿಸಿಕೊಂಡು ಆರೋಪಿಯನ್ನ ಜೈಲಿಗಟ್ಟಿದ್ದಾರೆ.

The post ಕಳ್ಳನಿಗೆ TVS-XL ಬೈಕ್ ಮೇಲೆ ಅದೊಂಥರಾ ಲವ್- ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ! appeared first on News First Kannada.

Source: newsfirstlive.com

Source link