ಬೆಂಗಳೂರು: ಮೊಬೈಲ್ ಅಂಗಡಿ ಬೀಗ ಮುರಿದು ಕೈಚಳಕ ತೋರುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್​ ಆಗಿದ್ದಾರೆ. ಮಹದೇವಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಮಂಜುನಾಥ್, ಸೌರವ್, ಬಂಧಿತ ಆರೋಪಿಗಳು. ಬೆಂಗಳೂರಲ್ಲಿ ಕದ್ದ ವಸ್ತುಗಳನ್ನ ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು. ರೈಲು ಮೂಲಕ ದೆಹಲಿಗೆ ತೆರಳಿ ಅಲ್ಲಿ ಮಾರಾಟ ಮಾಡಿ ಬರ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮಹಾದೇವಪುರ ಠಾಣೆ ಪೊಲೀಸರಿಂದ ಹುಬ್ಬಳ್ಳಿಯಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

ಇನ್ನು ಬಂಧಿತರಿಂದ 5 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಯ ಮೊಬೈಲ್ ಫೋನ್​​ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

The post ಕಳ್ಳರು ಅರೆಸ್ಟ್.. ಬೆಂಗಳೂರಲ್ಲಿ ಕದ್ದ ಮೊಬೈಲ್​​ಗಳನ್ನ ಮಾರ್ತಿದ್ದು ಎಲ್ಲಿ ಗೊತ್ತಾ?  appeared first on News First Kannada.

Source: newsfirstlive.com

Source link