ಸುಮ್ನೆ ನಡೆದುಕೊಂಡು ಹೋಗಬೇಕಾದ್ರೇನೋ ಅಥವಾ ಗಾಡೀಲಿ ಹೋಗಬೇಕಾದ್ರೇನೋ ಕಳ್ಳರು ಮೊಬೈಲ್‌ ಕದ್ದು ಓಡಿ ಹೋಗೋದು ಸಿಲಿಕಾನ್‌ ಸಿಟಿಯಲ್ಲಿ ಕಾಮನ್‌. ಫೋನ್‌ ಎಸ್ಕೇಪ್‌ ಮಾಡಿದ ಕಳ್ಳರನ್ನ ಚೇಸ್‌ ಮಾಡಿ ಹಿಡಿಯೋರು ಎಷ್ಟು ಜನ. ಈ ಸ್ಟೋರಿಯಲ್ಲಿ ಕಳ್ಳರನ್ನೇನೋ ಚೇಸ್‌ ಮಾಡಿ ಕದ್ದ ಮಾಲು ವಾಪಸ್‌ ಬಂತು ನಿಜ. ಆದ್ರೆ, ಮುಂದೆ ಆಗಿದ್ದಿದೆಯಲ್ಲಾ ಅದೇ ಈಗ ಸುದ್ದಿ.

ಈ ವ್ಯಕ್ತಿ ಹೆಸರು ಲಕ್ಷ್ಮಿ ನಾರಾಯಣ್‌. ಇವರು ಸಾಮಾನ್ಯರಲ್ಲ, ಛಲದಂಕ ಮಲ್ಲ ಅಂತಾ ಕರೀಬಹುದು. ಯಾಕಂದ್ರೆ ಇವ್ರು ಮಾಡಿದ ಸಾಹಸ ಅಂತದ್ದಿದೆ. ಇವರ ಕಥೆಗೆ ಈ ಸ್ಕೂಟಿ, ಇವರ ಮೈಮೇಲೆ ಆಗಿರೋ ಗಾಯ, ಈ ಮೊಬೈಲ್‌. ಈ ವಸ್ತುಗಳೇ ಕೇಂದ್ರಬಿಂದು.
ಲಕ್ಷ್ಮಿ ನಾರಾಯಣ ಅವರು ಮಾಗಡಿಯ ಹೊನ್ನಗನಹಟ್ಟಿಯ ಬಳಿ ಹೋಗ್ತಿದ್ದ ಈ ಲಕ್ಷ್ಮಿ ನಾರಾಯಣ ಬೈಕ್‌ ನಿಲ್ಲಿಸಿದ್ರು. ಆಗ ಬಂದ ಕಳ್ಳರು ವಿಚಾರಿಸೋ ನೆಪದಲ್ಲಿ ಇವ್ರ ತಲೆಗೆ ಟ್ಯೂಬ್‌ಲೈಟ್‌ನಿಂದ ಹಲ್ಲೆ ಮಾಡಿ ಫೋನ್‌ ಕದ್ದು ಓಡಿ ಹೋಗ್ತಿದ್ರು. ಆಗ ಅವ್ರನ್ನು ಚೇಸ್‌ ಮಾಡಿದ ಈ ಲಕ್ಷ್ಮಿ ನಾರಾಯಣ ತಮ್ಮ ಫೋನ್‌ನ್ನ ಕಳ್ಳರಿಂದ ವಾಪಸ್‌ ತಗೊಂಡಿದ್ದಾರೆ.

ಇಷ್ಟೆಲ್ಲಾ ಆದ್ಮೇಲೆ ನಡೆದಿರೋದೆ ಈಗ ಸುದ್ದಿಯಾಗಿದೆ. ಕಳ್ಳರೇನೋ ಫೋನ್‌ ಕದೀಲಿಲ್ಲ ನಿಜ. ಆದ್ರೆ, ಸ್ವಲ್ಪದೂರ ಹೋದಮೇಲೆ ವಾಪಸ್‌ ಕಳ್ಳರು ಬಂದಿದ್ದಾರೆ. ಆಗ ಅವ್ರನ್ನು ಮತ್ತೆ ಚೇಸ್‌ ಮಾಡಿದ್ದಾರೆ ಲಕ್ಷ್ಮಿ ನಾರಾಯಣ. ಈ ವೇಳೆ ಕಳ್ಳರು ಲಕ್ಷ್ಮಿ ನಾರಾಯಣರಿಗೆ ಒದ್ದು ಬೀಳಿಸಿದ್ದಾರೆ. ಪುನಃ ಯೂಟರ್ನ್‌ ಮಾಡಿಕೊಂಡು ಬಂದ ಕಳ್ಳರು ಫೋನ್‌ ಕಿತ್ತುಕೊಳ್ಳೋಕೆ ಪ್ರಯತ್ನಿಸಿದ್ದಾರೆ. ಆಗ ಅವ್ರಿಗೆ ಹೊಡೆಯೋಕೆ ಲಕ್ಷ್ಮಿ ನಾರಾಯಣ ಮುಂದಾಗುತ್ತಾರೆ.

ಅವತ್ತು ಕಳ್ಳರೊಂದಿಗೆ ಗುದ್ದಾಡಿ ಫೋನ್‌ ವಾಪಸ್‌ ತೆಗೆದುಕೊಳ್ಳೋ ವೇಳೆ ಲಕ್ಷ್ಮಿ ನಾರಾಯಣನ ಕೈ ಕಾಲಿಗೆ ಗಾಯಗಳಾಗಿದ್ದು, ತಾವರೆಕೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏನೇ ಇರ್ಲಿ, ಮೂರು ಜನ ಕಳ್ಳರೊಂದಿಗೆ ಹೋರಾಡಿದ ಲಕ್ಷ್ಮಿ ನಾರಾಯಣನ ಸಾಹಸ ಮೆಚ್ಚುವಂತದ್ದೇ. ಈ ಏರಿಯಾದಲ್ಲಿ ಪದೇ ಪದೇ ಈ ರೀತಿಯ ಪ್ರಕರಣಗಳು ದಾಖಲಾಗ್ತಿದ್ದು, ಮೀಸೆ ಚಿಗುರದ ಯುವಕರೇ ಇದನ್ನ ಮಾಡ್ತಿದಾರೆ ಅಂತಾ ಶಂಕಿಸಲಾಗಿದೆ. ಅಂತವರಿಗೆ ಬಿಸಿ ಮುಟ್ಟಿಸೋಕೆ ಪೊಲೀಸರು ಮುಂದಾಗಿದ್ದಾರೆ.

The post ಕಳ್ಳರು ಮೊಬೈಲ್​ ಕಿತ್ತುಕೊಂಡ್ರು.. ಇವರು ಚೇಸ್ ಮಾಡಿದ್ರು.. ಮುಂದೆ ನಡೆದಿದ್ದೆಲ್ಲಾ ರೋಚಕ appeared first on News First Kannada.

Source: newsfirstlive.com

Source link