ಬೆಂಗಳೂರು: ಸ್ಯಾಂಡಲ್​ವುಡ್​ ನಿರ್ದೇಶಕ  ರೇಣುಕಾಶರ್ಮ ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ರೇಣುಕಾಶರ್ಮ ಇಂದು ಕೊನೆಯುಸಿರೆಳೆದಿದ್ದಾರೆ.

ಕನ್ನಡದ ಸೂಪರ್ ಹಿಟ್​ ಚಿತ್ರ ಡಾ. ರಾಜ್​ಕುಮಾರ್​ ಅಭಿನಯದ ಕವಿರತ್ನ ಕಾಳಿದಾಸ, ರವಿಚಂದ್ರನ್​ ಅಭಿನಯದ ಕಿಂದರಜೋಗಿ, ಅಂಜದಗಂಡು ಚಿತ್ರ ಸೇರಿದಂತೆ ಅನೇಕ  ಸಿನಿಮಾಗಳನ್ನ ನಿರ್ದೇಶನ ಮಾಡಿ ರೇಣುಕಾಶರ್ಮ ಖ್ಯಾತಿ ಪಡೆದಿದ್ದರು.

ಅವರ ನಿಧನಕ್ಕೆ ಚಿತ್ರರಂಗದ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

The post ‘ಕವಿರತ್ನ ಕಾಳಿದಾಸ’ ಸಿನಿಮಾ ಖ್ಯಾತಿಯ ನಿರ್ದೇಶಕ ರೇಣುಕಾಶರ್ಮ ನಿಧನ appeared first on News First Kannada.

Source: newsfirstlive.com

Source link