ಕಷ್ಟದ ದಿನಗಳಲ್ಲಿ ಹೆಂಡತಿ ಬಿಟ್ಟು ಹೋದ ನೋವು, ಆತ್ಮಹತ್ಯೆ ಚಿಂತೆ; ಇದು ನಟ ಮನೋಜ್​ ಬಾಜಪೇಯಿ ಕಥೆ | Manoj Bajpayee Birthday Manoj Bajpayee Divorce and his second marriage story


ಕಷ್ಟದ ದಿನಗಳಲ್ಲಿ ಹೆಂಡತಿ ಬಿಟ್ಟು ಹೋದ ನೋವು, ಆತ್ಮಹತ್ಯೆ ಚಿಂತೆ; ಇದು ನಟ ಮನೋಜ್​ ಬಾಜಪೇಯಿ ಕಥೆ

ಶಬಾನಾ ರಾಜಾ- ಮನೋಜ್​

ನಟನೆ ಮೂಲಕ ಎಲ್ಲರ ಗಮನ ಸೆಳೆದ ನಟ ಮನೋಜ್ ಬಾಜಪೇಯಿ ಅವರು (Manoj Bajpayee) ಇಂದು (ಏಪ್ರಿಲ್ 23) 53ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ದಿ ಫ್ಯಾಮಿಲಿ ಮ್ಯಾನ್​’ ವೆಬ್ ಸರಣಿ (The Family Man Web Series) ಮೂಲಕ ಅವರ ಖ್ಯಾತಿ ದ್ವಿಗುಣವಾಗಿದೆ. ಅವರಿಗೆ ಬರುತ್ತಿರುವ ಆಫರ್​ಗಳ ಸಂಖ್ಯೆ ಹೆಚ್ಚಿದೆ. ಇಂದು ಸ್ಟಾರ್ ಹೀರೋ ಆಗಿರುವ ಮನೋಜ್​ ಅವರ ಬದುಕು ಅಷ್ಟು ಸಲಭದ್ದಾಗಿರಲಿಲ್ಲ. ಅವರು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಅತೀ ಕಷ್ಟದ ಬದುಕನ್ನು ಅವರು ನಡೆಸಿದ್ದರು.

ಮನೋಜ್​ ಬಿಹಾರದ ಬೆಲ್ವಾ ಎಂಬ ಸಣ್ಣ ಹಳ್ಳಿಯಲ್ಲಿ 1969ರ ಏಪ್ರಿಲ್ 23ರಂದು ಜನಿಸಿದರು. ಗುಡಿಸಲಲ್ಲಿ ನಡೆಯುತ್ತಿದ್ದ ಶಾಲೆಗೆ ಮನೋಜ್​ ತೆರಳುತ್ತಿದ್ದರು. ಆಗಿನ ಕಾಲದಲ್ಲಿ ಅಮಿತಾಭ್​ ಭಚ್ಚನ್ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಮನೋಜ್ ​ಮೇಲೆ ಅಮಿತಾಭ್ ನಟನೆ ಪ್ರಭಾವ ಬೀರಿತ್ತು. ಅಮಿತಾಭ್ ಎಂದರೆ ಅವರಿಗೆ ಬಹಳ ಇಷ್ಟ. ಆಗಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮನೋಜ್. 17ನೇ ವಯಸ್ಸಿಗೆ ದೆಹಲಿಗೆ ಬಂದರು. ಅಲ್ಲಿ ಕಾಲೇಜಿಗೆ ಹೋಗುವುದರ ಜತೆಗೆ ಥಿಯೇಟರ್​ಗೂ ತೆರಳಿ ನಟನೆ ಕಲಿಯಲು ಆರಂಭಿಸಿದರು. ಈ ವಿಚಾರ ಮನೆಯವರಿಗೆ ತಿಳಿದಾಗ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.

ಪ್ರತಿಷ್ಠಿತ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ಗೆ ಸೇರಬೇಕೆಂಬುದು ಮನೋಜ್ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಅವರು ಮಾಡಿದ್ದರು. ಈ ವಿಚಾರ ಅವರ ಗೆಳೆಯರಿಗೆ ಗೊತ್ತಾಗಿತ್ತು. ಹೀಗಾಗಿ ಮನೋಜ್ ಅವರನ್ನು ಬಿಟ್ಟು ಫ್ರೆಂಡ್ಸ್ ಎಲ್ಲಿಯೂ ಹೋಗುತ್ತಲಿರಲಿಲ್ಲ. ಈ ವಿಚಾರವನ್ನು ಮನೋಜ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಿದೆ.

ಮನೋಜ್​ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸೋ ಅವಕಾಶ ಕೈ ತಪ್ಪಿ ಹೋಗಿತ್ತು. ನಂತರ ನಿಧಾನವಾಗಿ ನೆಲೆ ಕಂಡುಕೊಂಡರು. ಈ ಪಯಣದಲ್ಲಿ ಮನೋಜ್​ ಅವರು ಬಿಹಾರ ಮೂಲದ ಹುಡುಗಿಯನ್ನು ಮದುವೆ ಕೂಡ ಆದರು. ಇದು ಅರೇಂಜ್ ಮ್ಯಾರೇಜ್ ಆಗಿತ್ತು. ಆದರೆ, ಮನೋಜ್​ ಕಷ್ಟದ ದಿನಗಳಲ್ಲಿ ಹೆಂಡತಿ ಬಿಟ್ಟು ಹೋದರು. ನಂತರ ನಟಿ ಶಬಾನಾ ರಾಜಾ ಅವರನ್ನು ಮನೋಜ್​ ಮದುವೆ ಆದರು.

ಈಗ ಮನೋಜ್ ವೆಬ್​ ಸೀರಿಸ್, ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಮನೋಜ್​ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳ ಕಡೆಗಳಿಂದ ಅವರಿಗೆ ಬರ್ತ್​ಡೇ ವಿಶ್​ಗಳು ಬರುತ್ತಿವೆ.

TV9 Kannada


Leave a Reply

Your email address will not be published.