ಕಷ್ಟಪಟ್ಟು ಪ್ರವರ್ಧಮಾನಕ್ಕೆ ಬಂದ ಆಯುಷ್ಮಾನ್ ಖುರಾನಾ ಇಂದು ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಒಬ್ಬರು | Ayushman Khurrana whos struggled initially is now one of the highest paid actors

‘ಗುಲಾಬೊ ಸಿತಾಬೊ’ ಚಿತ್ರವನ್ನು ನೀವು ನೋಡಿರಬಹುದು. ಒಂದು ಪುರಾತನ ಹವೇಲಿಯ ಗೂನು ಬೆನ್ನಿನ ವೃದ್ದ ಮಾಲೀಕನಾಗಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನೀಡಿದ ಅಭಿನಯ ಬಹಳ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಅವರೊಬ್ಬ ಶ್ರೀಮಂತ ಪ್ರತಿಭೆಯ ಅನ್ನೋದು ಇಡೀ ವಿಶ್ವವೇ ಒಪ್ಪಿಕೊಂಡಿರುವ ಸತ್ಯ. ‘ಗುಲಾಬೊ ಸಿತಾಬೊ’ ಚಿತ್ರದ ಅದೇ ಹವೇಲಿಯಲ್ಲಿ ಕೆಳ ಮಧ್ಯಮ ವರ್ಗ ಕುಟುಂಬದ ಒಬ್ಬ ಸದಸ್ಯನಾಗಿ ಸದಾ ಅಮಿತಾಬ್ ಜೊತೆ ತಕರಾರು ತೆಗೆಯುವ ಪಾತ್ರದಲ್ಲಿ ಭಾರಿ ಪ್ರತಿಭಾವಂತ ಮತ್ತು 2019 ರ ರಾಷ್ಟ್ರಪ್ರಶಸ್ತಿ ವಿಜೇತ ನಟ ಆಯುಷ್ಮಾನ್ ಖುರಾನಾ ನೀಡಿದ ನಟನೆ ಜನರನ್ನು ದಿಗ್ಮೂಢರನ್ನಾಗಿಸಿತ್ತು.

ಹಾಗೆ ನೋಡಿದರೆ ಬಿಗ್ ಬಿ ಎದುರು ನಟಿಸುವ ನಟರು ಸಪ್ಪೆಯೆನಿಸುತ್ತಾರೆ. ಆದರೆ ಆಯುಷ್ಮಾನ್ ಮಾತ್ರ ತನ್ನೆದಿರು ಈ ಯುಗದ ಮಹಾನ್ ನಟನಿದ್ದಾರೆ ಎನ್ನುವ ಅಂಶವನ್ನು ಮರೆತು ಅದ್ಭುತವಾಗಿ ನಟಿಸಿದ್ದಾರೆ. ತಮ್ಮ ಚಿತ್ರಗಳಲ್ಲಿ ಇವರು ಹೆಚ್ಚಾಗಿ ಜನಸಾಮಾನ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆಯುಷ್ಮಾನ್ 2012 ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವರಾದರೂ ಪ್ರವರ್ಧಮಾನಕ್ಕೆ ಬಂದಿದ್ದು 2017 ರಿಂದ.

ಉತ್ತಮ ಗಾಯಕ ಬರಹಗಾರ ಮತ್ತು ಟಿವಿ ಹೋಸ್ಟ್ ಆಗಿರುವ ಆಯಷ್ಮಾನ್ ರಾಷ್ಟ್ರ ಪ್ರಶಸ್ತಿ ಜೊತೆ 4 ಪಿಲ್ಮ್ಫೇರ್ ಅವಾರ್ಡ್​ಗಳನ್ನೂ ತಮ್ಮವಾಗಿಸಿಕೊಂಡಿದ್ದಾರೆ. ತಮ್ಮ ಕರೀಯರ್​ನ  ಮೊದಲ 5 ವರ್ಷಗಳ ಕಾಲ ಸ್ಟ್ರಗಲ್ ಮಾಡಿದ ಆಯಷ್ಮಾನ್ ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. 2020 ರಲ್ಲಿ ಟೈಮ್ ಪತ್ರಿಕೆ ಪಟ್ಟಿಮಾಡಿದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಲಿಸ್ಟ್​​ನಲ್ಲಿ ಆಯುಷ್ಮಾನ್ ಒಬ್ಬರಾಗಿದ್ದರು.

ಉಡುಗೆ ತೊಡುಗೆಯ ವಿಷಯ ಬಂದಾಗ ಆಯುಷ್ಮಾನ್ ಸೂಟ್​​ಗಳನ್ನು ಜಾಸ್ತಿ ಇಷ್ಟಪಡುತ್ತಾರೆ. ನೂರಾರು ಸೂಟ್​ಗಳ ಸಂಗ್ರಹ ಅವರಲ್ಲಿದೆಯಂತೆ. ಅವಾರ್ಡ್ ಸಮಾರಂಭಗಳಲ್ಲಿ, ಟಿವಿಯಲ್ಲಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವಾಗ ಅವರು ಸೂಟ್​ಗಳಲ್ಲಿ ಮಿಂಚುತ್ತಾರೆ. ವಸ್ತ್ರ ವಿನ್ಯಾಸಕಾರರು ಹೇಳುವ ಪ್ರಕಾರ ರಣವೀರ್ ಸಿಂಗ್ ಮತ್ತು ಆಯುಷ್ಮಾನ್ ಅವರ ಸ್ಟೈಲ್ ಸ್ಟೇಟ್ಮೆಂಟ್ ಒಂದೇ ತೆರನಾಗಿದೆ.

ಇದನ್ನೂ ಓದಿ:  Madhagaja: ‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ

TV9 Kannada

Leave a comment

Your email address will not be published. Required fields are marked *