‘ಕಸದಬುಟ್ಟಿ’ ಸೇರಿದ ಮೋದಿ ಮಹತ್ವಾಂಕಾಕ್ಷೆ.. ಲೋಕಲ್​​ ಕಳ್ಳರ ಬ್ರಹ್ಮಾಂಡ ಭ್ರಷ್ಟಚಾರ ಬಯಲು


ಡಸ್ಟ್​ಬಿನ್ ಖರೀದಿ ವಿಚಾರದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕಸದ ವಿಚಾರದಲ್ಲೂ ಹಣ ಹೊಡೆಯುತ್ತಿದ್ದಾರೆ ಈ ಭ್ರಷ್ಟರು. ಕಸಮುಕ್ತ ಗ್ರಾಮಗಳನ್ನು ಮಾಡಲು ಹೊರಟವರಿಗೆ ಶಾಕ್ ಆಗಿದ್ದು, ಕಸ ನಿರ್ವಹಣೆಗಾಗಿ ಮೀಸಲಿಟ್ಟಿದ್ದ ಹಣ ಭ್ರಷ್ಟರ ಪಾಲಾಗಿದೆ. ಜಿಲ್ಲಾ ಪಂಚಾಯತ್​​​, ಗ್ರಾಮ ಪಂಚಾಯತ್​​ ಸಿಬ್ಬಂದಿಯಿಂದಲೇ ನಡೀತಿದೆ ಹಗಲು ದರೋಡೆ.

ಇನ್ನು, ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ ನುಂಗಣ್ಣರು. ಈಗ ನ್ಯೂಸ್​ಫಸ್ಟ್​ ಸ್ಟಿಂಗ್ ಆಪರೇಷನ್​ನಲ್ಲಿ ಎಲ್ಲವೂ ಬಯಲು ಆಗಿದೆ. ಸ್ವಚ್ಛ ಭಾರತ್ ಯೋಜನೆಯಲ್ಲಿ ಕೋಟಿ, ಕೋಟಿ ಗುಳುಂ ಆಗಿದೆ. ಹತ್ತಾರು ರೂಪಾಯಿ ಡಸ್ಟ್​​ಬಿನ್​ಗಳಲ್ಲಿ ಕೋಟಿ ಹಗರಣ ನಡೆದಿದೆ. ಮಾರುಕಟ್ಟೆ ದರಕ್ಕಿಂತ ಒನ್​​ ಟು ಡಬಲ್​ನಲ್ಲಿ ಬುಟ್ಟಿ ಖರೀದಿ ಮಾಡಲಾಗಿದೆ. 60 ರೂಪಾಯಿಗೆ ಸಿಗುವ ಕಸದ ಬುಟ್ಟಿಗೆ ₹135 ಹಾಕಿ ವಂಚನೆ ಮಾಡಲಾಗಿದೆ. ಹೌದು, ಧಾರವಾಡ ಜಿಲ್ಲೆಯ ಬೇರೆ ಬೇರೆ ಏಜೆನ್ಸಿಗಳ ಮೂಲಕ ಖರೀದಿಸಲಾಗಿದೆ. ಮಾರುಕಟ್ಟೆ ದರವೇ ಬೇರೆ, ಇವರು ಖರೀದಿಸೋ ಬೆಲೆ ಬೇರೆ ಇದೆ.

ಹೇಗೆ ನಡೆಯುತ್ತೆ ಅವ್ಯವಹಾರ..?

ಡಸ್ಟ್ ಬಿನ್​ಗಳನ್ನು ಖರೀದಿಸಿರುವ ಬೆಲೆಯೇ ಒಂದು, ಮಾರುಕಟ್ಟೆಯಲ್ಲಿ ಡಸ್ಟ್​ಬಿನ್​ಗಳ ಬೆಲೆಯೇ ಮತ್ತೊಂದು. ಗ್ರಾಮ ಪಂಚಾಯತ್​​ ಡಸ್ಟ್ ಬಿನ್ ಖರೀದಿಸಿರುವ ಅಸಲಿ ಬೆಲೆ ಬೇರೆ ಇದೆ. ರಿಟೇಲ್ ಮಾರುಕಟ್ಟೆಯಲ್ಲಿ ಡಸ್ಟ್​ಬಿನ್​ಗಳ ಬೆಲೆ ₹30-70 ಇದ್ದರೆ, ಇವರು ಮಾತ್ರ ಇಂತಹ ಡಸ್ಟ್ ಬಿನ್​ಗಳಿಗೆ 115-135 ರೂ ಕೊಟ್ಟು ಖರೀದಿ ಮಾಡಿದ್ದಾರೆ. 1 ಡಸ್ಟ್ ಬಿನ್ ಮೇಲೆ 70 ರೂಪಾಯಿ ಉಳಿಸಿಕೊಳ್ಳಲಾಗುತ್ತೆ. ಅಂಗಡಿಯವರು ಖಾಲಿ ಕೊಟೇಷನ್​ ಕೊಟ್ಟು ಮಾರ್ತಾರೆ. ಕೊಟೇಷನ್​ನಲ್ಲಿ ಎಷ್ಟು​ ಬೇಕಾದ್ರೂ ಬರೆದುಕೊಳ್ಳಲು ಅವಕಾಶ ಮಾಡಿಕೊಡ್ತಾರೆ.

ಜಿಲ್ಲಾ ಪಂಚಾಯತ್​​ ಮತ್ತು ಗ್ರಾಮ ಪಂಚಾಯತ್​ ಭ್ರಷ್ಟರು

ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಲೂಟಿಕೋರರು ಕೋಟಿ, ಕೋಟಿ ಗುಳುಂ ಮಾಡಿದ್ದಾರೆ. ಉತ್ತಮ ದರ್ಜೆಯ ಡಸ್ಟ್​ಬಿನ್​ಗಳು ಖರೀದಿಸಲು ಸರ್ಕಾರ ಆದೇಶ ಮಾಡಿದೆ. ಆದರೆ ಇವರು ಮಾತ್ರ ಕಳಪೆ ಗುಣಮಟ್ಟದ ಡಸ್ಟ್​ಬಿನ್ ಖರೀದಿಸಿ ಹಣ ಗುಳುಂ ಮಾಡಿದ್ದಾರೆ. ಇದರ ಅಕ್ರಮ ನ್ಯೂಸ್ ಫಸ್ಟ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಮಾರ್ಕೆಟ್​ ರೇಟ್​ಗೂ​ ತರಿಸ್ತಿರೋ ಬೆಲೆ​ಗೂ ಬಹಳ ವ್ಯತ್ಯಾಸ ಇದೆ. ಖುದ್ದು ಗ್ರಾಮ ಪಂಚಾಯ್ತಿ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲು ಆಗಿದ್ದಾರೆ. ಕುಂದಗೋಳ ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಚಾಕಲಬ್ಬಿ ಗ್ರಾಮದ ಗ್ರಾಮ ಪಂಚಾಯತ್ ಪಿಡಿಒ ಮತ್ತು ಲೂಟಿಕೋರ ನದಾಫ್​​ ಅಕ್ರಮದಲ್ಲಿ ಪಾಲುದಾರ. ಇನ್ನು, ಶಿರೂರ್ ಪಿಡಿಒ ಡಿ.ಎಂ ಕಾಲವಾಡವೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮೊದಲ ಹಂತದಲ್ಲಿ ಡಸ್ಟ್​ಬಿನ್ ಹಂಚಿಕೆ ಮಾಡಿ ಕಮಿಷನ್ ಪಡೆದಿದ್ದರು. ಎರಡನೇ ಹಂತದಲ್ಲಿ ಹಂಚಿಕೆ ಮಾಡಲು ಹೊರಟ್ಟಿದ್ದರು ಕಾಲವಾಡ. ಅದಕ್ಕಾಗಿ ಡಸ್ಟ್ ಬಿನ್​ಗಳನ್ನು ತರಿಸಿ ಪಂಚಾಯತಿಯಲ್ಲಿ ಗುಡ್ಡೆ ಇಡಲಾಗಿದೆ. ಬರೋಬ್ಬರಿ 2.15 ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ಕನ್ನ ಹಾಕಲಾಗಿದೆ.

News First Live Kannada


Leave a Reply

Your email address will not be published.