– ಸೈದಾಪುರ ಪಿಎಸ್‍ಐ ಭೀಮರಾಯ ಕಾರ್ಯಾಚರಣೆ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಜೊಳದಡಗಿ ಗ್ರಾಮದಿಂದ ಸೈದಾಪುರ ಮೂಲಕ ಹೈದರಾಬಾದ್ ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಜಿಲ್ಲೆಯಿಂದ ಟ್ರಕ್ ಮೂಲಕ 18 ಗೋವುಗಳನ್ನು ಹೈದರಾಬಾದ್ ಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೈದಾಪುರ ಪೊಲೀಸರು, ವಾಹನವನ್ನು ಮಾರ್ಗ ಮಧ್ಯೆ ತಡೆಗಟ್ಟಿ ಗೋವುಗಳ ರಕ್ಷಣೆ ಮಾಡಿದ್ದಾರೆ.

ರಕ್ಷಣೆಯಾದ ಗೋವುಗಳನ್ನು ಗುರು ರಾಘವೇಂದ್ರ ಗೋ ಶಾಲೆಗೆ ಒಪ್ಪಿಸಲಾಗಿದೆ. ಪಿಎಸ್‍ಐ ಭೀಮರಾಯ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಗೋಹತ್ಯೆ ನಿಷೇಧ ಕಾನೂನಿನಡಿ ಪ್ರಕರಣ ದಾಖಲು ಮಾಡಲಾಗಿದೆ.

The post ಕಸಾಯಿಖಾನೆಗೆ ಕಳ್ಳಸಾಗಣೆಯಾಗುತ್ತಿದ್ದ 18 ಗೋವುಗಳ ರಕ್ಷಣೆ appeared first on Public TV.

Source: publictv.in

Source link