ಲಕ್ನೋ: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕರಿಛಾಯೆ ಹೆಚ್ಚಿಸುತ್ತಿದೆ. ಈ ನಡುವೆ ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚನೆ ಕೊಡುತ್ತಿದೆ. ಇದರ ಪ್ರಕಾರ ಉತ್ತರ ಪ್ರದೇಶದಲ್ಲಿ ಸಾಧು ಒಬ್ಬರು ಕಹಿಬೇವು ಮತ್ತು ತುಳಸಿಯಿಂದ ತಯಾರು ಮಾಡಿದ ಹರ್ಬಲ್ ಮಾಸ್ಕ್ ಧರಿಸುವ ಮೂಲಕ ನೋಡುಗರ ಗಮನಸೆಳೆಯುತ್ತಿದ್ದಾರೆ.

ಸಾಧು ಈ ರೀತಿ ಮಾಸ್ಕ್ ಬಳಸುತ್ತಿರುವ ವೀಡಿಯೋವನ್ನು ರೂಪಿನ್ ಶರ್ಮಾ ಹೆಸರಿನ ಐಪಿಎಸ್ ಅಧಿಕಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಮಾಸ್ಕ್ ಕಂಡು ಹಲವು ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.

ಸಾಧು ಮಾಸ್ಕ್ ಧರಿಸಿಕೊಂಡು ಈ ವೀಡಿಯೋದಲ್ಲಿ ಮಾತನಾಡುತ್ತಿದ್ದು, ಮಾಸ್ಕ್ ನ್ನು ಕಹಿಬೇವು ಮತ್ತು ತುಳಸಿಯ ಎಲೆಯನ್ನು ಉಪಯೋಗಿಸಿಕೊಂಡು ಧರಿಸುತ್ತಿದ್ದೇನೆ. ಇದು ಔಷಧಿಯ ಗುಣಹೊಂದಿದ್ದು, ಇತರ ಬಟ್ಟೆಯ ಮತ್ತು ಸರ್ಜಿಕಲ್ ಮಾಸ್ಕ್ ಗಿಂತ ಇದು ಉತ್ತಮವಾಗಿದೆ. ಕಹಿಬೇವು ಮತ್ತು ತುಳಸಿ ಪ್ರತಿ ರೋಗಕ್ಕೂ ರಾಮಬಾಣವಾಗಿದೆ ಎಂದು ವಿವರಿಸಿದ್ದಾರೆ.

ಇತ್ತ ಸಾಧು ಮಾಸ್ಕ್ ಕಂಡು ದಂಗಾಗಿರುವ ನೆಟ್ಟಿಗರು ನಾವು ಒಮ್ಮೆ ಬಳಸಿ ನೋಡೋಣ ಇದು ನಿಜವಾಗಿಯೂ ವಿಶೇಷವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

The post ಕಹಿಬೇವು, ತುಳಸಿಯಿಂದ ಮಾಸ್ಕ್ – ನೆಟ್ಟಿಗರನ್ನು ದಂಗುಬಡಿಸಿದ ಸಾಧು appeared first on Public TV.

Source: publictv.in

Source link