ಫ್ಲೋರಿಡಾ: ಭೂಮಿ ಮೇಲಿರೋ ಎಲ್ಲಾ ಜೀವಿಗಿಳಿಗೂ ಬದುಕೋ ಹಕ್ಕಿದೆ. ಅದು ಕ್ರಿಮಿ, ಕೀಟ, ಪ್ರಾಣಿ, ಪಕ್ಷಿ, ಗಿಡ, ಮರ, ಮನುಷ್ಯ ಇತ್ಯಾದಿ.. ಹೀಗೆ ಯಾವುದೇ ಜೀವಿಯಾದ್ರೂ ಅವುಗಳಿಗೆ ಬದುಕೋ ಹಕ್ಕಿದೆ. ಆದ್ರೆ, ಇಷ್ಟರಲ್ಲಿ ಯಾವುದೇ ಒಂದು ಜೀವಿ ಕಷ್ಟದಲ್ಲಿ ಸಿಲುಕಿದ್ರೆ ಅವನ್ನ ರಕ್ಷಿಸೋ ಕೆಲಸ ಮಾಡೋದು ಕೂಡ ಅಷ್ಟೇ ಅನಿವಾರ್ಯ. ಅದಕ್ಕೆ ಮಾನವೀಯತೆ ಅಂತಾರೆ. ಈಗ, ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನೋ ನಿಮ್​ ಪ್ರಶ್ನೆಗೆ ಉತ್ತರ ಹೇಳ್ತೀವಿ ಕೇಳಿ.

​​

ಫ್ಲೋರಿಡಾದಲ್ಲಿ ಕಾಂಕ್ರೀಟ್​ನ ಮಧ್ಯೆ ಒಂದು ಕುದುರೆ ಸಿಕ್ಕಿಬಿದ್ದಿತ್ತು. ಆ ಕುದುರೆಯ ರಕ್ಷಣೆ ಮಾಡೋದಕ್ಕೆ, ಫ್ಲೋರಿಡಾ ರಕ್ಷಣೆ ಪಡೆ ಹೆಲಿಕಾಪ್ಟರ್​ನ ಕರೆಸಿ ಆ ಕುದುರೆಯನ್ನ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ ರೋಚಕ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಾಕಿದ್ದು, ಸದ್ಯ ಅದು ಸಾಮಾಜಿಕ ಜಾಲತಾಣದಲ್ಲಿ​ ವೈರಲ್​ ಆಗ್ತಿದೆ. ಕುದುರೆಗೆ ಹಗ್ಗ ಕಟ್ಟಿ ಹೆಲಿಕಾಪ್ಟರ್​​ನಿಂದ ಮೇಲೆತ್ತಿ ಕುದರೆಯನ್ನ ಏರ್​ಲಿಫ್ಟ್ ಮಾಡಲಾಗಿದೆ.

 

 

The post ಕಾಂಕ್ರೀಟ್ ಮಧ್ಯೆ ಸಿಲುಕಿ ಕುದುರೆ ಪರದಾಟ.. ರಕ್ಷಣಾ ಪಡೆಯಿಂದ ರೋಚಕ ಯಶಸ್ವಿ ಕಾರ್ಯಾಚರಣೆ appeared first on News First Kannada.

Source: newsfirstlive.com

Source link