ಕಾಂಗರೂನಾಡಿಗೆ ಗೀಟರ್​ನಲ್ಲಿ ಕಳ್ಳಸಾಗಾಣೆ ಮಾಡ್ತಿದ್ದ ಭಾರೀ ಮೊತ್ತದ ಡ್ರಗ್ಸ್​ ಸೀಜ್


ಬೆಂಗಳೂರು: ದೇವನಹಳ್ಳಿ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ವಿನೂತನ ಡ್ರಗ್ ಜಾಲವನ್ನು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ ಪತ್ತೆ ಮಾಡಿದ್ದು, 50 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ತಮಿಳುನಾಡಿನಿಂದ ತಿರುಚ್ಚಿಯ ಕೊರಿಯರ್ ಏಜೆನ್ಸಿಯಲ್ಲಿ ಗೀಟರ್​ ಬುಕ್ ಮಾಡಲಾಗಿತ್ತು. ಇದು ಬೆಂಗಳೂರಿಗೆ ಬಂದು ಇಲ್ಲಿಂದ ಆಸ್ಟ್ರೇಲಿಯಾಗೆ ಹೋಗುವ ಪ್ಲಾನ್ ಮಾಡಲಾಗಿತ್ತು. ಇದರಲ್ಲಿ ಅಡಗಿಟ್ಟಿಸಿದ್ದ ಡ್ರಗ್ಸ್​ಅನ್ನು ಕೆಐಎಎಲ್ ನಿಂದ ಆಸ್ಟ್ರೇಲಿಯಾಗೆ ಏರ್ ಕಾರ್ಗೋ ಮೂಲಕ ಕಳ್ಳಸಾಗಣಿಕೆ ಮಾಡಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ್ದ ಇಂಟಲಿಜೆನ್ಸ್ ಅಧಿಕಾರಿಗಳು 3 ಕೆಜಿ ತೂಕದ 50 ಲಕ್ಷ ರೂಪಾಯಿ ಮೌಲ್ಯದ ಸ್ಯೂಡೋಫೆಡ್ರಿನ್ ನಿಷೇಧಿತ ಮಾದಕ ದ್ರವ್ಯ ವಶಕ್ಕೆ ಪಡೆದಿದ್ದಾರೆ.

ಇನ್ನು ಡ್ರಗ್ಸ್​ ಅನ್ನು ಕಳ್ಳ ಸಾಗಾಣೆ ಮಾಡಲು ಡಿಫರೆಂಟಾಗಿ ಐಡಿಯಾ ಮಾಡಿದ್ದ ಖದೀಮರು, ಕೆಂಪು ಗಿಟಾರ್ ನ ಕಪ್ಪು ಬಣ್ಣದ ಅಂಚಿನಲ್ಲಿ ಡ್ರಗ್ಸ್ ಅಡಗಿಸಿಟ್ಟು ಸಾಗಾಣೆ ಮಾಡಲು ಯತ್ನಿಸಿದ್ದರು. ಕಳ್ಳ ಸಾಗಾಣೆ ಸುಳಿವು ಸಿಕ್ಕ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ.

News First Live Kannada


Leave a Reply

Your email address will not be published. Required fields are marked *