ಕಾಂಗೋದಿಂದ ಬಂದ ವ್ಯಕ್ತಿಯನ್ನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಅರೆಸ್ಟ್! | Police have arrested a gang accused of kidnapping a person in Bengaluru


ಕಾಂಗೋದಿಂದ ಬಂದ ವ್ಯಕ್ತಿಯನ್ನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಅರೆಸ್ಟ್!

ಆರೋಪಿ ಉಪೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು: ಸುಮಾರು 1 ಕೋಟಿ ಲೋನ್ ಆಸೆಗೆ ಕಾಂಗೋದಿಂದ ಬಂದ ವ್ಯಕ್ತಿಯನ್ನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ನ ಪೊಲೀಸರು ಬಂಧಿಸಿದ್ದಾರೆ. ಇಂದಿರಾನಗರ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಉಪೇಂದ್ರ, ಸಮೀರ್ ಹಾಗೂ ನೀಲಮ್ಮ ಬಂಧಿತ ಆರೋಪಿಗಳು. ಬಂಧಿತರು ನಾಗರಾಜ್ ಎಂಬಾತನನ್ನ ಅಪಹರಿಸಿ 4.45 ಲಕ್ಷ ಹಣ ವಸೂಲಿ ಮಾಡಿದ್ದರು.

ನಾಗರಾಜ್ ಆರೋಪಿ ಉಪೇಂದ್ರನಿಗೆ ಪರಿಚಯದವನಾಗಿದ್ದ. ಲೋನ್​ಗಾಗಿ ಅಲೆಯುತ್ತಿದ್ದ ನಾಗರಾಜ್​ಗೆ ಲೋನ್ ಕೊಡಿಸುವುದಾಗಿ ಆರೋಪಿ ಉಪೇಂದ್ರ ಹೇಳಿದ್ದ. ಉಪೇಂದ್ರಗೆ ದಾಖಲೆಗಳನ್ನು ನೀಡಿ ಕೆಲಸಕ್ಕಾಗಿ ನಾಗರಾಜ್ ಕಾಂಗೋಗೆ ತೆರಳಿದ್ದ. ನಾಗರಾಜ್​ಗಾಗಿ ಉಪೇಂದ್ರ ಲೋನ್ ಅಪ್ಲೈ ಮಾಡಿದ್ದ. ನಾಗರಾಜ್​ಗೆ 1 ಕೋಟಿಯವರೆಗೂ ಲೋನ್ ಸಿಗಲಿದೆ ಅಂತ ಬ್ಯಾಂಕಿನ ಸಿಬ್ಬಂದಿ ತಿಳಿಸಿದ್ದರು. ಅದಕ್ಕಾಗಿ ನಾಗರಾಜ್ ಹೊಂದಿರುವ 5 ಲಕ್ಷ ಲೋನ್ ಕ್ಲಿಯರ್ ಆಗಬೇಕು ಅಂದಿದ್ರು.

1 ಕೋಟಿ ಆಸೆಗೆ ನಾಗರಾಜ್ ಹೊಂದಿದ್ದ 5 ಲಕ್ಷ ಸಾಲವನ್ನು ಉಪೇಂದ್ರ ತೀರಿಸಿದ್ದ. ಕೆಲವೇ ದಿನಗಳಲ್ಲಿ ಕೊವಿಡ್ನಿಂದ ಕೆಲಸ ಕಳೆದುಕೊಂಡು ನಾಗರಾಜ್ ಭಾರತಕ್ಕೆ ಬಂದಿದ್ದ. ಈ ವೇಳೆ ಲೋನ್ ಹಣ ಬಿಡುಗಡೆ ವಿಚಾರವಾಗಿ ಬ್ಯಾಂಕಿನವರು ಸಹಿ ಪಡೆಯಲು ಕರೆದಿದ್ದರು. ಬ್ಯಾಂಕಿಗೆ ಹೋದಾಗ 1 ಕೋಟಿ ಸಾಲಕ್ಕೆ ಅಪ್ಲೈ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ನಾಗರಾಜ್ ಲೋನ್ ಪಡೆಯಲು ನಿರಾಕರಿಸಿದ್ದ. ನಾಗರಾಜ್ ನಿರ್ಧಾರದಿಂದ ಕಂಗಾಲಾಗಿದ್ದ ಉಪೇಂದ್ರ, ತಾನು ಖರ್ಚು ಮಾಡಿರುವ 5 ಲಕ್ಷಕ್ಕೆ ಬಡ್ಡಿ ಸಮೇತ ನೀಡುವಂತೆ ಧಮ್ಕಿ ಹಾಕಿದ್ದ.

ಹಣ ನೀಡಲು ನಿರಾಕರಿಸಿದಾಗ ಸಮೀರ್ ಎಂಬಾತನಿಗೆ ಉಪೇಂದ್ರ ಸುಪಾರಿ ನೀಡಿದ್ದ. ಸಮೀರ್ ಮೂಲಕ ನಾಗರಾಜನನ್ನ ಕಿಡ್ನಾಪ್ ಮಾಡಿಸಿದ್ದ. ನಾಗರಾಜ್ ನನ್ನ ಮುದ್ದಿನಪಾಳ್ಯದ ನೀಲಮ್ಮ ಎಂಬಾಕೆಯ ಮನೆಯಲ್ಲಿರಿಸಿ ಹಲ್ಲೆ ಮಾಡಿದ್ದರು. ಅಕೌಂಟಿನಲ್ಲಿ 4 ಲಕ್ಷದ 45 ಸಾವಿರ ಹಣ ಕಿತ್ತುಕೊಂಡು ಆರೋಪಿಗಳು ಬಿಟ್ಟು ಕಳಿಸಿದ್ದರು. ಇಂದಿರಾನಗರ ಠಾಣೆಯಲ್ಲಿ ನಾಗರಾಜ್ ದೂರು ನೀಡಿದ್ದ. ದೂರಿನನ್ವಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ನಕ್ಷತ್ರ ಆಮೆಗಳ ಮಾರಾಟಕ್ಕೆ ಯತ್ನಿಸಿದ್ದ ಆರೋಪಿ ಸೆರೆ
ನಕ್ಷತ್ರ ಆಮೆಗಳ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬೆಂಗಳೂರಿನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ತಮಿಳುನಾಡು ಮೂಲದ ಮುತ್ತು ಹಮೀದ್ ಮೀರಾನ ಬಂಧಿಸಿ 401 ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಬೀಳಗಿ ಶುಗರ್ಸ್​ ಕಾರ್ಖಾನೆ ಸಮೀಪ ರೈತ ಬಣಗಳಿಂದ ಪರ-ವಿರೋಧ ಹೋರಾಟ

ಮಧ್ಯರಾತ್ರಿ ಹಸುವನ್ನು ರಕ್ಷಿಸಿದ ಪಂಜಾಬ್ ಮುಖ್ಯಮಂತ್ರಿ; ಸಾಮಾಜಿಕ ಮಾಧ್ಯಮದಲ್ಲಿ ಚನ್ನಿ ಕಾರ್ಯಕ್ಕೆ  ಶ್ಲಾಘನೆ

TV9 Kannada


Leave a Reply

Your email address will not be published. Required fields are marked *