ಕಾಂಗ್ರೆಸ್​ನವರು ಯಾವ ಕ್ಯಾಂಪೇನ್​ ಬೇಕಾದ್ರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ: ಸಿಎಂ ಬೊಮ್ಮಾಯಿ | No matter what campaign Congress does, truth will win in the end: CM Bommai


ಪೇಸಿಎಂ ಅಭಿಯಾನಕ್ಕೆ ಬಿಜೆಪಿ ಕೌಂಟರ್ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಏನೇಲ್ಲ ಮಾಡಬೇಕೊ ಎಲ್ಲವನ್ನೂ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್​ನವರು ಯಾವ ಕ್ಯಾಂಪೇನ್​ ಬೇಕಾದ್ರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ: ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಯಿ

ಬೆಂಗಳೂರು: ಕಾಂಗ್ರೆಸ್​ನವರು ಯಾವ ಕ್ಯಾಂಪೇನ್ (campaign)​ ಬೇಕಾದ್ರೂ ಮಾಡಲಿ. ಕೊನೆಗೆ ಸತ್ಯಕ್ಕೆ ಜಯ ಸಿಗುತ್ತೆ ಎಂದು ‘ಪೇ ಸಿಎಂ’ ಪೋಸ್ಟರ್​ ಅಭಿಯಾನ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ಪೇಸಿಎಂ ಅಭಿಯಾನಕ್ಕೆ ಬಿಜೆಪಿ ಕೌಂಟರ್ ಏನು ಎಂಬ ಪ್ರಶ್ನೆಗೆ ಏನೇಲ್ಲ ಮಾಡಬೇಕೊ ಎಲ್ಲವನ್ನೂ ಮಾಡ್ತೀವಿ ಎಂದು ಹೇಳಿದರು. ಎರಡು ವಾರ ಅಧಿವೇಶನ ನಡೆದಿದೆ. ಸದನದಲ್ಲಿ ಅತಿವೃಷ್ಟಿ ಬಗ್ಗೆ ಚರ್ಚೆ ನಡೆಸಲಾಯಿತು. ವಿಪಕ್ಷದವರು ಎತ್ತಿರುವ ವಿಚಾರಗಳು ಅವರಿಗೇ ತಿರುಗೇಟು ನೀಡಲಾಗಿದೆ. ಗುತ್ತಿಗೆದಾರರ ಸಂಘದ ಪತ್ರದ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಇವತ್ತು ನಾನು ಗುತ್ತಿಗೆದಾರರ ಸಂಘಕ್ಕೆ ಕೇಳುತ್ತೇನೆ ದಾಖಲೆ ಕೊಡಿ ಎಂದು. ದಾಖಲೆ ಕೊಟ್ರೆ ನೇರವಾಗಿ ಲೋಕಾಯುಕ್ತ ತನಿಖೆಗೆ ನೀಡ್ತೇನೆ. ಪುರಾವೆ ಇಲ್ಲದೇ ಮಾತಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ. ಕಾಂಗ್ರೆಸ್​​ನವರೇ ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಕಮಿಷನ್​ ವಿಚಾರ ಸದನದ ಆರಂಭದ ದಿನವೇ ತೆಗೆದುಕೊಳ್ಳಬಹುದಿತ್ತು. 40% ಕಮಿಷನ್​ ವಿಚಾರ ಸದನದ ಕೊನೇ ದಿನ ಏಕೆ ಕೈಗೆತ್ತಿಕೊಂಡ್ರು. 40% ಕಮಿಷನ್​ ಆರೋಪ ವಿಚಾರದಲ್ಲಿ ನಾವು ಮುಕ್ತರಿದ್ದೇವೆ. ಈಗಲೂ ದಾಖಲೆ, ದೂರು ನೀಡಿದ್ರೆ ನಾವು ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

ಆಧಾರ ನೀಡದೇ ಒಂದು ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಬರೀ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ. 40% ಕಮಿಷನ್​​ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ವಿ, ದಾಖಲೆ ನೀಡಿಲ್ಲ. ಆದರೆ ಯಾರೂ ಕೂಡ ದಾಖಲೆ ನೀಡಿಲ್ಲ ಎಂದು ಬೊಮ್ಮಾಯಿ ಹೇಳಿದರು. ಅವರು ದೂರು ಕೊಟ್ಟರೆ ನಾಳೆಯೇ ತನಿಖೆ ಮಾಡಿಸಲು ಸಿದ್ಧ. ಸುಮ್ಮನೆ ಆರೋಪ ಮಾಡಿ ಹೋಗುವುದು ಬೇಡ.  ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಈ ಕುರಿತು ವರಿಷ್ಠರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ರಾವೆ ಇಲ್ಲದೇ ಮಾತನಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ

ಅವರ ಅವಧಿಯಲ್ಲಿ ಮಾಡಿಲ್ಲದನ್ನು ನಮ್ಮ ಸರ್ಕಾರ ಮಾಡಿದೆ. ಪೋಲಿಸ್ ಕಾನ್‌ಟೇಬಲ್ ಹಗರಣದಲ್ಲಿ ಆರೋಪಿಗಳ ಬಂಧನಕ್ಕೆ ಆಗ ಪ್ರಾಸಿಕ್ಯೂಷನ್ ಅವಕಾಶ ಕೊಡಲಿಲ್ಲ. ಅವ್ರು ಕೂಡ ಶಿಕ್ಷೆಗೆ ಒಳಪಡಬೇಕಿತ್ತು. ಟೀಚರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಗುತ್ತಿಗೆದಾರರ ವಿಷಯದಲ್ಲಿ ಪದೇ ಪದೇ ಹೇಳಿದ್ರೆ ಜನ ನಂಬುತ್ತಾರೆ ಎಂದು ಭಾವಿಸಿದ್ದಾರೆ. ಒಂದು ಪ್ರಕರಣಕ್ಕೆ ದಾಖಲೆ ಕೊಡಬೇಕು. ಯಾರು ಕಮಿಷನ್ ಕೇಳಿದ್ರು ಅಂತ ಈಗಲೂ ದಾಖಲೆ ಕೊಡಿ, ಲೋಕಾಯುಕ್ತಕ್ಕೆ ಕೊಡಿ ಅಂತ ಈಗಲೂ ಹೇಳ್ತೀನಿ. ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪುಸ್ತಕವನ್ನೇ ಮಾಡಿದ್ದೇವೆ. ಯಾವ ಕ್ಯಾಂಪೇನ್ ಆದ್ರೂ ಮಾಡಲಿ ಸತ್ಯಕ್ಕೆ ಜಯ ಸಿಗುತ್ತದೆ. ಪುರಾವೆ ಇಲ್ಲದೇ ಮಾತನಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ.

ಅವ್ರ ಕೆಪಿಸಿಸಿ ಕಚೇರಿಯಲ್ಲಿ ಕೆಲವರು ಮಾತನಾಡಿದ್ರು. ರಮೇಶ್ ಕುಮಾರ್ ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದ್ರು. ಈಗ ಚರ್ಚೆಗೆ ಸಿದ್ದವಿಲ್ಲ ಅಂತ ನಮ್ಮ ಮೇಲೆ ಆರೋಪ‌ ಮಾಡ್ತಾರೆ. ಒಂದ್ಸಲ ಚರ್ಚೆಯಾಗಲಿ ಎಂದು ನಾವು ಕೂತಿದ್ವಿ. ಹಿಡ್ ಆಂಡ್ ರನ್ ಆಗಿದೆ ಅವ್ರದು. ವಿಪಕ್ಷದಲ್ಲೇ ಹೊಂದಾಣಿಕೆ ಇಲ್ಲದಂತಾಗಿದೆ. ಗುತ್ತಿಗೆದಾರರ ವಿಚಾರವನ್ನು ಕೊನೆಯಲ್ಲಿ ತೆಗೆದುಕೊಂಡರು. ಯಾಕೆಂದ್ರೆ ಅದ್ರಲ್ಲಿ ಸತ್ಯ ಇಲ್ಲ ಅಂತ ಅವ್ರಿಗೂ ಗೊತ್ತು. ಸರ್ಕಾರ ಈಗಲೂ ಸ್ಪಷ್ಟವಾಗಿದೆ. ದೂರು ನೀಡಿದ್ರೆ ತನಿಖೆ ಮಾಡಲು ಸಿದ್ದವಿದೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ಒಂದು ಕಡೆ, ನ್ಯಾಯಮೂರ್ತಿ ಕೆಂಪಣ್ಣ ಅವರ ರಿಪೋರ್ಟ್ ಒಂದು ಕಡೆ. ಇದರ ಬಗ್ಗೆ ಚರ್ಚೆಯಾಗಬೇಕು. ನ್ಯಾಯಮೂರ್ತಿ ಕೆಂಪಣ್ಣನವರ ರಿಪೋರ್ಟ್ ಬಗ್ಗೆ ಚರ್ಚೆಯಾಗಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಎಲ್ಲವೂ ಗೊತ್ತಾಗಲಿದೆ. ಈಗಾಗಲೇ ಮುನಿರತ್ನ ಅವ್ರ ಮೇಲೆ ಕೇಸ್ ಹಾಕಿದ್ದಾರೆ. ಏನಾದ್ರೂ ಇದ್ದಿದ್ರೆ ಕೋರ್ಟ್ ಮುಂದೆ ಹೇಳಲಿ ನ್ಯಾಯಮೂರ್ತಿ ಕೆಂಪಣ್ಣನವರ ಬಗ್ಗೆ ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.