ಮಂಗಳೂರು: ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ ನಿಮ್ಮನ್ನ ಆಸ್ಪತ್ರೆಗೆ ಕಳುಹಿಸೋಕೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸೋಕು ಗೊತ್ತಿದೆ ಎಂದು ಎಸ್ಡಿಪಿಐ(Social Democratic Party of India) ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಕಾಂಗ್ರೆಸ್ಸಿಗರಿಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ.
ಕಾಂಗ್ರೆಸ್ ಪಕ್ಷದವರು ನಿರಾಶ ಭಾವನೆಗೆ ಹೋಗಿರೋದನ್ನ ಗಮನಿಸ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್ಡಿಪಿಐ ಪ್ರತಿನಿಧಿಗಳು ಬೆಳೆಯುತ್ತಿದ್ದಾರೆ. ಇದನ್ನ ಕಂಡು ಅವರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ ಯಾರೋ ಕಾಂಜಿಪೀಂಜಿ ಗಾಂಜಾದವರನ್ನ ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಡ್ರಗ್ಸ್ ಜಾಲ..? ಪ್ರತಿಷ್ಠಿತ ಕಾಲೇಜಿನ 5 ವಿದ್ಯಾರ್ಥಿಗಳು ಅರೆಸ್ಟ್
The post ‘ಕಾಂಗ್ರೆಸ್ಸಿಗರನ್ನು ಸ್ಮಶಾನಕ್ಕೆ ಕಳಿಸೋಕೂ ಗೊತ್ತಿದೆ’ ಕೈ ನಾಯಕರಿಗೆ ಎಚ್ಚರಿಕೆ ನೀಡಿದ SDPI ಮುಖಂಡ appeared first on News First Kannada.