ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೆ ಕನ್ನಡಿಗರ ಸರ್ಕಾರ ಇರಲ್ಲ, ತಾಲಿಬಾನ್ ಸರ್ಕಾರ ಬರುತ್ತೆ -ಸಂಸದ ಪ್ರತಾಪ್ ಸಿಂಹ | If Congress gets power there will be Taliban government rule says pratap simha in koppal jana swaraj yatra


ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೆ ಕನ್ನಡಿಗರ ಸರ್ಕಾರ ಇರಲ್ಲ, ತಾಲಿಬಾನ್ ಸರ್ಕಾರ ಬರುತ್ತೆ -ಸಂಸದ ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

ಕೊಪ್ಪಳ: ವಿಧಾನಸಭೆ ಉಪ ಚುನಾವಣೆ ಬಳಿಕ ಇದೀಗ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಸರ್ಕಾರ ತಯಾರಿ ಆರಂಭಿಸಿದೆ. ಸದ್ಯ ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಜನ ಸ್ವರಾಜ್ ಯಾತ್ರೆ ಆರಂಭಿಸಿದೆ. ಕೊಪ್ಪಳದಲ್ಲಿ ನಡೆದ ಜನ ಸ್ವರಾಜ್ ಯಾತ್ರೆಯಲ್ಲಿ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಕ್ಯಾಪ್ಟನ್. ಆದರೆ ಕಾಂಗ್ರೆಸ್ ಪಕ್ಷದ ಕ್ಯಾಪ್ಟನ್ ಯಾರು ಎಂದು ಕಾಂಗ್ರೆಸ್ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರದ್ದು ಒಂದೊಂದು ಟೀಂ ಇದೆ. ಸಿದ್ದರಾಮಯ್ಯ ಟೀಂಗೆ ನ್ಯಾಷನಲ್ ಟ್ರಾವೆಲ್ಸ್ ವೈಸ್ ಕ್ಯಾಪ್ಟನ್‌. ಡಿಕೆಶಿ ಟೀಮ್‌ಗೆ ಫರ್ಜಿ ಕೆಫೆಯ ಪುಂಡ ವೈಸ್ ಕ್ಯಾಪ್ಟನ್. ಇವರಿಗೆ ಅಧಿಕಾರ ಕೊಟ್ಟರೆ ಕನ್ನಡಿಗರ ಸರ್ಕಾರ ಇರಲ್ಲ. ತಾಲಿಬಾನ್ ಸರ್ಕಾರ ಬರುತ್ತೆ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಇನ್ನು ಇದೇ ವೇಳೆ ಪ್ರತಾಪ್ ಸಿಂಹ, ಪ್ರಿಯಾಂಕ್ ಖರ್ಗೆಯನ್ನು ಮತ್ತೆ ಕೆಣಕಿದ್ದಾರೆ. ನಾನು ಅಪ್ಪ, ಅಮ್ಮನ ಹೆಸರು ಯಾರಿಗೂ ಹೇಳಿಕೊಂಡಿಲ್ಲ. ನಾನು ಅಪ್ಪನ ಹೆಸರು ಹೇಳಿಕೊಂಡು ಬೆಳೆದಿಲ್ಲ. ನಾನು ಪೇಪರ್ ಸಿಂಹನೇ ಹೌದು ಎಂದಿದ್ದಾರೆ. ಅಲ್ಲಿ ಸೋನಿಯಾ ಗಾಂಧಿಯ ಪುತ್ರಿ ಪ್ರಿಯಾಂಕಾ ಗಾಂಧಿ ಇಲ್ಲಿ ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಇದ್ದಾರೆ. ಪ್ರಿಯಾಂಕಾ ಅಂತಾ ಕರೆದರೆ ಮಹಿಳೆಯರೇ ತಿರುಗಿನೋಡ್ತಾರೆ. ಪ್ರಿಯಾಂಕ್ ಖರ್ಗೆ ಹೆಸರಿನಲ್ಲಿಯೇ ದಾಸ್ಯ ಇದೆ. ನೀವು ಸೋನಿಯಾ ಮಗಳ ಹೆಸರು ಇಟ್ಟುಕೊಂಡಿದ್ದೀರಾ? ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಶೋಷಿತ ವರ್ಗದ ನಿಮಗೆ ರಾಜ್ಯಾದ್ಯಂತ ಬಂಗಲೆ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಏಕೆ ಮಾಹಿತಿ ಕೊಟ್ಟಿಲ್ಲ? ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ಬಗ್ಗೆ ಕೇಳುತ್ತಾರೆ. ರಫೇಲ್ ಹಗರಣದಲ್ಲಿ ತಾಯಿ-ಮಗ ಇರುವುದು ಗೊತ್ತಾಯ್ತಾ ಅದಕ್ಕಾಗಿ ಈಗ ಬಿಟ್ ಕಾಯಿನ್ ಹಿಡಿದುಕೊಂಡಿದ್ದಾರೆ. ಕಾಂಗ್ರೆಸ್ ಹುಟ್ಟಿರೋದು ಬ್ರಿಟಿಷರಿಗೆ, ಬಿಜೆಪಿ RSSಗೆ ಜನಿಸಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಾಸರಗೋಡಿನ ಸ್ವರ್ಗದಲ್ಲಿರುವ ದೇವಾಲಯಕ್ಕೆ ದಲಿತರ ಪ್ರವೇಶ; ನೂರಾರು ವರ್ಷಗಳ ಅಸಮಾನತೆ ಅಂತ್ಯ

TV9 Kannada


Leave a Reply

Your email address will not be published. Required fields are marked *