ದೆಹಲಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಮಧ್ಯಂತರ ಚುನಾವಣೆ ವಿಚಾರ ಬಿಜೆಪಿಗೆ ಬಿಟ್ಟಿದ್ದು, ಬಿಜೆಪಿಯಿಂದ ಆಡಳಿತ ನಡೆಸೋದಕ್ಕಾಗುತ್ತಿಲ್ಲ. ಬಿಜೆಪಿ ನಾಯಕರೇ ಅಕ್ರಮದ ಬಗ್ಗೆ ಮಾತಾಡಿ ನಮ್ಮ ಮಾತಿಗೆ ಪುಷ್ಟಿ ನೀಡಿದ್ದಾರೆ.. ನಾವೀಗ ಜಿಲ್ಲಾ ಪಂಚಾಯತಿ, ತಾಲೂಕು ಮತ್ತು ಬಿಬಿಎಂಪಿ ಚುನಾವಣೆಗೆ ಸಿದ್ಧವಾಗಿದ್ದೇವೆ ಎಂದರು.

ವ್ಯಕ್ತಿ ಪೂಜೆ ಇಲ್ಲ ಪಕ್ಷ ಪೂಜೆ ಮುಖ್ಯ
ಸಿಎಂ ಸ್ಥಾನದ ಜಮೀರ್ ಹೇಳಿಕೆ ವಿಚಾರ ಚರ್ಚೆಯೇ ಅಲ್ಲ. ಸಿಎಂ ಸ್ಥಾನ ಬಿಜೆಪಿಯವರು ಮಾತಾಡಬೇಕು, ನಮ್ಮ ಪಕ್ಷದವರಲ್ಲ. ಸಿಎಂ ಸ್ಥಾನ ಖಾಲಿಯ ಇಲ್ಲ, ಮಾತಾಡೋದೇ ಬೇಡ. ನಾನು ಪ್ರತಿಜ್ಞಾ ವಿಧಿ ತೆಗೆದುಕೊಂಡ ದಿನವೇ ಹೇಳಿದ್ದೆ, ವ್ಯಕ್ತಿ ಪೂಜೆ ಇಲ್ಲ ಪಕ್ಷ ಪೂಜೆ ಎಂದು.

ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಈಗ ಮಾತಾಡಲ್ಲ. ಮಾತಾಡುವ ಸಂದರ್ಭದಲ್ಲಿ ಮಾತಾಡ್ತೇನೆ. ಇಂತಹ ಚಿಕ್ಕ ವಿಚಾರವೆಲ್ಲ ಹೈಕಮಾಂಡ್ ಗಮನಕ್ಕೆ ತರಲ್ಲ ಎಂದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡ್ತಾರೆ ಎಂಬ ಮಾತು ಕೇಳಿಬರುತ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ.. ಬಿಜೆಪಿ ಪಾರ್ಟಿಯಲ್ಲಿ ಬ್ಲಾಕ್ ಮೇಲ್ ನಡೀತಾನೆ ಇದೆ ಅಂದ್ರು. ಕಾಂಗ್ರೆಸ್​ಗೆ ರಮೇಶ್ ಜಾರಕಿಹೊಳಿ ಬಂದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅರ್ಜಿ ಹಾಕಲಿ ನೋಡೋಣ’ ಅಂದ್ರು.

ಯಾವುದೇ ಗುಂಪಿಗೆ ಅವಕಾಶ ಕೊಡಲ್ಲ
ಸಿಎಂ‌ ಸ್ಥಾನದ ಬಗ್ಗೆ ನಮ್ಮ ಪಕ್ಷದವರು ಮಾತನಾಡಬಾರದು. ಸಿಎಂ‌ ಸ್ಥಾನದ ಬಗ್ಗೆ ದೆಹಲಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಿಎಂ‌ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಖಾಲಿ ಇಲ್ಲದೇ ಇರುವ ಸ್ಥಾನಕ್ಕೆ ನಮಗ್ಯಾಕೆ ಪೈಪೋಟಿ? ನಮ್ಮಲ್ಲಿ ಯಾವುದೇ ಗುಂಪಿಲ್ಲ. ಯಾವುದೇ ಗುಂಪಿಗೆ ಅವಕಾಶ ಕೊಡಲ್ಲ. ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಲ್ಲ. ನನ್ನ ಹೆಸರನ್ನು ಯಾರೂ ಹೇಳುವುದು ಬೇಡ. ಮೊದಲು ಪಕ್ಷ ಕಟ್ಟಬೇಕು, ಚುನಾವಣೆ ಗೆಲ್ಲಬೇಕು ಎಂದರು.

The post ಕಾಂಗ್ರೆಸ್​ಗೆ ರಮೇಶ್ ಜಾರಕಿಹೊಳಿ ಮತ್ತೆ ಬಂದರೆ..? ಶಾಕಿಂಗ್ ಉತ್ತರ ನೀಡಿದ ಡಿಕೆಎಸ್ appeared first on News First Kannada.

Source: newsfirstlive.com

Source link