ಬೆಂಗಳೂರು: ‘ಮುಂದಿನ ಸಿಎಂ’ ವಿವಾದದ ಜಟಾಪಟಿಯ ಮಧ್ಯೆಯೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಳೆ ಜಂಟಿ ಪ್ರವಾಸ ಕೈಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತದಲ್ಲಿ ಮೃತರಾದವರ ಮನೆಗೆ ತೆರಳಿ ಸಾಂತ್ವನ ಹೇಳಲಿದ್ದಾರೆ. ಡಿಕೆ ಶಿವಕುಮಾರ್ ಇಂದು ಕೊರೊನಾ ಸಂಬಂಧ ಕಾರ್ಯಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ರು. ಈ ವೇಳೆ ಮಾಹಿತಿ ನೀಡಿರುವ  ಶಿವಕುಮಾರ್.. ಸಿದ್ದರಾಮಯ್ಯನವರ ಜೊತೆ ಚಾಮರಾಜನಗರಕ್ಕೆ ಭೇಟಿ ನೀಡೋದಾಗಿ ತಿಳಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ವಿವಾದದ ಬಿಸಿ ಇನ್ನೂ ಜೀವಂತವಾಗಿರುವಾಗಲೇ ಉಭಯ ನಾಯಕರು ಜಂಟಿ ಪ್ರವಾಸ ಕೈಗೊಂಡಿರೋದು ಹುಬ್ಬೇರುವಂತೆ ಮಾಡಿದೆ. ಜಂಟಿ ಪ್ರವಾಸದ ಮೂಲಕ ತಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಅನ್ನೋದನ್ನ ಸಾರಲು ಮುಂದಾದ್ರಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.

The post ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ವಿವಾದ; ನಾಳೆ ಡಿಕೆಎಸ್​-ಸಿದ್ದರಾಮಯ್ಯ ‘ಜಂಟಿ ಪ್ರವಾಸ’ appeared first on News First Kannada.

Source: newsfirstlive.com

Source link