ಬೆಂಗಳೂರು: ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕೆಂಡಾಮಂಡಲರಾಗಿದ್ದಾರೆ.​

ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಸುರೇಶ್.. ರಾಜ್ಯದಲ್ಲೀಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ.  ಮೊದಲು ಚುನಾವಣೆ ಎದುರಿಸಲಿ, ಮಾತನಾಡಿದ ಶಾಸಕರೆಲ್ಲ ಅಧಿಕಾರಕ್ಕಾಗಿ ಬಂದವರು. ಕಾಂಗ್ರೆಸ್ ಶಿಸ್ತು ಗೊತ್ತಿದ್ದವರು ಹೀಗೆ ಮಾತನಾಡಲ್ಲ. ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ ಎಂದು ಕಿಡಿಕಾರಿದರು.

ಈಗಿರುವ ಶಾಸಕರೆಲ್ಲ ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. ಚುನಾವಣೆ ಎದುರಿಸಿ ಇವರು ಶಾಸಕರಾಗಬೇಕು, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಧ್ಯೆ ಇವರಿಗೆ ಏನು ಕೆಲಸ? ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲಿ. ಮುಂದಿನ ಚುನಾವಣೆ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈಗ ಮಾತನಾಡುವವರೆಲ್ಲ, ಆ ಸಭೆಗೆ ಬರಲಿ ಎಂದಿದ್ದಾರೆ.

ನಾವು ಅವರಿಗೆ ಸವಾಲು ಹಾಕುತ್ತೇವೆ.. ಶಾಸಕರ ಹೇಳಿಕೆಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ. ಒಳಗೊಳಗೆ ಇವರು ಉರ್ಕೊಂಡರೆ ನಾವೇನು ಮಾಡಲು ಸಾಧ್ಯ? ಎಂದು ಹರಿಹಾಯ್ದರು.

The post ಕಾಂಗ್ರೆಸ್​ನಲ್ಲಿ ಮುಂದಿನ CM ಸಿದ್ದರಾಮಯ್ಯ ಗಲಾಟೆ: ಶಾಸಕರ ವಿರುದ್ಧ ಡಿಕೆ ಸುರೇಶ್ ಕೆಂಡಾಮಂಡಲ appeared first on News First Kannada.

Source: newsfirstlive.com

Source link