ಕಾಂಗ್ರೆಸ್​​ಗೇ ತಿರುಗುಬಾಣವಾದ​ ಬಿಟ್​​ಕಾಯಿನ್​ ಬಾಂಬ್; ಹ್ಯಾರಿಸ್ ಪುತ್ರ ನಲಪಾಡ್​​ಗೆ ಏನು ಲಿಂಕ್​ ?


ಬೆಂಗಳೂರು: ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ವಿರುದ್ಧ ಸಿಸಿಬಿ ಅಧಿಕಾರಿಗಳು ಇತ್ತ ಜಾರ್ಜ್​ಶೀಟ್ ಸಲ್ಲಿಕೆ ಮಾಡಿದ್ರೆ ಅತ್ತ ಕಾಂಗ್ರೆಸ್​ ಬುಡಕ್ಕೂ ಇದರ ನಂಟು ತಳಕು ಹಾಕಿಕೊಳ್ಳುತ್ತಿದೆ.

ಹೌದು ಬಿಟ್​ ಕಾಯಿನ್​ ಕೇಸ್​ನಲ್ಲಿ ಆಡಳಿತಾರೂಢ ಬಿಜೆಪಿಯ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿರುವ ಕೈ ಪಾಳಯಕ್ಕೆ ಇದೀಗ ಬಿಟ್ ಕಾಯಿನ್​ ಅಸ್ತ್ರ ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಸದ್ಯ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ, ಶಾಸಕ ಎನ್.ಎ ಹ್ಯಾರಿಸ್ ಪುತ್ರ ಉಮರ್ ನಲಪಾಡ್‌ ಹೆಸರು ಕೇಳಿ ಬಂದಿದೆ.

ಹ್ಯಾರಿಸ್ 2ನೇ ಮಗ ಉಮರ್ ನಲಪಾಡ್‌ಗೂ ಶ್ರೀಕಿಗೂ ನಂಟು ಇರೋದಾಗಿ ಮಾಹಿತಿಗಳು ಲಭ್ಯವಾಗುತ್ತಿದ್ದು ನಲಪಾಡ್ ಜತೆ ಶ್ರೀಕಿ ಚಾರ್ಟೆಡ್ ಫ್ಲೈಟ್‌ಗಳಲ್ಲಿ ಓಡಾಡಿದ್ದ ಎಂದು ಮತ್ತೊಬ್ಬ ಆರೋಪಿ ರಾಬಿನ್ ಸ್ವಇಚ್ಛಾ  ಹೇಳಿಕೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ.

ಇದನ್ನೂ ಓದಿ:ವಿಷ್ಣುಭಟ್ ಕೇಸ್; ಆ ಎರಡಕ್ಷರ ಟೈಪ್​ ಮಾಡಿದ್ರೆ ಬರ್ತಿತ್ತಂತೆ ಡ್ರಗ್!​

ಆರೋಪಿ ರಾಬಿನ್ ಸ್ವಇಚ್ಛಾ ಮಾಹಿತಿ ಬಹಿರಂಗಗೊಂಡಿದ್ದು ಉಮರ್ ನಲಪಾಡ್-ಶ್ರೀಕಿ ನಂಟು ಹೊಂದಿದ್ದನಂತೆ. ಅದಕ್ಕೆ ಪೂರಕ ಎಂಬಂತೆ ಶ್ರೀಕಿ ಜತೆ ಮುಂಬೈ, ದೆಹಲಿ, ಜೈಪುರ, ಚಂಡೀಗಢದಲ್ಲಿ ಓಡಾಟ ನಡೆಸಿದ್ದಾನೆಂತೆ. ಜೊತೆಗೆ ದೆಹಲಿಯ ಶಾಂಗ್ರೀಲಾದಲ್ಲಿ ಇಬ್ಬರು ಒಟ್ಟಿಗೆ ತಂಗಿದ್ದರು ಎನ್ನಲಾಗಿದೆ.

ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಬಿರುಗಾಳಿಯನ್ನೇ ಎಬ್ಬಿಸಿದೆ. ನಾಯಕರ ಕುರಿತ ಹೇಳಿಕೆಗಳೊಂದಿಗೆ ‘ಬಿಟ್’ ವಾಕ್ಸಮರ ತಾರಕಕ್ಕೇರಿದೆ. ಎಷ್ಟೇ ತಡಕಾಡಿದರೂ ಕೈ ನಾಯಕರ ಕೈಗೆ ‘ಬಿಟ್’ ಡಾಕ್ಯುಮೆಂಟ್ಸ್ ಸಿಕ್ತಿಲ್ಲ. ಒಂದು ವೇಳೆ ದಾಖಲೆಗಳು ಕೈಗೆಟುಕಿದರೆ ‘ಬಿಟ್’ ಎಂಬ ಅಸ್ತ್ರವೇ ಕಾಂಗ್ರೆಸ್​​​ ಪಾಳಯಕ್ಕೆ ಬ್ರಹ್ಮಾಸ್ತ್ರವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಸದ್ಯ ಚಂಡು ಇದೀಗ ಕಾಂಗ್ರೆಸ್​ ಅಂಗಳಕ್ಕೆ ಬಂದಿದ್ದು ಮತ್ತೆ ಯಾವ ರೀತಿ ತಿರುವು ಪಡೆಯುತ್ತದೆಯೋ ಕಾದು ನೋಡಬೇಕು..

ಇದನ್ನೂ ಓದಿ:ಸಿಎಂ ಗಾದಿವರೆಗೆ ಬಂದು ನಿಂತ ‘ಬಿಟ್’ ಅಸ್ತ್ರ; ‘ಕೈ’ಗೆ ದಾಖಲೆಗಳು ಸಿಕ್ಕರೆ ಅದೇ ಬ್ರಹ್ಮಾಸ್ತ್ರ..!

News First Live Kannada


Leave a Reply

Your email address will not be published.