ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ರೌಡಿಗಳು, ಗೂಂಡಾಗಳು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ, ಈಗಿನ ಕಾಂಗ್ರೆಸ್ ಮತ್ತು ಆಗಿನ ಕಾಂಗ್ರೆಸ್ ಬೇರೆ. ಅಂದಿನ ಕಾಂಗ್ರೆಸ್ಸಿಗರು ದೇಶಪ್ರೇಮಿಗಳು, ಇಂದಿನ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೊಹಮ್ಮದ್ ನಲಪಾಡ್ ರೌಡಿಗಳು ಎಂದು ಕಿಡಿಕಾರಿದರು.
ಡಿ.ಕೆ ಶಿವಕುಮಾರ್ ಮತ್ತು ಮೊಹಮ್ಮದ್ ಇಬ್ಬರು ಜೈಲಿಗೆ ಹೋಗಿ ಬಂದವರು. ಕಾಂಗ್ರೆಸ್ ಅಂದ್ರೆ ನನಗೆ ನೆನಪಾಗೋದು ಗಾಂಧೀಜಿ, ಸ್ವಾತಂತ್ರ್ಯ ವೀರ ಸಾವರ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರು. ಈಗ ಈ ಕಾಂಗ್ರೆಸ್ಗೆ ಗೂಂಡಾಗಳು ಸೇರಿ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಿಜವಾಗಲೂ ದೇಶಕ್ಕಾ ಹೋರಾಟ ನಡೆಸಿದೆ. ಅಂದಿನ ಕಾಂಗ್ರೆಸ್ಸಿಗರು ದೇಶಕ್ಕಾಗಿ ಹೋರಾಟ ಮಾಡಿದರೆ, ಇಂದಿನ ಕಾಂಗ್ರೆಸ್ನವ್ರ ರೌಡಿಸಂ ಮಾಡ್ತಾರೆ ಎಂದು ಹೇಳಿದರು.