ಕಾಂಗ್ರೆಸ್​​, ಬಿಜೆಪಿಗೆ ಲಖನ್​​ ಸೆಡ್ಡು; ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಸ್ಥಳಿಯ ಸಂಸ್ಥೆಗಳಿಂದ ಡಿಸೆಂರ್​ 10 ರಂದು ನಡೆಯುವ ವಿಧಾನ ಪರಿಷತ್​ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೋಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಲಖನ್ ಜಾರಕಿಹೋಳಿ ನಾಮಪತ್ರ ಸಲ್ಲಿಕೆ ಮಾಡಿದ್ದು ಬರೋಬ್ಬರಿ 25 ಸಾವಿರ ಜನರನ್ನು ಒಟ್ಟೂಗೂಡಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗಾವಿಯ ಸರ್ದಾರ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಅವರಿಗೆ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಪುತ್ರ ಅಮರನಾಥ ಜಾರಕಿಹೋಳಿ, ಮಾವ ಅಂಬಿರಾವ್ ಪಾಟೀಲ್ ಸಾಥ್ ನೀಡಿದ್ದಾರೆ.

ಇತ್ತ ಸಹೋದರನ ನಾಮಪತ್ರದ ವೇಳೆ ರಮೇಶ್ ಜಾರಕಿಹೋಳಿ, ಬಾಲಚಂದ್ರ ಜಾರಕಿಹೋಳಿ ಗೈರಾಗಿದ್ದು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಕೆ ವೇಳೆ ಹಾಜರಾಗಿದ್ದಾರೆ.

 

News First Live Kannada

Leave a comment

Your email address will not be published. Required fields are marked *