‘ಕಾಂಗ್ರೆಸ್​ ಇಲ್ಲದಿದ್ರೆ ಏನಾಗ್ತಿತ್ತು?’ ಅಂತ ಪ್ರಶ್ನಿಸಲಾಗಿದೆ.. 10 ಬಾಣ ಬಿಟ್ಟ ಪ್ರಧಾನಿ ಮೋದಿ


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗಳ ಭಾಷಣದ ಮೇಲಿನ ‘ವಂದನಾ ನಿರ್ಣಯದ ಮೇಲೆ’ ರಾಜ್ಯಸಭೆಯಲ್ಲಿ ಇವತ್ತು ಮಾತನಾಡಿದರು.

ದೇಶವು ಇಂದು ಸ್ವಾತಂತ್ರ್ಯೋತ್ಸವದ ‘ಅಮೃತ ಮಹೋತ್ಸವ’ ಆಚರಿಸುವ ಸಂಭ್ರಮದಲ್ಲಿದೆ. ಈ 75 ವರ್ಷಗಳ ಹಾದಿಯಲ್ಲಿ ದೇಶಕ್ಕೆ ದಿಕ್ಕು ಮತ್ತು ಅಭಿವೃದ್ಧಿಯ ವೇಗವನ್ನು ನೀಡಲು ಅನೇಕ ಪ್ರಯತ್ನಗಳು ನಡೆದಿವೆ. ಇದೆಲ್ಲವನ್ನೂ ಗಣನೆಯಲ್ಲಿಟ್ಟುಕೊಂಡು ನಾವು, ಒಳ್ಳೆಯದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ. ನ್ಯೂನತೆಗಳನ್ನು ನಿವಾರಿಸುವ ಬಗ್ಗೆ ಯೋಚಿಸಬೇಕಿದೆ. ಈ ಎರಡು ಅಂಶಗಳಿಗೆ ಮಹತ್ವವನ್ನ ನೀಡಿದರೆ, ಮುಂಬರುವ 25 ವರ್ಷಗಳಲ್ಲಿ ದೇಶಕ್ಕೆ 75 ವರ್ಷಗಳ ವೇಗಕ್ಕಿಂತ ಹೆಚ್ಚಿನದನ್ನ ನೀಡಬಹುದು.
ನರೇಂದ್ರ ಮೋದಿ, ಪ್ರಧಾನಮಂತ್ರಿ

ಹೀಗೆ ಮಾತು ಮಾತು ಮುಂದುವರಿಸಿ ಕಾಂಗ್ರೆಸ್​ ವಿರುದ್ಧ ನೇರವಾಗಿ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ವಿರುದ್ಧ ಮೋದಿ ಬಿಟ್ಟ 10 ಬಾಣಗಳು ಇಲ್ಲಿವೆ.

 • ಅಟ್ಯಾಕ್​ ನಂಬರ್ 1: ಕುಟುಂಬ ರಾಜಕಾರಣ ಇಲ್ಲದೇ ಕಾಂಗ್ರೆಸ್​ ಇಲ್ಲ
 • ಅಟ್ಯಾಕ್​ ನಂಬರ್ 2: ಕಾಂಗ್ರೆಸ್​ ಇರದಿದ್ದರೆ ಸಿಖರ ಹತ್ಯಾಖಂಡ ಸಂಭವಿಸುತ್ತಿರಲಿಲ್ಲ
 • ಅಟ್ಯಾಕ್​ ನಂಬರ್ 3: ಅಪಖ್ಯಾತಿ, ಅಸ್ಥಿರಗೊಳಿಸುವಿಕೆ, ಡಿಸ್​ಮಿಸ್​ ಮಾಡೋದ್ರಲ್ಲಿ ನಂಬಿಕೆ
 • ಅಟ್ಯಾಕ್​ ನಂಬರ್ 4: ಹಿಂದುಗಳಿಲ್ಲದಿದ್ರೆ ಕಾಂಗ್ರೆಸ್​ ನಿರ್ಮಾನ ಆಗುತ್ತಿತ್ತು
 • ಅಟ್ಯಾಕ್​ ನಂಬರ್ 5: ರಾಜವಂಶದ ಆಚೆ ಕಾಂಗ್ರೆಸ್​ ಯೋಚಿಸಲು ಸಾಧ್ಯವೇ ಇಲ್ಲ
 • ಅಟ್ಯಾಕ್​ ನಂಬರ್ 6: ಕಾಂಗ್ರೆಸ್​ ಅರ್ಬನ್ ನಕ್ಸಲ್ ರೀತಿ
 • ಅಟ್ಯಾಕ್​ ನಂಬರ್ 7: ಕಾಂಗ್ರೆಸ್​ ಇಲ್ಲದಿದ್ರೆ ದೇಶದಲ್ಲಿ ತುರ್ತು ಪರಿಸ್ಥಿತಿ ಸಂಭವಿಸುತ್ತಿರಲಿಲ್ಲ
 • ಅಟ್ಯಾಕ್​ ನಂಬರ್ 8: ಕಾಂಗ್ರೆಸ್ ಒಂದು ಸಂಸ್ಥೆ ಎಂದು ಕರೆಯಬಹುದು​
 • ಅಟ್ಯಾಕ್​ ನಂಬರ್ 9: ಕಾಂಗ್ರೆಸ್​ ಇಲ್ಲದಿದ್ರೆ ಪ್ರಜಾಪ್ರಭುತ್ವದ ವಿನಾಶದ ಅಪಾಯ ಎದುರಿಸುತ್ತಿರಲಿಲ್ಲ
 • ಅಟ್ಯಾಕ್​ ನಂಬರ್ 10: ಯಾರು ಸಿಎಂ ಆಗಿರ್ತಾರೋ ಅವರನ್ನ ವಜಾ ಮಾಡೋದೇ ಕಾಂಗ್ರೆಸ್ ಕೆಲಸ

ಮೋದಿ ಭಾಷಣ ಪ್ರಮುಖ ಅಂಶಗಳು

 • ಕಳೆದ 100 ವರ್ಷಗಳಲ್ಲಿ ಮನುಕುಲ ಕೊರೊನಾದಂತಹ ಸಾಂಕ್ರಾಮಿಕ ಮಾರಿಯನ್ನ ಕಂಡಿರಲಿಲ್ಲ. ಈ ಬಿಕ್ಕಟ್ಟು ಇನ್ನೂ ಮುಂದುವರಿಯುತ್ತದೆ. ಇದರಿಂದ ಇಡೀ ವಿಶ್ವವೇ ಪರದಾಡುತ್ತಿದೆ. ಆದರೆ ಭಾರತ ಕೊರೊನಾ ವಿರುದ್ಧ ಸಿಡಿದು ನಿಂತು ಕೊರೊನಾದಂತಹ ಮಾರಿಯನ್ನ ಎದುರಿಸಿದೆ.
 • ಕೊರೊನಾ ಅವಧಿಯಲ್ಲಿ ದೇಶದ 80 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಉಚಿತ ಪಡಿತರ ನೀಡಲಾಗಿದೆ. ಇಡೀ ಪ್ರಪಂಚದ ಮುಂದೆ ನಮ್ಮ ಸರ್ಕಾರ ಮಾದರಿಯಾಗಿದೆ. ನಮ್ಮ ಸರ್ಕಾರ ಬಡವರಿಗೆ ಪಡಿತರ ನೀಡುವ ಕೆಲಸ ಮಾಡುತ್ತಿದೆ.
 • ಸರ್ಕಾರ ಕೃಷಿಗೆ ವಿಶೇಷ ಗಮನ ನೀಡಿದೆ. ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರ ಎಂಎಸ್‌ಎಂಇ ವಲಯ ಮತ್ತು ಕೃಷಿಗೆ ವಿಶೇಷ ಗಮನ ಹರಿಸಿದೆ. ಇದರಿಂದ ರೈತರಿಗೆ ಹೆಚ್ಚಿನ MSP ದೊರೆಯಿತು. ರೈತರ ಹಣ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ.
 • 2021 ರಲ್ಲಿ ಒಂದು ಕೋಟಿ 20 ಲಕ್ಷ ಜನರು EPFO ​​ನೊಂದಿಗೆ ಸಂಬಂಧ ಹೊಂದಿದ್ದಾರೆ. ಇವೆಲ್ಲವೂ ಔಪಚಾರಿಕ ಉದ್ಯೋಗಗಳಾಗಿವೆ. ಇವರಲ್ಲಿ 65 ಲಕ್ಷ ಮಂದಿ 18-25 ವರ್ಷ ವಯೋಮಾನದವರು. ಕೋವಿಡ್ ನಿರ್ಬಂಧಗಳು ತೆರೆವು ಮಾಡಿದ ಬಳಿಕ ನೇಮಕಾತಿ ದ್ವಿಗುಣಗೊಂಡಿದೆ.
 • ಇಡೀ ಜಗತ್ತು ಹಣದುಬ್ಬರವನ್ನು ಎದುರಿಸುತ್ತಿರುವಾಗ, ಅದನ್ನು ತಡೆಯಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ. ಅಮೆರಿಕ 40 ವರ್ಷಗಳಲ್ಲೇ ಅತಿ ಹೆಚ್ಚು ಹಣದುಬ್ಬರವನ್ನು ಎದುರಿಸುತ್ತಿದೆ. ಬ್ರಿಟನ್ 30 ವರ್ಷಗಳ ದಾಖಲೆಯ ಹಣದುಬ್ಬರವನ್ನು ಎದುರಿಸುತ್ತಿದೆ. ಯುಪಿಎ ಅವಧಿಯಲ್ಲಿ ಹಣದುಬ್ಬರ ಎರಡಂಕಿ ಮುಟ್ಟಿತ್ತು.

News First Live Kannada


Leave a Reply

Your email address will not be published.