ಗದಗ: ಕೊರೊನಾದಿಂದ ಮೃತಪಟ್ಟ ಕಾಂಗ್ರೆಸ್ ನಾಯಕನ ಅಂತಿಮ ಸಂಸ್ಕಾರದಲ್ಲಿ ನೂರಾರು ಜನ ಪಾಲ್ಗೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕೊರೊನಾ ನಿಯಮವನ್ನ ಗಾಳಿಗೆ ತೂರಿರೋದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಗದಗ ಜಿಲ್ಲೆಯ ಕಾಂಗ್ರೆಸ್​ನ ಎಸ್​ಟಿ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾಂತೇಶ್​ಗೆ ಅಸ್ತಮಾ ಹಾಗೂ ತೀವ್ರ ಉಸಿರಾಟದ ತೊಂದರೆ ಇತ್ತು. ಹೀಗಾಗಿ ಅವರು ಚೇತರಿಸಿಕೊಳ್ಳದೇ ಸಾವನ್ನಪ್ಪಿದ್ದರು.

ಮೃತರ ಶರೀರವನ್ನ ನಗರದ ಗಂಗಾಪುರ ಪೇಟೆಯ ನಿವಾಸಕ್ಕೆ ಕುಟುಂಬಸ್ಥರು ತೆಗೆದುಕೊಂಡು ಬಂದಿದ್ದರು. ಅಲ್ಲಿಂದ ಹೊಂಬಳನಾಕಾ ಬಳಿಯ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರೆಸಲು ಹೋದಾಗ ನೂರಾರು ಜನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

The post ಕಾಂಗ್ರೆಸ್​ ನಾಯಕನ ಅಂತ್ಯ ಸಂಸ್ಕಾರದಲ್ಲಿ ನೂರಾರು ಜನ ಭಾಗಿ appeared first on News First Kannada.

Source: newsfirstlive.com

Source link