ಕಾಂಗ್ರೆಸ್​ ನಾಯಕರು ಹತಾಶರಾಗಿ ಬಿಟ್​ ಕಾಯಿನ್ ಬಗ್ಗೆ ಮಾತಾಡ್ತಿದ್ದಾರೆ -ವಿಜಯೇಂದ್ರ ವಾಗ್ದಾಳಿ


ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಹತಾಶೆಯಿಂದ ಈ ರೀತಿ ಮಾತ್ನಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಬೇರೆ ವಿಷಯಗಳು ಇಲ್ಲ. ಹೀಗಾಗಿ ಬಿಟ್ ಕಾಯಿನ್ ವಿಚಾರ ತೆಗೆದು ಟೀಕೆ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್​ ವಿರುದ್ಧ ಬಿ.ವೈ. ವಿಜಯೇಂದ್ರ ಕಿಡಿದ್ದಾರೆ.

ಇನ್ನು ಹಾನಗಲ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ಆದರೆ ಹಿಂದೆ ಎಲ್ಲಾ ಚುನಾವಣೆಯನ್ನ ಅವರು ಸತತವಾಗಿ ಸೋತಿದ್ದಾರೆ. ಅದ್ರಿಂದ ಹತಾಶರಾಗಿರುವ ಕಾಂಗ್ರೆಸ್ ನಾಯಕರು ಈ ರೀತಿ ಟೀಕೆಯನ್ನು ಮಾಡುತ್ತಿದ್ದಾರೆ ಅಂತ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

News First Live Kannada


Leave a Reply

Your email address will not be published.