ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಪ್ರತಿನಿತ್ಯ ಹತ್ತಾರು ಸಾವಿರಗಟ್ಟಲೇ ಕೊರೊನಾ ಕೇಸ್ ವರದಿಯಾಗುತ್ತಿವೆ. ಈ ನಡುವೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯೂ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಬಂಧ ಮಾತಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋರ್ಟ್ ತೀರ್ಪಿನ ಮೇರೆಗೆ ಮೇಕೆದಾಟು ಪಾದಯಾತ್ರೆ ಆಯೋಜಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ರಾಜ್ಯ ಸರ್ಕಾರ ಈಗಾಗಲೇ ಕಾಂಗ್ರೆಸ್ಗೆ ನೋಟಿಸ್ ನೀಡಿದೆ. ಪಾದಯಾತ್ರೆಯಲ್ಲಿ ಭಾಗಿಯಾದ ಹಲವರ ವಿರುದ್ಧ ಎಫ್ಐಆರ್ ಕೂಡ ಮಾಡಿದ್ದೇವೆ. ಕೋರ್ಟ್ ಏನು ಹೇಳಿದೆ ಎಂದು ದಾಖಲೆ ತರಿಸಬೇಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು ಆರಗ ಜ್ಞಾನೇಂದ್ರ.
ಕಾಂಗ್ರೆಸ್ಗೆ ಕೋರ್ಟ್ ಯಾರ ಅನುಮತಿ ಪಡೆದು ಪಾದಯಾತ್ರೆ ಮಾಡಿದ್ದೀರಿ ಎಂದು ಪ್ರಶ್ನಿಸಿದೆ. ಹೀಗಾದ್ರೆ ಲಾಕ್ಡೌನ್ ಒಂದೇ ಕೊನೆಯ ಅಸ್ತ್ರ ಎಂದರು.