ರಾಜ್ಯದೆಲ್ಲೇಡೆ ಹಿಜಾಬ್ ವಿವಾದ ಬೆಂಕಿ ಚಂಡಿನಂತೆ ಹೊತ್ತಿ ಉರಿಯುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜುಗಳು ನಡೆಯುತ್ತಿಲ್ಲ, ಹಿಜಾಬ್ನ ಪರ ವಿರೋಧವಾಗಿ ಪ್ರತಿಭಟನೆಗಳು ಜನ್ಮ ತಾಳುತ್ತಿವೆ. ಹೀಗಿರುವಾಗ ಹಿಜಾಬ್ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಪರವಾಗಿ ಕಾಂಗ್ರೆಸ್ ಪಕ್ಷ ಇರುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಹಿಜಾಬ್ ಕುರಿತು ನಮ್ಮ ನಾಯಕರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ. ಯಾರು ಯಾವ ಉಡುಪು ಬೇಕಾದರೂ ಧರಿಸಬಹುದು ಅದು ಅವರಿಗೆ ಬಿಟ್ಟ ವಿಚಾರ, ನೀವು ಹೀಗೆ ಉಡುಪು ಧರಿಸಿ ಹೀಗೆ ಬೇಡ ಎಂಬ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. ಅವರು ಹಾಕಿಕೊಳ್ಳುತ್ತಾರಾ.. ಹಾಕಿಕೊಳ್ಳಲ್ಲಿ ನಿಮಗೆ ಬೇಕಾ ನೀವೂ ಹಾಕಿ ಎಂದಿದ್ದಾರೆ.
ಈ ಬಾರಿ ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿದೆ ಎಂದು ಹೇಳುವುದರೊಂದಿಗೆ, ಸರ್ಕಾರ ಇದರ ಮಧ್ಯಸ್ಥಿಕೆವಹಿಸಿ ಆದಷ್ಟು ಬೇಗ ಇದನ್ನು ಮುಗಿಸಬೇಕು ಎಂದಿದ್ದಾರೆ. ಶಿಕ್ಷಣದಲ್ಲಿ ಜಾತಿ, ಧರ್ಮದ ಜೊತೆ ಹೋದರೇ ಜೀವನ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಹೇಳಿದ್ದಾರೆ. ಇನ್ನೂ ಈಗಾಗಲೇ ಕೋವಿಡ್ ಕಾರಣ ವರ್ಷಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದು ಯಾವುದೇ ತರಗತಿಗಳು ನಡೆದಿಲ್ಲ ಮತ್ತದೇ ಸ್ಥಿತಿ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.