ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಇದನ್ನ ಪ್ರಶ್ನಿಸಿ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದರು. ಅದರಂತೆ ತುರ್ತಾಗಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಗೆ ತೀವ್ರ ತರಾಟೆ ತೆಗೆದುಕೊಂಡು ಶುಕ್ರವಾರಕ್ಕೆ ವಿಚಾರಣೆಯನ್ನ ಮುಂದೂಡಿದೆ.
ರಾಜ್ಯ ಸರ್ಕಾರಕ್ಕೆ ಒಂದು ದಿನ ಡೆಡ್ಲೈನ್
ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ಗೆ ಹೇಗೆ ಪಾದಯಾತ್ರೆ ಮಾಡಲು ಅನುಮತಿಯನ್ನ ನೀಡಿದ್ದೀರಿ. ಕೊರೊನಾ ನಿಯಮ ಪಾಲಿಸಲು ಮಾರ್ಗಸೂಚಿಯನ್ನ ನೀಡಿದ್ದೀರಾ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಸರ್ಕಾರ, ಪಾದಯಾತ್ರೆ ಸಂಬಂಧ ಎಫ್ಐಆರ್ ಹಾಕಲಾಗಿದೆ. ಕೆಪಿಸಿಸಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿತು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಪ್ರ್ಯಾಕ್ಟಿಕಲ್ ಆಗಿ ಏನು ಕ್ರಮ ತೆಗೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದೆ. ಮಾತ್ರವಲ್ಲ ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಒಂದು ದಿನಗಳ ಕಾಲ ಡೆಡ್ಲೈನ್ ನೀಡಿದೆ.
ಕೆಪಿಸಿಸಿಗೂ ಪ್ರಶ್ನೆ..?
ಕೊರೊನಾ ಸಂದರ್ಭದಲ್ಲಿ ಹೇಗೆ ನೀವು ಱಲಿ ಮಾಡುತ್ತಿದ್ದೀರಿ. ಕೊರೊನಾ ನಿಯಮ ಪಾಲಿಸಲು ನೀವು ತೆಗೆದುಕೊಂಡಿರುವ ಕ್ರಮಗಳೇನು? ಕೊರೊನಾ ಮಾರ್ಗಸೂಚಿಯನ್ನ ಪಾದಯಾತ್ರೆಯಲ್ಲಿ ಪಾಲನೆ ಮಾಡುತ್ತಿದ್ದೀರಾ ಎಂದು ಕೆಪಿಸಿಸಿಗೆ ಪ್ರಶ್ನೆ ಮಾಡಿದೆ.
The post ಕಾಂಗ್ರೆಸ್ ಪಾದಯಾತ್ರೆ: ಸರ್ಕಾರಕ್ಕೆ ಛೀ ಮಾರಿ ಹಾಕಿ ಡೆಡ್ಲೈನ್ ಕೊಟ್ಟ ಹೈಕೋರ್ಟ್ appeared first on News First Kannada.