ಬೀದರ್: ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಅವರು ಬಸವಕಲ್ಯಾಣದಿಂದ 20,629 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದು, ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ

ಬಿಜೆಪಿ 71,012 ಮತಗಳನ್ನು ಪಡೆದರೆ ಕಾಂಗ್ರೆಸ್ 50,383 ಮತ, ಜೆಡಿಎಸ್ 11,402 ಮತಗಳನ್ನು ಪಡೆದಿದೆ. ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ವಿಸೋಮಣ್ಣ ಹಾಗೂ ಸಂಸದ ಭಗವಂತ್ ಖೂಬಾ ಈ ಚುನಾವಣೆಗೆ ರಣತಂತ್ರ ಹೆಣೆದಿದ್ದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಿ ನಾರಾಯಣ ರಾವ್ ಈ ಕ್ಷೇತ್ರದಿಂದ ಗೆದ್ದಿದ್ದರು. ಕಾಂಗ್ರೆಸ್ 61,425 ಮತಗಳನ್ನು ಪಡೆದರೆ ಬಿಜೆಪಿ 44,153 ಮತಗಳನ್ನು ಪಡೆದಿತ್ತು.

ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಬಸವಕಲ್ಯಾಣ ಉಪಚುನಾವಣೆಯಲ್ಲಿ ಸುಸ್ಪಷ್ಟ ಜನಾದೇಶದೊಂದಿಗೆ ಗೆಲುವು ಸಾಧಿಸಿರುವ ಶರಣು ಸಲಗಾರ ಅವರಿಗೆ ಅಭಿನಂದನೆಗಳು. ಕಾರ್ಯಕರ್ತರ ಅವಿರತ ಪರಿಶ್ರಮಗಳ ಜೊತೆಗೆ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಶ್ರೀ ನಳೀನ್ ಕುಮಾರ್ ಕಟೀಲ್ ಮತ್ತು ಎಲ್ಲಾ ನಾಯಕರ ಮೇಲೆ ವಿಶ್ವಾಸವಿಟ್ಟು ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ನನ್ನ ಧನ್ಯವಾದಗಳು ಎಂದು ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

The post ಕಾಂಗ್ರೆಸ್‍ಗೆ ಮುಖಭಂಗ – ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ appeared first on Public TV.

Source: publictv.in

Source link