ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನೇ ಸಿಎಮ್ ಅಂತ ಪರೋಕ್ಷವಾಗಿ ಶಾಸಕ ಭೈರತಿ ಸುರೇಶ ಕುರುಬ ಸಮಾವೇಶದಲ್ಲಿ ಹೇಳಿದರು | Siddaramaiah will CM if Congress regains power says MLA Byrathi Suresh says in Kuruba Conventionಕುರುಬ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುಷ್ ಹುವಾ ದಂಥ ಸನ್ನಿವೇಶವನ್ನು ಸೃಷ್ಟಿಸಿದ್ದು ಕಾಂಗ್ರೆಸ್ ಶಾಸಕ ಬೈರತಿ ಸುರೇಶ್. ಅಬ್ಬಬ್ಬಾ ಅದೇನು ಹೊಗಳಿಕೆ, ಅದೇನು ಗುಣಗಾನ ಮಾರಾಯ್ರೇ! ಒಂದು ಹಂತದಲ್ಲಿ ಸಿದ್ದರಾಮಯ್ಯನವರು ಮುಜುಗುರ ಅನುಭವಿಸಿರಬಹುದು.

TV9kannada Web Team


| Edited By: Arun Belly

May 28, 2022 | 6:42 PM
ತುಮಕೂರು: ಮಿ ಇಂಡಿಯಾ ಸಿನಿಮಾನಲ್ಲಿ ದಿವಣಗತ ಅಮರೀಶ ಪುರಿ ‘ಮೊಗ್ಯಾಂಬೋ’ ಪಾತ್ರ ನಿರ್ವಹಿಸಿದ್ದರು. ಸಿನಿಮಾನಲ್ಲಿ ಅವರು ತನಗೆ ಸಂತೋಷವಾದಾಗಲೆಲ್ಲ ‘ಮೊಗ್ಯಾಂಬೋ ಖುಷ್ ಹುವಾ’ ಅನ್ನುತ್ತಿರುತ್ತಾರೆ. ತುಮಕೂರಿನಲ್ಲಿ ಶನಿವಾರ ನಡೆದ ಬೃಹತ್ ಕುರುಬ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುಷ್ ಹುವಾ ದಂಥ ಸನ್ನಿವೇಶವನ್ನು ಸೃಷ್ಟಿಸಿದ್ದು ಕಾಂಗ್ರೆಸ್ ಶಾಸಕ ಬೈರತಿ ಸುರೇಶ್. ಅಬ್ಬಬ್ಬಾ ಅದೇನು ಹೊಗಳಿಕೆ, ಅದೇನು ಗುಣಗಾನ ಮಾರಾಯ್ರೇ! ಒಂದು ಹಂತದಲ್ಲಿ ಸಿದ್ದರಾಮಯ್ಯನವರು ಮುಜುಗುರ ಅನುಭವಿಸಿರಬಹುದು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಏನಾದರೂ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ, ಸುರೇಶ್ ಪ್ಲಮ್ ಖಾತೆಯ ಸಚಿವನಾಗುವ ‘ಭಾಗ್ಯ’ ಖಂಡಿತ ಸಿಗಲಿದೆ!

ಸುರೇಶ್ ಹೇಳವುದನ್ನು ಕೇಳಿಸಿಕೊಳ್ಳಿ. ದೇಶದ ಅಪ್ರತಿಮ, ನಿಷ್ಠಾವಂತ ಮುಖ್ಯಮಂತ್ರಿಯಾಗಿ 2013 ರಿಂದ 2018 ರವೆರೆಗೆ ಕಾರ್ಯ ನಿರ್ವಹಿಸಿರುವ, ಮತ್ತು ದಾಖಲೆಯ 13 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಆ ಸ್ಥಾನ ಪಡೆಯಬೇಕೆಂಬ ಆಸೆ ಖಂಡಿತ ಇಲ್ಲ. ಆದರೆ ನಮಗೆ ಮತ್ತು ಭಾರಿ ಸಂಖ್ಯೆಯಲ್ಲಿರುವ ನಿಮಗೆಲ್ಲ ಅವರು ಇನ್ನೊಮ್ಮೆ ಮುಖ್ಯಮಂತ್ರಿ ಅಗೋದು ಬೇಕಿದೆ, ಎಂದು ಸುರೇಶ ಹೇಳಿದರು. ಹಾಗಾಗಿ ನೀವೆಲ್ಲ ಅವರ ಕೈ ಬಲಪಡಿಸಬೇಕು. ನಮಗೆಲ್ಲ ಗೊತ್ತು. ಅವರು ಮುಖ್ಯಮಂತ್ರಿಯಾಗಿದ್ದಾಗ, ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹೀಗೆ ನೂರೆಂಟು ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಚುನಾವಣೆಗೆ ಮೊದಲು ಮಾಡಿದ್ದ 169 ಭರವಸೆಗಳ ಪೈಕಿ 165 ಭರವೆಸಗಳನ್ನು ಈಡೇರಿಸಿದರು ಅಂತ ಸುರೇಶ ಹೇಳಿದರು.

ಗುಣಗಾನ ಮುಂದುವರಿಸಿದ ಸುರೇಶ, ಮುಂದೆ ತುಮಕೂರಿನಲ್ಲಿ ನಡೆಯಲಿರುವ ಅಹಿಂದ ಸಮಾವೇಶದಲ್ಲಿ ಸಹ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಿದ್ದಾರಾಮಯ್ಯನವರ ಆತ್ಮವಿಶ್ವಾಸ ಮತ್ತು ಬಲ ಹೆಚ್ಚಿಸಬೇಕು ಎಂದರು. ಅಗಸ್ಟ 3 ರಂದು ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ ಮತ್ತು ಈ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದು ಭೈರತಿ ಸುರೇಶ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *