ಕಾಂಗ್ರೆಸ್ ಆಡಳಿತದಲ್ಲಿ ಭಾರತ ಬಹುತೇಕ ಮುಸ್ಲಿಂ ರಾಷ್ಟ್ರವಾಗಿತ್ತು; ಬಿಜೆಪಿ ಟೀಕೆ | India was partially a Muslim nation when Congress Government was in power BJP leader Sudhanshu Trivedi alleges


ಕಾಂಗ್ರೆಸ್ ಆಡಳಿತದಲ್ಲಿ ಭಾರತ ಬಹುತೇಕ ಮುಸ್ಲಿಂ ರಾಷ್ಟ್ರವಾಗಿತ್ತು; ಬಿಜೆಪಿ ಟೀಕೆ

ಸುಧಾಂಶು ತ್ರಿವೇದಿ

ನವದೆಹಲಿ: ಹಿಂದುತ್ವದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಈ ವಿಷಯದಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತವು ಭಾಗಶಃ “ಮುಸ್ಲಿಂ ರಾಷ್ಟ್ರ”ವಾಗಿತ್ತು ಎಂದು ಟೀಕಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಷರಿಯಾ ಕಾನೂನು ವ್ಯವಸ್ಥೆಯ ಒಂದು ಭಾಗವಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಲ್ಲೂ ಅವುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು ಎಂದಿದ್ದಾರೆ.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಭಾರತವು ಭಾಗಶಃ ಮುಸ್ಲಿಂ ರಾಷ್ಟ್ರವಾಗಿತ್ತು. ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತವು ಭಾಗಶಃ ಮುಸ್ಲಿಂ ರಾಷ್ಟ್ರವಾಗಿತ್ತು. ಷರಿಯಾ ನಿಬಂಧನೆಗಳು ಸಾಂವಿಧಾನಿಕ ವ್ಯವಸ್ಥೆಯ ಭಾಗವಾಗಿರುವುದರಿಂದ ನಾನು ಹಾಗೆ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಮ್ಮ ಸಮಾಜದಲ್ಲಿ ಹಿಂದೂ ಧರ್ಮದ ವಿರುದ್ಧ ದ್ವೇಷವನ್ನು ಹರಡುತ್ತಿದೆ, ಗಲಭೆಗಳನ್ನು ಉಂಟು ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ದೂಷಿಸಿದ್ದಾರೆ. ಇತ್ತೀಚೆಗೆ ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವೆ ವ್ಯತ್ಯಾಸವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.

ತ್ರಿಪುರಾದಲ್ಲಿ ಮಸೀದಿಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಗಳ ಮೇಲೆ ಮಹಾರಾಷ್ಟ್ರದಲ್ಲಿ ಹಿಂಸಾಚಾರ, ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮತ್ತು ಹಿಂದುತ್ವದ ಮೇಲೆ ದಾಳಿ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆಗಳು ಕೂಡ ಹಿಂದೂ ಧರ್ಮದ ವಿರುದ್ಧದ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಿಂದುತ್ವವನ್ನು ದೂಷಿಸಲು ತರಬೇತಿ ನೀಡುತ್ತಿದ್ದಾರೆ. ಕೋಮು ವೈಷಮ್ಯ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಸಂಘಟಿತ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಆರೆಸ್ಸೆಸ್-ಬಿಜೆಪಿ ಸಿದ್ಧಾಂತಕ್ಕೆ ಸಂಬಂಧಿಸಿದ ಹಿಂದುತ್ವ ಎಂಬ ಪದವನ್ನು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಭಯೋತ್ಪಾದಕ ಇಸ್ಲಾಮಿಸ್ಟ್ ಸಂಘಟನೆಗಳೊಂದಿಗೆ ಹೋಲಿಸಿದ ನಂತರ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ.

ಇದನ್ನೂ ಓದಿ: Bitcoin ಜಟಾಪಟಿ: ಹಿಟ್​ ಅಂಡ್ ರನ್ ರಾಜಕೀಯ ಶುರು ಮಾಡಿದ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ, ಪ್ರಧಾನಿ ಸೂಚನೆ ಸರಿಯಿಲ್ಲ: ಕಾಂಗ್ರೆಸ್​

ಹಿಂದುತ್ವದ ಹೆಸರಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ; ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಟೀಕೆ

TV9 Kannada


Leave a Reply

Your email address will not be published. Required fields are marked *