ಕಾಂಗ್ರೆಸ್ ಕಳ್ಳರು, ಭ್ರಷ್ಟಾಚಾರಿಗಳು, ಭಯೋತ್ಪಾದಕರ ಪಾರ್ಟಿ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ಮಾಡಿದರು.

ನಳಿನ್ ಕುಮಾರ್ ಕಟೀಲ್
ಚಾಮರಾಜನಗರ: ಕಾಂಗ್ರೆಸ್ ಕಳ್ಳರು, ಭ್ರಷ್ಟಾಚಾರಿಗಳು, ಭಯೋತ್ಪಾದಕರ ಪಾರ್ಟಿ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ವಾಗ್ದಾಳಿ ಮಾಡಿದರು. ಪ್ರಕೋಷ್ಟಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದು ಮಹಾತ್ಮ ಗಾಂಧಿ ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್ ಆಡಳಿತ ಮಾಡಿದರೆ ರಾಮರಾಜ್ಯ ನಿರ್ಮಾಣ ಆಗಲ್ಲ, ರಾವಣನ ರಾಜ್ಯ ನಿರ್ಮಾಣ ಆಗುತ್ತೆ ಅಂತ ಅವರಿಗೆ ಗೊತ್ತಿತ್ತು. ಇಂದಿರಾಗಾಂಧಿ ಕಾಲಾವಧಿಯಲ್ಲಿ ಭಯೋತ್ಪಾದನೆ ಆರಂಭವಾಯಿತು. ಆಗ ಬಾಂಬ್ನ ಕಾರ್ಖಾನೆಗಳು ಆರಂಭವಾದವು. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಪರ್ಸಂಟೇಜ್ ಅಂದ್ರೆ ಕಾಂಗ್ರೆಸ್ ಎಂದು ಕಟೀಲ್ ತೀವ್ರವಾಗಿ ಕಿಡಿಕಾರಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ
ಲಾಲ್ಬಹದ್ದೂರು ಶಾಸ್ತ್ರಿ ಹೊರತುಪಡಿಸಿ ನೆಹರುಯಿಂದ ಹಿರಿದು ಮನಮೋಹನ್ ಸಿಂಗ್ವರಗಿನ ಕಾಂಗ್ರೆಸ್ ಪ್ರಧಾನ ಮಂತ್ರಿಗಳ ಕಾಲದಲ್ಲಿ ಅತಿ ಹೆಚ್ಚು ಹಗರಣಗಳು ನಡೆದಿವೆ. ಆರೋಪ ಮಾಡಿದ್ದ ಕೆಂಪಣ್ಣ ದಾಖಲೆ ನೀಡಲಾಗದೆ ಜೈಲಿಗೆ ಹೋಗಿದ್ರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ. ಜೈಲಿಗೆ ಹೋಗುವ ಭಯದಿಂದಲೇ ಲೋಕಾಯುಕ್ತ ಮುಚ್ಚಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.