ಕಾಂಗ್ರೆಸ್ ಪಕ್ಷದವರಿಗೆ RSSಗೆ ಬೈದೆ ಇದ್ದರೆ ತಿಂದಿದ್ದು ಕರಗಲ್ಲ; ಬೈದರೆ ಅಲ್ಪಸಂಖ್ಯಾತರ ಮತಗಳು ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ : ಜಗದೀಶ್ ಶೆಟ್ಟರ | Jagadish Shettar Slams on Siddaramaiah and Congress


ಕಾಂಗ್ರೆಸ್ ಪಕ್ಷದವರಿಗೆ RSSಗೆ ಬೈದೆ ಇದ್ದರೆ ತಿಂದಿದ್ದು ಕರಗಲ್ಲ; ಬೈದರೆ ಅಲ್ಪಸಂಖ್ಯಾತರ ಮತಗಳು ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ : ಜಗದೀಶ್ ಶೆಟ್ಟರ

ಜಗದೀಶ್ ಶೆಟ್ಟರ ಮತ್ತು ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದವರಿಗೆ RSS ಗೆ ಬೈದೆ ಇದ್ರ ತಿಂದಿದ್ದು ಕರಗಲ್ಲ. ಬೈದ್ರೆ ಅಲ್ಪಸಂಖ್ಯಾತರ ಮತಗಳು ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಾರವಾರ: ಕಾಂಗ್ರೆಸ್ (Congress) ಪಕ್ಷದವರಿಗೆ RSS ಗೆ ಬೈದೆ ಇದ್ರ ತಿಂದಿದ್ದು ಕರಗಲ್ಲ. ಬೈದ್ರೆ ಅಲ್ಪಸಂಖ್ಯಾತರ ಮತಗಳು ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಕಾಂಗ್ರೆಸ್‌ನವರು ಬೈದಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ದೊಡ್ಡವರಾಗಲ್ಲ,ಇನ್ನು ಸಣ್ಣವರಾಗುತ್ತಾರೆ. ಯಡಿಯೂರಪ್ಪ,ಮೋದಿ,ರಾಷ್ಟ್ರಪತಿ,ಎಲ್ಲಾರು RSSನವರೇ ಎಂದು ಸಿದ್ದರಾಮಯ್ಯ ವಿರುದ್ದ ಶೆಟ್ಟರ ಕಿಡಿಕಾರಿದ್ದಾರೆ.

ಈಗಾಗಲೇ ಪಂಜಾಬ್‌ನಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಕೈಕೊಟ್ಟಿದ್ದಾರೆ.  ಉತ್ತರ ಪ್ರದೇಶದಲ್ಲಿ, ಪಂಜಾಬ್‌ನಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿಲ್ಲ. RSS ಗೆ ಬೈಯುವುದು ಬಹಳ ದಿನ ನಡಿಯಲ್ಲ. ಹಿಂದೂ ಸಂಘಟನೆ ಜೊತೆಗೆ ಇಡೀ ದೇಶವನ್ನ ಒಗ್ಗೂಡಿಸುವ ಕೆಲಸ RSS ಮಾಡುತ್ತಿದೆ. RSS ಒಂದು ದೊಡ್ಡ ಶಕ್ತಿ, ಒಬ್ಬ ವ್ಯಕ್ತಿಗೆ ಸಂಬಂಧಿಸಿದಲ್ಲ, ಲಕ್ಷಾಂತರ ಕಾರ್ಯಕರ್ತರ ಪಡೆ RSS ಗೆ ಇದೆ. RSS ಬಗ್ಗೆ ಸಿದ್ದರಾಮಯ್ಯ ಅವರು ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ಧಾರೆ.

ಇದನ್ನು ಓದಿ: ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಈಗ ಪ್ರಜಾಪ್ರಭುತ್ವ ಉಳಿದಿಲ್ಲ: ರಾಜ್ಯದ ಫಲಾನುಭವಿಗಳ ಜೊತೆ ಸಿಎಂ ಬೊಮ್ಮಾಯಿ ಸಂವಾದ

RSS ಬಗ್ಗೆ ಸಂಘಟನೆ ಅವರು ಪ್ರತಿಕ್ರಿಯೆ ನೀಡಲ್ಲ, ಆದರೆ ಬಿಜೆಪಿ ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾನು RSS ಸ್ವಯಂ ಸೇವಕ, ಸಂಘದ ಪರವಾಗಿ ಮಾತನಾಡುತ್ತೆನೆ. ನಾನು ಅಷ್ಟೇ ಅಲ್ಲ, ಯಡಿಯೂರಪ್ಪ, ನರೇಂದ್ರ ಮೋದಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಇವರೆಲ್ಲ RSS ಸ್ವಯಂ ಸೇವಕರೆ. ಸಂಘದವರೆ ಬಂದು ಮಾತನಾಡಬೇಕು ಅಂತಾ ಏನಿಲ್ಲ ಎಂದರು. ರಾಜ್ಯ ಸಭೆ ಚುನಾವಣೆ ಕುರಿತು ಮಾತನಾಡಿದ ಅವರು ರಾಜ್ಯಸಭಾ ಚುನಾವಣೆಯಲ್ಲಿ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಮತಗಳನ್ನ ಹೇಗೆ ಪಡೆಯಬೇಕು ಎನ್ನುವ ಪ್ರಯತ್ನ, ತಂತ್ರ ಮಾಡಲಾಗುತ್ತಿದೆ. ಎರಡು ಮೂರು‌ ದಿನಗಳಲ್ಲಿ ಎಲ್ಲವೂ ನಿರ್ಧಾರವಾಗಲಿದೆ.

ಇದನ್ನು ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮಗ

ಅಂಕೋಲ: ರಾಜ್ಯಸಭೆ ಚುನಾವಣೆಯಲ್ಲಿ ಮೂರನೆ ಅಭ್ಯರ್ಥಿ ವಿಚಾರವಾಗಿ ಯಾರಿಗೆ ದುಡ್ಡು ಜಾಸ್ತಿ ಇರುತ್ತೊ ಅವರು ಆರಿಸಿ ಬರ್ತಾರೆ. ಎಂದು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಬಂದ ವಿಚಾರವಾಗಿ ಮಾತನಾಡಿದ ಅವರು. ಶಿಕ್ಷಕರ ಮಾತು ಕೇಳಿ ಬಿಜೆಪಿ ಪಕ್ಷಕ್ಕೆ ಬಂದೆ. ಆಕಸ್ಮಿಕವಾಗಿ ಆದ ಬದಲಾವಣೆಯಿಂದ ನಾನು ಇಲ್ಲಿಗೆ ಬರಬೇಕಾಯಿತು. ಪರಿಸ್ಥಿತಿಗೆ ಬದಲಾವಣೆಗೆ ಹೊಂದಿಕೊಳ್ಳಬೇಕು. ಹಾಗೆ ಆಯಿತು ಬಂದಿದ್ದೇನೆ ಬಂದಮೇಲೆ ಪಕ್ಷದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಮಳೆಗಾಲದಲ್ಲಿ ಒಂದು ಹವಾ ಇರುತ್ತದೆ,ಬೇಸಿಗೆಯಲ್ಲಿ ಒಂದು ಹವಾ ಇರುತ್ತದೆ. ಹವಾ ಹೇಗಿರುತ್ತೋ ಹಾಗೆ ಹೊಂದಿಕೊಳ್ಳಬೇಕು. ನನಗೆ ಯಾವ ಆಕಾಂಕ್ಷೆ ಇಲ್ಲ, ನನ್ನ ಸೀನಿಯಾರಿಟಿ ,ಯೋಗ್ಯತೆ ನೋಡಿ ಏನಾದ್ರು ಉಪಯೋಗ ಮಾಡಿಕೊಂಡ್ರೆ ಮಾಡಿಕೊಳ್ಳಲಿ ,ಇಲ್ಲದಿದ್ರೆ ಪ್ರಾಣಿಕ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.

ಪಠ್ಯಪರಿಷ್ಕರಣೆ ನಂತರ ಬುಗಿಲೆದ್ದ ವಿವಾದಗಳ ಕುರಿತು ಮಾತನಾಡಿದ ಅವರು  ಶಿಕ್ಷಣ ವಿಷಯದಲ್ಲಿ ಯಾವುದೇ ಸರ್ಕಾರ ,ಯಾವುದೇ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು   ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *