ಕಾಂಗ್ರೆಸ್ ಪಕ್ಷದವರು ಹಾಸಿಗೆ, ದಿಂಬು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ | Karnataka Congress will lose opposition party status like that in Parliament says CM Basavaraj Bommai in Gadag


ಕಾಂಗ್ರೆಸ್ ಪಕ್ಷದವರು ಹಾಸಿಗೆ, ದಿಂಬು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ

ಕಾಂಗ್ರೆಸ್ ಪಕ್ಷದವರು ಹಾಸಿಗೆ, ದಿಂಬು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ

ಗದಗ: ದೇಶದಲ್ಲಿ ಭ್ರಷ್ಟಾಚಾರ ಪರಂಪರೆ (Corruption) ಆರಂಭಿಸಿದ್ದೇ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ನವರು (Karnataka Congress) ಹತಾಶಾರಾಗಿ ನಮ್ಮ ನಾಯಕರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಎಲ್ಲಾ ರಂಗದಲ್ಲಿಯೂ ಕಾಂಗ್ರೆಸ್ ಭ್ರಷ್ಟಾಚಾರ ಹಬ್ಬಿಸಿದ್ದರು. ಇದಕ್ಕಾಗಿಯೇ ಜನ ಅವರನ್ನು ಮನೆಗೆ ಕಳಿಸಿದ್ದಾರೆ. ಎಸ್​ಸಿ, ಎಸ್​ಟಿ ಹಾಸ್ಟೆಲ್ ಮಕ್ಕಳಿಗೆ ಹಾಸಿಗೆ, ದಿಂಬಗಳು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗದಗ ನಗರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಭಿನಂದನಾ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪಾಲ್ಗೊಂಡು, ಮಾತನಾಡಿದರು.

2023 ರ ಚುನಾವಣೆಯಲ್ಲಿ ನಾವು ನಮ್ಮ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಬೇಕು. ಮನೆ ಮನೆಗೆ ಪ್ರಚಾರ ಮಾಡಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕಾಗಿ ತಾವೆಲ್ಲ ಶ್ರಮಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಕರೆ ಕೊಟ್ಟರು. ವಿರೋಧ ಪಕ್ಷದಲ್ಲಿ ತೊಳಲಾಟ ಶುರುವಾಗಿದೆ. ಅದನ್ನೆಲ್ಲ ಬಿಟ್ಟು.. ನಮ್ಮ ನಾಯಕ ಈಶ್ವರಪ್ಪ ಮೇಲೆ ಗೂಬೆ ಕೂರಿಸೋ ಪ್ರಯತ್ನ ನಡೆದಿದೆ. ನಿಷ್ಠೂರವಾಗಿ, ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ. ಸ್ವಚ್ಛ ಮುತ್ತುಗಳಂತೆ ವರ್ತಿಸ್ತಿರೋ ಕಾಂಗ್ರೆಸ್ ನವರು ಸಾವಿನ ಮನೆಯಲ್ಲಿ ರಾಜಕೀಯ ಲಾಭದ ಎಣಿಕೆ ಮಾಡುವ ಬುದ್ಧಿ ಬಿಡಬೇಕು. ವಿರೋಧ ಪಕ್ಷವಾಗಿ ನೀವು ವಿಫಲವಾಗಿದ್ದೀರಿ. ಕೇಂದ್ರದ ಹಾಗೇ.. ನಾಳೆ ನಿಮಗೆ ರಾಜ್ಯದಲ್ಲೂ ವಿರೋಧ ಪಕ್ಷದ ಸ್ಥಾನ ಸಹ ಕಳೆದುಕೊಳ್ತೀರಿ. ಈಗ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿ ಅನುಭವಿಸಬೇಕಾಗ್ತಿದೆ. 2023 ರ ನಮ್ಮ ಗುರಿ – ನಮ್ಮ ಭವ್ಯ ಭವಿಷ್ಯ ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.

ಕಾಂಗ್ರೆಸ್ಸಿನ ಆ ಭಾಗ್ಯ – ಈ ಭಾಗ್ಯಗಳು ರಾಜ್ಯದ ದೌರ್ಭಾಗ್ಯವಾಗಿ ಹೋಯ್ತು: ಸಿಎಂ ಬೊಮ್ಮಾಯಿ ಲೇವಡಿ
ವಿರೋಧ ಪಕ್ಷದ ವಿರೋಧವನ್ನ ಮೆಟ್ಟಿ ನಿಲ್ಲಬೇಕು. ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಬಜೆಟ್ ಕೊಟ್ಟಿದ್ದೇವೆ. ಈಗ ದುಡಿಮೆಯೇ ದೊಡ್ಡಪ್ಪ ಅನ್ನೋ ಕಾಲ ಬಂದಿದೆ. ಈ ಹಿಂದೆ ನಾವು ಆ ಭಾಗ್ಯ ಕೊಟ್ವೆವು, ಈ ಭಾಗ್ಯ ಕೊಟ್ವಿ ಅಂತೆಲ್ಲಾ ದೊಡ್ಡದಾಗಿ ಭಾಷಣ ಮಾಡ್ತಿದ್ದರು. ಆದ್ರೆ ಎಲ್ಲವೂ ಕೂಡ ಕೇವಲ ಭಾಷಣದ ಭಾಗ್ಯವಾಗಿ ಕೊಟ್ಟರು ಅಷ್ಟೆ. ಇದು ಈ ರಾಜ್ಯದ ದೌರ್ಭಾಗ್ಯವಾಗಿ ಹೋಯ್ತು ಎಂದು ಸಿಎಂ ಬೊಮ್ಮಾಯಿ ಲೇವಡಿ ಮಾಡಿದರು.

TV9 Kannada


Leave a Reply

Your email address will not be published.