ತನಿಖಾ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೆ ಕಚೇರಿ ತೆರೆಯಬಾರದು ಎಂದು ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.

ನ್ಯಾಷನಲ್ ಹೆರಾಲ್ಡ್ ಕಚೇರಿ
ದೆಹಲಿ: ಜಾರಿ ನಿರ್ದೇಶನಾಲಯವು ನವದೆಹಲಿಯ ಐಟಿಒನಲ್ಲಿರುವ ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಕಚೇರಿಗೆ ಬುಧವಾರ ಬೀಗ ಮುದ್ರೆ ಹಾಕಿದೆ. ತನಿಖಾ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೆ ಕಚೇರಿ ತೆರೆಯಬಾರದು ಎಂದು ಸೂಚನೆ ನೀಡಿದೆ.ಅಕ್ರಮ ಹಣ ವ್ಯವಹಾರ ಬಗ್ಗೆ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿರುವ ನ್ಯಾಷನಲ್ ಹೆರಾಲ್ಡ್ ಮುಖ್ಯ ಕಚೇರಿ ಮತ್ತು ಇತರ 11 ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಬೀಗ ಮುದ್ರೆ ಕ್ರಮಕೈಗೊಂಡಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)