ಕಾಂಗ್ರೆಸ್ ಪಕ್ಷ ಹಿಜಾಬ್ ವಿವಾದವನ್ನು ಸೃಷ್ಟಿಸಿ ಬಿಜೆಪಿ ತಲೆ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ: ಕೆ ಎಸ್ ಈಶ್ವರಪ್ಪ | Hijab controversy is brainchild of Congress, but efforts are made to blame BJP says KS Eshwarappa ARB


ಹಿಜಾಬ್ ವಿವಾದ ಮುಂದುವರಿದಿದೆ. ಹಿರಿಯ ಸಚಿವ ಕೆ ಎಸ್ ಈಶ್ವರಪ್ಪನರವರು (KS Eshwarappa) ಮಂಗಳವಾರದಂದು ಮೈಸೂರಿನಲ್ಲಿ (Mysuru) ಮಾಧ್ಯಮದವರೊಂದಿಗೆ ಮಾತಾಡುತ್ತಾ ಹಿಜಾಬ್ ವಿವಾದವನ್ನು (Hijab row) ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಸಮಾಜದ ವಿಂಗಡಣೆ ಮಾಡುತ್ತಿದೆ. ಇದೇ ಅಸ್ತ್ರ ಅದಕ್ಕೆ ತಿರುಗುಬಾಣವಾಲಿದ್ದು ಪಕ್ಷ ಸರ್ವನಾಶ ಆಗುವ ದಿನಗಳು ಹತ್ತಿರದಲ್ಲೇ ಇವೆ ಎಂದು ಹೇಳಿದರು. ಯಾವ ಕಾರಣಕ್ಕೂ ವಿವಾದವನ್ನು ಸೃಷ್ಟಿ ಮಾಡಿದ್ದು ಬಿಜೆಪಿ ಅಲ್ಲ ಯಾಕೆಂದರೆ, ವಿವಾದ ಹುಟ್ಟಿಕೊಂಡ ಉಡುಪಿಯ ಸರ್ಕಾರೀ ಕಾಲೇಜಿನಲ್ಲಿ (Udupi Government College) ಓದುವ ಮುಸ್ಲಿಂ ಸಮಯದಾಯದ ವಿದ್ಯಾರ್ಥಿನಿಯರ ಸಂಖ್ಯೆ 96 ಇದ್ದು ಅವರಲ್ಲಿ 90 ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸದೆ ಕಾಲೇಜಿಗೆ ಹೋಗಲು ಅಭ್ಯಂತರವಿಲ್ಲ, ಅದರೆ ಉಳಿದ 6 ಮಕ್ಕಳು ಮಾತ್ರ ಹಿಜಾಬ್ ಧರಿಸಿಯೇ ಧರಿಸುತ್ತೇವೆ ಎಂದು ಹಟಕ್ಕೆ ಬಿದ್ದಿದ್ದಾರೆ. ಇದರ ಅರ್ಥವೇನು? 90 ವಿದ್ಯಾರ್ಥಿನಿಯರು ಬಿಜೆಪಿ ಪಕ್ಷದವರು ಮತ್ತು 6 ಜನ ಮಾತ್ರ ಕಾಂಗ್ರೆಸ್ ಪಕ್ಷದವರು ಅಂತನಾ? ತಪ್ಪು ಮಾಡೋದು ಕಾಂಗ್ರೆಸ್ ಅದರೆ ದೂಷಣೆ ಹೊರಿಸೋದು ಮಾತ್ರ ಬಿಜೆಪಿ ಮೇಲೆ. ಆ ಪಕ್ಷ ಮೊದಲಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದೆ ಎಂದು ಈಶ್ವರಪ್ಪ ಹೇಳಿದರು

ಕೇವಲ ವೋಟಿಗಾಗಿ ಕಾಂಗ್ರೆಸ್ ಮುಸಲ್ಮಾನರನ್ನು ಓಲೈಸುವ ಪ್ರಯತ್ನ ಮಾಡುತ್ತದೆ. ಮುಸ್ಲಿಂ ಸಮುದಾಯದರೆಲ್ಲ ತನ್ನೊಂದಿಗಿದ್ದಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ವಾಸ್ತವ ಏನು ಅಂತ ಅದಕ್ಕೆ ಶೀಘ್ರದಲ್ಲೇ ಗೊತ್ತಾಗಲಿದೆ ಅಂತ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದರು.

ಹಿಜಾಬ್ ಬಗ್ಗೆ ಕೇರಳ ಉಚ್ಚ ನ್ಯಾಯಾಲಯ 2018 ರಲ್ಲೇ ತೀರ್ಪು ನೀಡಿದ್ದರೂ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು, ತಾವು ಅಂದುಕೊಂಡಿದ್ದೇ ಸರಿ ಎಂಬಂತೆ ಸಮವಸ್ತ್ರದ ಬಗ್ಗೆ ದಿಟ್ಟ ನಿಲುವು ತಳೆಯಲಿಲ್ಲ ಮತ್ತು ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟರು. ಅವರ ವೋಟ್ ಬ್ಯಾಂಕ್ ರಾಜಕಾರಣ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಈಶ್ವರಪ್ಪ ಹೇಳಿದರು.

TV9 Kannada


Leave a Reply

Your email address will not be published.