ಕಾಂಗ್ರೆಸ್ ಪ್ರತಿಭಟನೆಯ ಭಾಗವಾಗಿದ್ದ ವ್ಯಾನಿನ ಮೇಲೆ ಕೊಲೆಗಡುಕ ಈಶ್ವರಪ್ಪನನ್ನು ಬಂಧಿಸಿ ಎಂಬ ಪೋಸ್ಟರ್! | Poster on the van used during Congress’s protest Thursday read: Arrest murderer Eshwarappa ARB


ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಅಧ್ಯಕ್ಷ ಡಿಕೆ ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಹಾಗೂ ಕೆಪಿಸಿಸಿಯ ಎಲ್ಲ ಪದಾಧಿಕಾರಿಗಳು ಮತ್ತು ಗುರುವಾರದಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಪ್ರತಿಭಟನೆಗೆಗಾಗಿ ಬೆಂಗಳೂರಲ್ಲಿ ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರೆ, ಬೇರೆ ಬೇರೆ ಜಿಲ್ಲೆಗಳಲ್ಲಿ ಆಯಾ ಬ್ಲಾಕ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗಾಗಿ ಕಾಂಗ್ರೆಸ್ ಕಾರ್ಯಕರ್ತರು ಬೆಳಗ್ಗೆಯಿಂದಲೇ ತಯಾರಿ ನಡೆಸಿದ್ದರು. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂದೆ ನಿಂತಿರುವ ಈ ವ್ಯಾನನ್ನು ನೋಡಿ. ಇಂದು ನಡೆದ ಪ್ರತಿಭಟನೆಯ ಭಾಗವಾಗಿ ತಯಾರು ಮಾಡಲಾದ ಇದರ ಮೇಲೆ ಈಶ್ವರಪ್ಪನವರ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ.

40% ಕಮೀಷನ್​ಗಾಗಿ ಕಿರುಕುಳ ನೀಡಿ ಜೀವ ತೆಗೆದ ಭ್ರಷ್ಟಾಚಾರಿ ಈಶ್ವರಪ್ಪನನ್ನು ಸಂಪುಟದಿಂದ ವಜಾ ಮಾಡಿ ಬಂಧಿಸುವಂತೆ ಆಗ್ರಹಿಸಿ ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಅಂತ ಪ್ರತಿಭಟನೆಯ ಉದ್ದೇಶವನ್ನು ತಿಳಿಸುವ ಪೋಸ್ಟರನ್ನು ವ್ಯಾನಿನ ಎರಡೂ ಕಡೆ ಅಂಟಿಸಲಾಗಿತ್ತು.

ಇದರ ಕೆಳಗಡೆ ಎಡಭಾಗದಲ್ಲಿ ಕೊಲೆಗಡುಕ ಈಶ್ವರಪ್ಪನನ್ನು ಸಂಪುಟದಿಂದ ವಾಜಾ ಮಾಡಿ ಅಂತ ಬರೆದಿದ್ದರೆ ಬಲಭಾಗಲ್ಲಿ ಕೊಲೆಗಡುಕ ಈಶ್ವರಪ್ಪನನ್ನು ಬಂಧಿಸಿ ಎಂದು ಬರೆಯಲಾಗಿತ್ತು.

TV9 Kannada


Leave a Reply

Your email address will not be published.