ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ರನ್ನು ಮೈಸೂರಿನ ಧುರೀಣರೊಬ್ಬರ ಮನೆಗೆ ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು

Zameer Ahmad gets traditional reception in Mysuru

ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್​ಗೆ ಬಂದು ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿರುವ ಜಮೀರ್ ಅಹ್ಮದ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಂಗಳವಾರ ಅವರು ದೆಹಲಿಯಲ್ಲಿದ್ದರು. ಬುಧವಾರ ಮೈಸೂರು. ದೆಹಲಿ ಹೋಗಿದ್ಯಾಕೆ ಅಂತ ರಾಷ್ಟ್ರದ ರಾಜಧಾನಿಯಲ್ಲಿ ಪತ್ರಕರ್ತರು ಕೇಳಿದಾಗ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಗೆ ಅಲ್ಪಸಂಖ್ಯಾತನೊಬ್ಬನಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ವರಿಷ್ಠ ನಾಯಕರಿಗೆ ಮನವಿ ಮಾಡಲು ಬಂದಿದ್ದು ಅಂತ ಹೇಳಿದರು. ಆದರೆ ಅಸಲು ಕಾರಣವನ್ನು ಮುಚ್ಚಿಡುತ್ತಿದ್ದಾರೆಂದು ಮಾಧ್ಯಮದವರಿಗೆ ಖಾತ್ರಿಯಾಗಿತ್ತು. ಹಾಗಾಗೇ, ಅದನ್ನು ಕೆದಕಲು ಪ್ರಯತ್ನಿಸಿದಾಗ ಅವರು, ಮಾಧ್ಯಮದವರು ಸುಖಾಸುಮ್ಮನೆ ಏನೆಲ್ಲ ಸೃಷ್ಟಿ ಮಾಡ್ತೀರಿ ಅಂತ ಹೇಳಿ ಮಾಧ್ಯಮದವರ ಮೇಲೆ ಗೂಬೆ ಕೂರಿಸಲು ಯತ್ನಿಸಿದರು.

ಜಮೀರ್ ಅಹ್ಮದ್ ಬುಧವಾರದಂದು ಮೈಸೂರಿಗೆ ಹೋಗಿದ್ದರು. ಸ್ಥಳೀಯ ಕಾಂಗ್ರೆಸ ಮುಖಂಡರ ಮನೆಗೆ ಅವರು ಹೋದಾಗ ಆರತಿ ಮಾಡಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು.

ಮೈಸೂರಿನಲ್ಲೂ ಜಮೀರ್ ಜೆಡಿಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳಿದರು.

ಮೇಲ್ಮನೆಯ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, ಅದರೆ ಜೆಡಿಎಸ್ ಪಕ್ಷ ಕೇವಲ 7 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಲು ಅವರಲ್ಲಿ ಅಭ್ಯರ್ಥಿಗಳಿಲ್ಲವೇ ಅಥವಾ ಬಿಜೆಪಿಯೊಂದಿಗೆ ಒಳಒಪ್ಪಂದ ಏನಾದರೂ ಏರ್ಪಟ್ಟಿದೆಯೇ ಅಂತ ಜಮೀರ್ ಹೇಳಿದರು.

ಇದನ್ನೂ ಓದಿ:   Shaheen Afridi: ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

TV9 Kannada

Leave a comment

Your email address will not be published. Required fields are marked *