ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಸೇರಿದ ಹಲವು ಕಡೆ ಐಟಿ ದಾಳಿ | IT Raid On congress leader ramoji gowda


ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಸೇರಿದ ಹಲವು ಕಡೆ ಐಟಿ ದಾಳಿ

ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಸೇರಿದ ಹಲವು ಕಡೆ ಐಟಿ ದಾಳಿ

ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಸೇರಿದ ಹಲವು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ. ಬೆಂಗಳೂರಿನ HSR ಲೇಔಟ್‌ನಲ್ಲಿರುವ ನೆಕ್ಸ್ಪ್ಲೇಸ್ ಇನ್ಫೋ ಪ್ರೈ.ಲಿ ಕಚೇರಿಯ ಮೇಲೂ ದಾಳಿ ನಡೆದಿದ್ದು ಶೋಧ ಕಾರ್ಯ ನಡೆಯುತ್ತಿದೆ. ಐಟಿ ಅಧಿಕಾರಿಗಳು ಕಚೇರಿಯ ಎಲ್ಲ ಸಿಬ್ಬಂದಿಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

15 ಜನ ಅಧಿಕಾರಿಗಳ ತಂಡ ಬೆಳಗ್ಗೆ 9 ಗಂಟೆಗೆ ಕಚೇರಿಗೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಇನ್ನು ಆರ್ಆರ್ ನಗರದ ಸಿರಿವೈಭವ ಜುವೆಲ್ಲರ್ಸ್ ಮೇಲೂ ಐಟಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ. ಈ ಬಗ್ಗೆ ರಾಮೂಜಿ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳಗ್ಗೆ ಹದಿನೈದು ಜನ ಐಟಿ ಅಧಿಕಾರಿಗಳು ಬಂದಿದ್ದರು. ನಮ್ಮ ಎರಡು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. 150 ಜನರು ನಮ್ಮ ಕಂಪನಿಯಲ್ಲಿ ಕೆಲಸ ಮಾಡ್ತಾರೆ. ಒಂದು ಸಾಫ್ಟ್ ಕಂಪನಿ, ಮತ್ತೊಂದು ರಿಯಲ್ ಎಸ್ಟೇಟ್ ಕಂಪನಿ. ಸದ್ಯ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿಯಾಗಿರುವ ರಾಮೋಜಿ ಗೌಡ ಈ ಹಿಂದೆ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಯಲ್ಲಿ ಸಂಬಂಧ ಹೊಂದಿದ್ದಾರೆ.

ಇದನ್ನೂ ಒದಿ: ಸುದೀಪ್​ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್​ ರಾಜ್​ಕುಮಾರ್​​ ಭಾವಚಿತ್ರ

ದೇವೇಗೌಡ, ಮೋದಿ ಭೇಟಿ ಹೊಸದೇನಲ್ಲ; ಹಾಸನದಲ್ಲಿ ಐಐಟಿ ಸ್ಥಾಪನೆ ವಿಚಾರವಾಗಿ ಭೇಟಿ ನಡೆದಿದೆ: ಹೆಚ್​ಡಿ ಕುಮಾರಸ್ವಾಮಿ

TV9 Kannada


Leave a Reply

Your email address will not be published. Required fields are marked *