ಕಾಂಟ್ರವರ್ಸಿ ಆಯ್ತು ರಾಬರ್ಟ್​ ಸಿನಿಮಾದ ಗಾಯಕಿ ಮಂಗ್ಲಿ ಹಾಡಿದ ಈ ಸಾಂಗ್​​​

ಕಾಂಟ್ರವರ್ಸಿ ಆಯ್ತು ರಾಬರ್ಟ್​ ಸಿನಿಮಾದ ಗಾಯಕಿ ಮಂಗ್ಲಿ ಹಾಡಿದ ಈ ಸಾಂಗ್​​​

ಕಲಾವಿದರಿಗೆ ಲಕ್ ಅನ್ನೋದು ಯಾವ ಕ್ಷಣಕ್ಕಾದ್ರು ಬರಬಹುದು. ಲಕ್ ಬಂದ್ಮಲೆ ಯಶಸ್ಸು ಕೀರ್ತಿ ಅಭಿಮಾನ ಪ್ರೀತಿ ಎಲ್ಲವೂ ಬರಬಹುದು.. ಇವೆಲ್ಲ ಬಂದ್ಮೇಲೆ ಅಪಕೀರ್ತಿ ಕಾಂಟ್ರವರ್ಸಿಗಳು ಬಂದ್ರೂ ಬರಬಹುದು. ರಾಬರ್ಟ್ ಸಿನಿಮಾದ ತೆಲುಗು ಹಾಡಿನಿಂದ ಕರುನಾಡು ಪ್ಲಸ್ ತೆಲುಗು ನಾಡಿನಲ್ಲಿ ಫೇಮಸ್ ಆಗಿರೋ ಮಂಗ್ಲಿಗೆ ಗಾಯನಕ್ಕೆ ವಿವಾದವೊಂದು ಹುಟ್ಟಿಕೊಂಡಿದೆ.. ಮಂಗ್ಲಿ ಹಾಡಿಗೆ ಹೋ ಅಂತಿದ್ದವರು ಈಗ ಮಂಗ್ಲಿ ಹಾಡಿಗೆ ಏ ಅನ್ನುತ್ತಿದ್ದಾರೆ..

ಸತ್ಯವತಿ ಮಂಗ್ಲಿ.. ಈಕೆಯೂ ಚೆಂದ.. ಈಕೆಯ ಹಾಡು ಅಂದವೋ ಅಂದ.. ಆಂಧ್ರ , ತೆಲಂಗಾಣ ಹಾಗೂ ನಮ್ಮ ಕರ್ನಾಟಕದಲ್ಲಿ ಮಂಗ್ಲಿ ಗಾಯನಕ್ಕೆ ಫಿದಾ ಆಗಿದ್ದಾರೆ.. ಮಂಗ್ಲಿ ಗಾಯನದಲ್ಲೊಂದು ಜಾನಪದ ಸೊಗಡಿದೆ, ಆ ಸೊಗಡಿನ ಧ್ವನಿಯನ್ನ ಕೇಳಿದ ಪ್ರತಿಯೊಬ್ಬರಿಗೆ ಈಕೆ ನಮ್ಮೂರ ಗಾಯಕಿ ಎಂದು ಒಪ್ಪಿಕೊಳ್ಳೋ ಕ್ರೇಜ್ ಉದ್ಭವಾಗಿದೆ..

ಎಲ್ಲಿಯ ಮಂಗ್ಲಿ ಎಲ್ಲಿಯ ಮಸ್ಕಿ.. ರಾಬರ್ಟ್ ಸಿನಿಮಾದ ‘ಕಣ್ಣೆ ಅದಿರಿಂದಿ’ ಎಂದು ಹಾಡಿದ್ದ ಮೋಡಿಗೆ ರಾಯಚೂರಿನ ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಬಂದು ಪ್ರಚಾರ ಮಾಡುವಷ್ಟರ ಮಟ್ಟಿಗೆ ಮಂಗ್ಲಿ ಮೇನಿಯ ಕರ್ನಾಟಕದಲ್ಲಿ ಉದ್ಭವಾಗಿತ್ತು.. ಈ ವಿಚಾರ ನಿಮಗೆಲ್ಲ ತಿಳಿದಿದೆ.. ಆದ್ರೆ ಈಗ ಮಂಗ್ಲಿ ಗಾಯನಕ್ಕೆ ವಿವಾದ ಒಂದು ಎದ್ದಿದೆ.. ಆ ವಿಚಾರವನ್ನ ನೀವು ತಿಳಿಯ ಬೇಕಿದೆ..

ಕಲಾವಿದರ ಬಾಳಲ್ಲಿ ಯಶಸ್ಸು ಅನ್ನೋದು ಬಂದ್ಮೇಲೆ ಅದ್ರ ಹಿಂದೆ ಹಿಂದೇನೆ ವಿವಾದಗಳು ಹುಟ್ಟಿಕೊಳ್ತಾ ಇರ್ತಾವೆ.. ಮಂಗ್ಲಿ ಗಾಯನಕ್ಕೆ ಒಂದು ವಿವಾದ ಉದ್ಭವವಾಗಿದೆ.. ತೆಲುಗು ನೆಲದ ಪವರ್ ಫುಲ್ ದೇವಿಯ ಅವಕೃಪೆಗೆ ಮಂಗ್ಲಿ ಪಾತ್ರರಾಗಿದ್ದಾರೆ.. ಸಿನಿಮಾ ಹಾಡುಗಳ ಜತೆಗೆ ಜನಪದ ಶೈಲಿಯ ಹಾಡುಗಳನ್ನು ಹಾಡುವುದ್ರಲ್ಲಿ ಮಂಗ್ಲಿ ಆಂಧ್ರದಲ್ಲೇ ಫುಲ್ ಫೇಮಸ್..

ತೆಲುಗು ಸಂಸ್ಕೃತಿಯ ಯಾವುದೇ ಹಬ್ಬ ಬಂತೆಂದರೆ ಅದಕ್ಕೆ ಸೂಕ್ತವಾಗುವ ಜನಪದ ಹಾಡೊಂದನ್ನು ಹಾಡಿ ವಿಡಿಯೋ ಮಾಡಿ ಜನಮನ ತಲುಪಿಸುತ್ತಾ ಬಂದಿದ್ದಾರೆ ಸತ್ಯವತಿ ಮಂಗ್ಲಿ. ಇದೇ ರೀತಿ ಆಂಧ್ರದಲ್ಲಿ ನಡೆಯುವ ಪ್ರಖ್ಯಾತ ಸಂಪ್ರಾದಾಯದ ಹಬ್ಬ ಬೊನಾಲು ಹಬ್ಬದ ಹಿನ್ನಲೆಯಲ್ಲಿ ಮಂಗ್ಲಿ ಬೊನಾಲು ಹಾಡನ್ನು ಹಾಡಿ ನೃತ್ಯ ಮಾಡಿದ್ದಾರೆ. ಮೈಸಮ್ಮ ದೇವಿಯ ಆರಾಧನೆ ಸಾರೋ ಮಂಗ್ಲಿಯ ಈ ಹಾಡು ಈ ವಿವಾದದ ಬೆಂಕಿಯಾಗಿದೆ..

ಬೊನಾಲು ಹಬ್ಬದ ಹಿನ್ನಲೆಯಲ್ಲಿ ಈ ಹಾಡಿನಿಂದ ಕೆಲವರು ಬೇಸರಗೊಂಡಿದ್ದರೆ ಮತ್ತೆ ಕೆಲವರು ಈ ಹಾಡು ದೇವರಿಗೆ ಅವಮಾನ ಮಾಡುವ ರೀತಿಯಲ್ಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಾಡಿನಲ್ಲಿ ಮೈಸಮ್ಮ ದೇವಿಯ ಮಹಿಮೆಯನ್ನ ಹೊಗಳೋ ಬದಲು ತೆಗಳೋ ಪದಗಳನ್ನ ಬೆರೆಸಲಾಗಿದೆ.. ಜೊತೆಗೆ ಆಫ್ರಿಕಾ ವ್ಯಕ್ತಿಯನ್ನ ತೋರಿಸಲಾಗಿದೆ. ಈ ವಿಚಾರದಿಂದ ಮೈಸಮ್ಮ ಭಕ್ತರ ನಂಬಿಕೆಗೆ ನೋವಾಗಿದೆ.. ಕೂಡಲೇ ಮಂಗ್ಲಿ ತೆಲಂಗಾಣ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಜುಲೈ 11ರಂದು ಈ ಹಾಡು ಬಿಡುಗಡೆಯಾಗಿದ್ದು ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಇಷ್ಟು ದಿನ ಮಂಗ್ಲಿ ಗಾಯನ ಹಾಡುಗಳು ಜನರ ನಡುವೆ ವೈರಲ್ ಆಗುತ್ತಾ ಮಂಗ್ಲಿ ಖ್ಯಾತಿಯನ್ನ ಹೆಚ್ಚಿಸುತ್ತಿದ್ವು. ಆದ್ರೆ ಈಗ ಮೈಸಮ್ಮ ದೇವಿ ಹಾಡು ದೇವಿ ಭಕ್ತರನ್ನ ಕೆರಳಿಸುತ್ತಿದೆ.. ಯಶಸ್ಸಿನ ಉತ್ತುಂಗಕ್ಕೆ ಹೋದ ಮೇಲೆ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು ಎಂಬುದಕ್ಕೆ ಇದುವೇ ಸಾಕ್ಷಿ.

The post ಕಾಂಟ್ರವರ್ಸಿ ಆಯ್ತು ರಾಬರ್ಟ್​ ಸಿನಿಮಾದ ಗಾಯಕಿ ಮಂಗ್ಲಿ ಹಾಡಿದ ಈ ಸಾಂಗ್​​​ appeared first on News First Kannada.

Source: newsfirstlive.com

Source link