ಕಾಜಲ್ ಅಗರ್​ವಾಲ್​ ಕಡೆಯಿಂದ ಸಿಹಿ ಸುದ್ದಿ; ಮನೆಗೆ ಹೊಸ ಸದಸ್ಯನ ಆಗಮನ | Kajal Aggarwal Husband Gautam Kitchlu blessed with Baby Boy Says report


ಕಾಜಲ್ ಅಗರ್​ವಾಲ್​ ಕಡೆಯಿಂದ ಸಿಹಿ ಸುದ್ದಿ; ಮನೆಗೆ ಹೊಸ ಸದಸ್ಯನ ಆಗಮನ

ಗೌತಮ್-ಕಾಜಲ್

ನಟಿ ಕಾಜಲ್​ ಅಗರ್​ವಾಲ್ (Kajal Aggarwal)​ 2020ರ ಅಕ್ಟೋಬರ್​ ತಿಂಗಳಲ್ಲಿ ಮದುವೆ ಆಗಿದ್ದರು. ತಮ್ಮ ಬಾಯ್​ಫ್ರೆಂಡ್​ ಗೌತಮ್​ (Gautam Kitchlu) ಅವರನ್ನು ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಈಗ ಈ ದಂಪತಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ತಾವು ​ಪ್ರೆಗ್ನೆಂಟ್​ ಎನ್ನುವ ವಿಚಾರವನ್ನು ಕಾಜಲ್ ಕಳೆದ ವರ್ಷವೇ ಘೋಷಣೆ ಮಾಡಿದ್ದರು. ಈಗ ಕಾಜಲ್​ಗೆ ಗಂಡು ಮಗು (Kajal Aggarwal Blessed With Baby Boy) ಜನಿಸಿದೆ ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಅವರು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕಾಜಲ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ.

ಕಾಜಲ್ ಹಾಗೂ ಗೌತಮ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಕ್ಟೋಬರ್ 6ರಂದು ಖಾಸಗಿ ಸಮಾರಂಭದಲ್ಲಿ ಕಾಜಲ್ ಮದುವೆ ಆದರು. 2020ರಲ್ಲಿ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅದ್ದೂರಿ ಸಮಾರಂಭಕ್ಕೆ ಬ್ರೇಕ್ ಹಾಕಲಾಗಿತ್ತು. ಇದಾದ ಒಂದೂವರೆ ವರ್ಷಕ್ಕೆ ಅವರ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ. ಮಗುವಿನ ಫೋಟೋವನ್ನು ಅವರು ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಈ ಫೋಟೋ ನೋಡಲು ಫ್ಯಾನ್ಸ್ ಕಾದು ಕೂತಿದ್ದಾರೆ.

ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಕಾಜಲ್​ಗೆ ಇದೆ. ‘ಆಚಾರ್ಯ’​ ಸೇರಿ ನಾಲ್ಕು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ. ಈ ಪೈಕಿ ಎಲ್ಲಾ ಚಿತ್ರಗಳು ರಿಲೀಸ್​ಗೆ ರೆಡಿ ಇದ್ದು, ಕೊರೊನಾದಿಂದ ವಿಳಂಬವಾಗಿದೆ. ಈಗ ಅವರಿಗೆ ಮಗು ಆಗಿರುವುದು ಕಾಜಲ್ ಕುಟುಂಬಕ್ಕೆ ಖುಷಿ ನೀಡಿದೆ. ಪ್ರೆಗ್ನೆಂಟ್ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕಳೆದ ವರ್ಷ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ಸಿನಿಮಾ ರಂಗದಿಂದ ದೂರ ಉಳಿಯುವ ಸೂಚನೆ ನೀಡಿದ್ದರು. ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ’ ಎಂದಿದ್ದರು. ಸದ್ಯದ ಮಟ್ಟಿಗಂತೂ ಅವರು ಚಿತ್ರರಂಗಕ್ಕೆ ಮರಳುವುದಿಲ್ಲ. ಮಗುವಿನ ಆರೈಕೆಯಲ್ಲಿ ಕಾಜಲ್ ಬ್ಯುಸಿ ಆಗಲಿದ್ದಾರೆ. ಅವರ ನಟನೆಯ ‘ಆಚಾರ್ಯ’ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರುತ್ತಿದೆ. ರಾಮ್​ ಚರಣ್ ಹಾಗೂ ಚಿರಂಜೀವಿ ಸಿನಿಮಾದಲ್ಲಿ ನಟಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *