ಹಾಸನ: ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಆನೆಯ ದಾಳಿಗೆ ಸಿಲುಕಿ ಕಾಫಿ ತೋಟದ ಮಾಲೀಕರೊಬ್ಬರು ಭೀಕರವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಕಿರುಹುಣುಸೆ ಗ್ರಾಮದಲ್ಲಿ ನಡೆದಿದೆ.

ರಾಜಣ್ಣ(59) ಮೃತ ವ್ಯಕ್ತಿ. ಬೆಳಗ್ಗೆ ಮನೆ ಸಮೀಪವೇ ರಾಜಣ್ಣ ಅವರ ಮೇಲೆ ಸಲಗ ದಾಳಿ ಮಾಡಿ‌ ಕೊಂದುಹಾಕಿದೆ. ದಾಳಿಯ ತೀವ್ರತೆಗೆ ರಾಜಣ್ಣ ಅವರ ಮುಖ ಗುರುತು ಸಿಗದಂತಾಗಿದ್ದು, ದೃಶ್ಯ ಎದೆ ಝಲ್ಲೆನಿಸುವಂತಿದೆ. ಆನೆ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ಕಾಡಾನೆ ದಾಳಿಗೆ ಕಾಫಿತೋಟದ ಮಾಲೀಕ ಭೀಕರ ಸಾವು appeared first on News First Kannada.

Source: newsfirstlive.com

Source link