ಕಾಡಿನಲ್ಲಿನ ಸೆಲೆಬ್ರಿಟಿ ಸಂಚಾರದ ಕಥೆ ಹೇಳ್ತಿದ್ದಾರೆ​ ‘ರಂಗಿತರಂಗ’ ಬೆಡಗಿ

ಎಲ್ಲರಂತೆ ಸಿನಿಮಾ ಮಂದಿನೂ ಕನಸು ಕಾಣ್ತಾರೆ.. ತೂಸು ಹೆಚ್ಚೇ ಕನಸು ಕಾಣ್ತಾರೆ ಎನ್ನಬಹುದು. ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್ ಕೂಡ ಕನಸು ಕಂಡಿದ್ದಾರೆ. ಆದ್ರೆ ರಾಧಿಕಾ ನಾರಾಯಣ್ ಅವರ ಕನಸಿನಲ್ಲಿ ಬಂಡಿಪುರದ ವನ್ಯ ಪ್ರಾಣಿ ಪಕ್ಷಗಳು ಕಾಣಿಸುತ್ತಿವೆ ಅಂತೆ.

ಕೆಲ ದಿನಗಳ ಹಿಂದೆ ನಮ್ಮ ಸ್ಯಾಂಡಲ್​​ವುಡ್​​ನ ಗೋಲ್ಡನ್ ಸ್ಟಾರ್ ಗಣೇಶ್ ಕಬಿನಿ ಕಾಡಿನಲ್ಲಿ ಒಂದು ಜಾಲಿ ಸಫಾರಿ ಹೋಗಿದ್ರು. ಇದೀಗ ರಂಗಿತರಂಗ ಖ್ಯಾತಿಯ ನಾಯಕಿ ರಾಧಿಕಾ ಚೇತನ್ ಕಾಡಿನೋಳ್ ಒಂದು ಟ್ರಿಪ್ ಹೋಗಿ ಬಂದಿದ್ದಾರೆ.. ಅದ್ಯಾವ ಕಾಡು ಗೊತ್ತಾ. ನಮ್ಮ ನಾಡಿನ ಸಿರಿವನದ ಸಂಪತ್ತು ಬಂಡಿಪುರ ಅಭಯಾರಣ್ಯ.

ಸಫಾರಿಗೆಂದು ನಾಡಿನವರು ಕಾಡಿನೋಳಗೆ ಹೋದಾಗ ಅಷ್ಟು ಸುಲಭವಾಗಿ ವನ್ಯ ಮೃಗಗಳ ದರ್ಶನ ಆಗೋದಿಲ್ಲ. ಆದ್ರೆ ರಾಧಿಕಾಗೆ ವನ್ಯ ಮೃಗಗಳ ದರ್ಶನ ಆಗಿದೆ. ಅದು ನನಸಿನಲ್ಲಿ ಅಲ್ಲ ಕನಸಲ್ಲಿ.

ನನಸಿನಲ್ಲಿ ಅಲ್ಲ ಕನಸಲ್ಲಿ ಅಂದ್ರೇನು? ನಮ್ಮ ಬಂಡಿಪುರ ಅನ್ನೋ ಒಂದು ಅದ್ಭುತ ಫಾರೆಸ್ಟ್ ಡಾಕ್ಯೂಮೆಂಟ್ರಿನ ವೈಲ್ಡ್ ಲೈಫ್ ಫೋಟೋಗ್ರಾಫರ್ ಪ್ರಶಾಂತ್. ಎಸ್. ನಾಯಕ್ ಅವರು ರಾಜ್ಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಾಡಿದ್ರು. ಈಗ ಇದೇ ಪ್ರಶಾಂತ್ ಪರಿಕಲ್ಪನೆಯಲ್ಲಿ ಒಬ್ಬ ಸೆಲಬ್ರಿಟಿ ಬಂಡಿಪುರ ಅಭಯಾರಣ್ಯಕ್ಕೆ ಬಂದ್ರೆ ಹೆಂಗಿರುತ್ತೆ ಅನ್ನೋ ಕಲ್ಪನೆಯಲ್ಲಿ ಒಂದು ವಿಡಿಯೋ ಝಲಕ್ ಅನ್ನ 15ರಿಂದ 20 ದಿನ ಶೂಟಿಂಗ್ ಮಾಡಲಾಗಿದೆ. ಅರಣ್ಯ ಇಲಾಖೆಯ ಈ ವಿಡಿಯೋದಲ್ಲಿ ಅಭಿನಯ ಮಾಡಲು ರಾಧಿಕಾ ನಾರಾಯಣ್ ತುಂಬು ಹೃದಯದಿಂದ ಒಪ್ಪಿಕೊಂಡು ನ್ಯಾಚುರಲ್ ಆಗಿ ಅಭಿನಯ ಮಾಡಿದ್ದಾರೆ.

ಇದನ್ನು ಓದಿ:‘ಭಜರಂಗಿ 2’ ಪೋಸ್ಟರ್ ರಿಲೀಸ್​: ಭಾವನಾ ಚಿಣ್​ಮಿಣಿಕಿ ಲೇಡಿ ಫೈರ್ ಲುಕ್ ಗೆ ಫ್ಯಾನ್ಸ್ ಫಿದಾ

ದಿ ಬಂಡಿಪುರ ಸಫಾರಿ ಅನ್ನೋ ಹೆಸರಿನಲ್ಲಿ ರಾಧಿಕಾ ನಾರಾಯಣ್ ನಟನೆಯ ವೈಲ್ಡ್ ಲೈಫ್ ವಿಡಿಯೋ ಮೂಡಿಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ನೋಡಲು ಉಚಿತವಾಗಿ ಸಿಗಲಿದೆ ನೋಡಿ ಎಂಜಾಯ್ ಮಾಡಿ.

The post ಕಾಡಿನಲ್ಲಿನ ಸೆಲೆಬ್ರಿಟಿ ಸಂಚಾರದ ಕಥೆ ಹೇಳ್ತಿದ್ದಾರೆ​ ‘ರಂಗಿತರಂಗ’ ಬೆಡಗಿ appeared first on News First Kannada.

News First Live Kannada

Leave a comment

Your email address will not be published. Required fields are marked *