ಬೆಂಗಳೂರು: ಕಾಡಿನ ನಡುವೆ ಟ್ರೈನ್ ಡಿಕ್ಕಿಯಾಗಿ ಕಾಡು ಪ್ರಾಣಿಗಳ‌ ಸಾವು ವಿಚಾರಕ್ಕೆ ಸಂಬಂಧಿಸಿದಂತೆ ಕಾಡಿನ ನಡುವೆ ಟ್ರೈನ್ ಸ್ಪೀಡ್ ಕಡಿಮೆಗೊಳಿಸಲು ಕೋರಿ ಸಲ್ಲಿಸಿದ್ದ ಪಿಐಎಲ್​ ವಿಚಾರಣೆ ಇಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆಯಿತು.
ಈ ವಿಚಾರವಾಗಿ ಹೈಕೋರ್ಟ್​ ರೈಲ್ವೆ ಇಲಾಖೆಗೆ ನೋಟಿಸ್ ನೀಡಿದ್ದು ಅರ್ಜಿಗೆ ಉತ್ತರಿಸುವಂತೆ ಸಿಜೆ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿದೆ.

ಗಿರಿಧರ್ ಕುಲಕರ್ಣಿ ಎಂಬುವರು ಈ ಪಿಐಎಲ್ ಸಲ್ಲಿಸಿದ್ದರು ಕಾಡಿನ ನಡುವೆ ರೈಲ್ವೆ ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಕಡಿಮೆಗೊಳಿಸಬೇಕು. ಟ್ರೈನ್ ಸ್ಪೀಡ್ ನಿಂದ ಪ್ರಾಣಿ ಪಕ್ಷಿಗಳು ರೈಲುಗಳಿಗೆ ಡಿಕ್ಕಿಯಾಗ್ತಿವೆ. ಇಲ್ಲಿತನಕ ಈ ಬಗ್ಗೆ ಹತ್ತಾರು ಕೇಸ್​ಗಳು ಸಹ ರಿಜಿಸ್ಟರ್ ಆಗಿವೆ. ಹೊಸಪೇಟೆ-ವಾಸ್ಕೋ ಹಾಗೂ ಲೋಂಡಾ-ಮೀರಜ್ ಮಾರ್ಗ.. ಧಾರವಾಡ, ಬೆಳಗಾವಿ, ಹಳಿಯಾಳ ಹಾಗೂ ದಾಂಡೇಲಿ ಮಾರ್ಗದಲ್ಲಿ ಪ್ರಾಣಿಗಳು ಸಾವನ್ನಪ್ಪಿವೆ. 2014 ರಿಂದ ಈವರೆಗೆ ಟ್ರೈನ್ ಡಿಕ್ಕಿ ಹೊಡೆದ ಪರಿಣಾಮ 60ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. 2 ಆನೆ, 49 ಕಾಡುಕೋಣ, ಕರಡಿ, ಕಾಡುನಾಯಿ, ಕಾಡುಹಂದಿಗಳು, ಜಿಂಕೆಗಳು ಮೃತಪಟ್ಟಿವೆ. ಟ್ರೈನ್​ಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ.

2013ರಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ಮಾಡಿದೆ. ದೇಶದ ಎಲ್ಲಾ ದಟ್ಟಾರಣ್ಯಗಳಲ್ಲಿ ಟ್ರೈನ್ ವೇಗವನ್ನು ಕಡಿತಗೊಳಿಸಬೇಕು.. ರೈಲ್ವೆ ಇಲಾಖೆಗೆ ಆದೇಶ ನೀಡಿದ್ದು ಕ್ರಮ ತೆಗೆದುಕೊಂಡಿಲ್ಲ. ವೇಗ ಕಡಿಮೆ ಮಾಡದಿದ್ದರೆ ಚಾಲಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದಿದೆ. ಆ ಆದೇಶ ಇಲ್ಲಿತನಕ ಪಾಲನೆಯಾಗಿಲ್ಲ. ಈ ಬಗ್ಗೆ ಸ್ವತಃ ಅರ್ಜಿದಾರರು ದೂರು ನೀಡಿದ್ರೂ ಕ್ರಮ ತೆಗೆದುಕೊಂಡಿಲ್ಲ. ಇದು ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆಯ 48(ಎ) ಉಲ್ಲಂಘನೆಯಾಗುತ್ತದೆ. ಕಾಡಿನ ಪ್ರಾಣಿಗಳಿಗೆ ತೊಂದರೆ ಆಗುತ್ತೆ ಅಂತಾ ಮಾರ್ಗ ಬದಲಾಯಿಸಿದೆ. ಬೆಳಗಾವಿ-ಧಾರವಾಡ ಜಿಲ್ಲೆಗಳ ನಡುವಿನ ರೈಲು ಮಾರ್ಗಕ್ಕೆ ಪರ್ಯಾಯವಾಗಿ ಕಿತ್ತೂರು ಮಾರ್ಗ ಮಾಡಲಾಗಿದೆ. ಹೊಸಪೇಟೆ-ವಾಸ್ಕೋ ಮತ್ತು ಲೋಂಡಾ-ಮೀರಜ್ ಮಾರ್ಗಗಳಿಗೂ ಪರ್ಯಾಯ ಮಾರ್ಗ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರ ಗಿರಿಧರ್ ಕುಲಕರ್ಣಿ ರೈಲ್ವೆ ಇಲಾಖೆಗೆ ಸೂಕ್ತ ನಿರ್ದೇಶಕ್ಕೆ ಮನವಿ ಮಾಡಿದ್ದಾರೆ.

The post ಕಾಡಿನ ನಡುವೆ ಸಂಚರಿಸುವ ಟ್ರೈನ್​ಗಳ ಸ್ಪೀಡ್​ ಕಡಿಮೆ ಮಾಡಿ- ಹೈಕೋರ್ಟ್​​ಗೆ ಪಿಐಎಲ್​ appeared first on News First Kannada.

Source: newsfirstlive.com

Source link