ಚಾಮರಾಜನಗರ : ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಸಾವನ್ನಪ್ಪುತ್ತಾರೆ ಅನ್ನೋ ಸುಳ್ಳು ವದಂತಿಯನ್ನ ನಂಬಿಕೊಂಡು ಇಡೀ ಗ್ರಾಮವೇ ಲಸಿಕೆ ಹಾಕಿಸಿಕೊಳ್ಳೋದಕ್ಕೆ ಹಿಂದೇಟು ಪಡ್ತಿದೆ.

ಜಿಲ್ಲೆಯ ಗಡಿಯಂಚಿನಲ್ಲಿರುವ ಕಾಡುಗಳ್ಳ ವೀರಪ್ಪನ್​ ಹುಟ್ಟೂರು ಗೋಪಿನಾಥಂ ಎಂಬ ಊರಲ್ಲಿ ಯಾರೂ ಕೂಡ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲವಂತೆ. 5000ಕ್ಕು ಹೆಚ್ಚು ಜನಸಂಖ್ಯೆಯುಳ್ಳ ಈ ಊರಲ್ಲಿ 8 ಮಂದಿ ನೌಕರರು ಹೊರತುಪಡಿಸಿದ್ರೆ ಇಲ್ಲಿವರೆಗೂ ಲಸಿಕೆ ಪಡೆದವರು ಕೇವಲ ಮೂರು ಮಂದಿ ಮಾತ್ರ. ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಗ್ರಾಮಗಳಿವೆ.‌ ಬಹುತೇಕ ತಮಿಳರೇ ವಾಸಿಸುವ ಈ ಗ್ರಾಮಗಳಲ್ಲಿ ಯಾರೋ ಸುಳ್ಳು ವದಂತಿಯನ್ನ ಹಬ್ಬಿಸಿದ್ದಾರೆ. ಅದೇನಂದ್ರೆ, ತಮಿಳು ಹಾಸ್ಯ ನಟ ವಿವೇಕ್ ಕೋವಿಡ್ ಲಸಿಕೆ ತೆಗೆದುಕೊಂಡ ಮರುದಿನವೇ ಮೃತಪಟ್ಟಿದ್ದಾರೆ. ನಾವು ಹಾಕಿಸಿಕೊಂಡ್ರೆ ಸಾಯ್ತೀವಿ ಅನ್ನೋ ಭಯದಲ್ಲಿ, ಈ ಊರಿನ ಜನ ಪಡೆಯೋದ್ಕೆ ಮುಂದೆ ಬರ್ತಿಲ್ಲ.

 ಯಾವುದೇ ವದಂತಿಗೆ ಕಿವಿಗೊಡಬೇಡಿ

ಲಸಿಕೆ ಹಾಕಲು ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಏ.30 ರಂದು ಕ್ಯಾಂಪ್ ಮಾಡಿ ಇಡೀ ದಿನ ಕಾದರು ಯಾರೊಬ್ಬರು ಸುಳಿಯಲಿಲ್ಲ. ಗ್ರಾಮಪಂಚಾಯ್ತಿ ಅಧ್ಯಕ್ಷ ಹಾಗು ಸದಸ್ಯರೇ ಹಿಂದೇಟು ಹಾಕಿದಾಗ, ಇನ್ನ ಸಾಮಾನ್ಯ ಹಳ್ಳಿ ಜನ ಹೇಗೆ ಹಾಕಿಸಿಕೊಳ್ತಾರೆ? ಹೀಗಾಗಿ, ಲಸಿಕೆ ಹಾಕಿಸಕೊಂಡ ಮೂರು ಜನ, ತಮ್ಮ ಗ್ರಾಮಸ್ಥರಿಗೆ ಲಸಿಕೆ ಪಡೆಯೋದಕ್ಕೆ ಮನವಿ ಮಾಡಿದ್ರೆ, ಗ್ರಾಮಸ್ಥರು, ಲಸಿಕೆ ಹಾಕಿಸಿಕೊಂಡರೆ ಏನೂ ಆಗುವುದಿಲ್ಲ ಎಂದು ಬರೆದುಕೊಡಿ, ನಂತರ ಹಾಕಿಸಿಕೊಳ್ತೀವಿ ಎನ್ನುತ್ತಿದ್ದಾರಂತೆ. ಹೀಗಾಗಿ, ಯಾವುದೇ ವದಂತಿಗೆ ಕಿವಿಗೊಡಬೇಡಿ, ಕೋವಿಡ್​ ವಿರುದ್ಧ ಲಸಿಕೆ ಪಡೆದು ಹೋರಾಡೋಣ ಅಂತ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.

The post ಕಾಡುಗಳ್ಳ ವೀರಪ್ಪನ್​ ಹುಟ್ಟೂರಿನ ಜನ ಲಸಿಕೆ ಹಾಕಿಸಿಕೊಳ್ಳೋದಕ್ಕೆ ಹಿಂದೇಟು; ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link