ಕಾಡುಹಂದಿ ಊರೊಳಗೆ ಬಂದು ಕಾರು ಶೋರೂಮ್ ಸಿಬ್ಬಂದಿ ಮೇಲೆ ಅಟ್ಟಾಡಿಸಿ ಹಲ್ಲೆ ಮಾಡಿದ್ದು ಮಂಗಳೂರಿನಲ್ಲಿ ಮಾರಾಯ್ರೇ! | A wild boar chases and attacks a car showroom staff for the reason only known to it


ಊರು ಹಂದಿಗಳಿಗೆ ಜನರ ಮೇಲೆ ಕೋಪ ಬಂದಿದನ್ನು ಪ್ರಾಯಶಃ ನಾವ್ಯಾರೂ ನೋಡಿಲ್ಲ. ಹಾಗಂತ, ಕಾಡುಹಂದಿಗಳ ಪ್ರವರ್ತನೆ ನಮಗೆ ಗೊತ್ತು ಅನ್ನೋದು ಇದರ ಅರ್ಥವಲ್ಲ. ಆದರೆ, ಊರ ಹಂದಿಗಳನ್ನು ನಾವು ನೋಡುತ್ತಿರುತ್ತೇವೆ ಹಾಗಾಗಿ ಅವುಗಳ ಸ್ವಭಾವ ನಮಗೆ ಚೆನ್ನಾಗಿ ಗೊತ್ತು. ಬೆಂಗಳೂರಿನಂಥ ಮಹಾನಗರದಲ್ಲಿ ನಮಗೆ ಈ ಪ್ರಾಣಿಗಳು ಕಾಣಸಿಗವು, ಆದರೆ ಹಳ್ಳಿಗಳ ಕಡೆ ಹೋದರೆ, ಅವು ರಸ್ತೆಗಳಲ್ಲಿ ನಿರ್ಭೀತಿಯಿಂದ ಓಡಾಡುವುದನ್ನು ನೋಡಬಹುದು. ಓಕೆ, ನಾವು ಯಾಕೆ ಹಂದಿಗಳ ವಿಷಯ ಇಷ್ಟು ವಿಶದವಾಗಿ ಮಾತಾಡುತ್ತಿದ್ದೇವೆ ಅಂದರೆ, ಈ ವಿಡಿಯೋನಲ್ಲಿನರುವ ದೃಶ್ಯ ಗೊಂದಲಕಾರಿಯಾಗಿದೆ. ಯಾಕೆ ಅನ್ನೋದನ್ನು ಹೇಳ್ತೀವಿ ಕೇಳಿ.

ವಿಡಿಯೋನಲ್ಲಿ ಕಾಡುಹಂದಿಯೊಂದು ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿಕೊಂಡು ಅವರ ಮೇಲೆ ಆಕ್ರಮಣ ಮಾಡುತ್ತಿರುವುದು ನಿಮಗೆ ಕಾಣುತ್ತದೆ. ಇದು ನಡೆದಿರೋದು ಮಂಗಳೂರು ನಗರದಲ್ಲಿ. ನಗರ ಪ್ರದೇಶದಲ್ಲಿ ಹೇಗೆ ಕಾಡುಹಂದಿ ಬಂತು ಅನ್ನೋದೇ ಅರ್ಥವಾಗದಿರುವ ವಿಷಯ. ಮಂಗಳೂರಿನಲ್ಲಿ ಕಾಡು ಹಂದಿಗಳನ್ನು ಸಾಕುವ ಜನ ಇದ್ದಾರೆಯೇ? ನಮಗೆ ಅಂಥ ಮಾಹಿತಿ ಇಲ್ಲ.

ಓಕೆ, ನಾವು ಊರ ಹಂದಿಯನ್ನು ಕಾಡುಹಂದಿಯಾಗಿ ಕನ್ಫ್ಯೂಸ್ ಮಾಡಿಕೊಂಡಿದ್ದೇವೆ ಅಂತ ಭಾವಿಸೋಣ. ಅದರೆ, ಊರಹಂದಿಗಳು ಜನರನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡುವುದಿಲ್ಲ. ಈ ಗೊಂದಲ ಪರಿಹಾರವಾಗಬೇಕಾದರೆ, ನಾವು ಹಂದಿಯಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನೇ ಕೇಳಬೇಕು.

ಅವರು ಕಾರು ಶೋರೂಮೊಂದರ ಸಿಬ್ಬಂದಿ ಆಂತ ತಿಳಿದುಬಂದಿದೆ. ಅವರ ಮೇಲೆ ಯಾಕೆ ಹಂದಿಗೆ ಈ ಪರಿ ಸಿಟ್ಟು? ಮಾಸಿಕ ಕಂತುಗಳಲ್ಲಿ ಕಾರು ಸಿಗುತ್ತಾ ಅಂತ ಅದು ಕೇಳಲು ಹೋದಾಗ ಸಿಬ್ಬಂದಿ ಗದರಿದ್ದರೆ!?

ಕೊನೆ ಗಳಿಗೆಯಲ್ಲಿ ಅವರು ಹಂದಿ ಅಟ್ಟಿಸಿಕೊಂಡು ಬರುವುದನ್ನು ನೋಡಿ ಕೂಡಲೇ ಶೋರೂಮಿನೊಳಗೆ ನುಗ್ಗುವ ಪ್ರಯತ್ನ ಮಾಡಿ ಬಿದ್ದು ಬಿಡುತ್ತಾರೆ. ಪ್ರಾಯಶಃ ಅವರನ್ನೊಮ್ಮೆ ತಿವಿದ ನಂತರ ಹಂದಿ ಆಚೆ ಬರುತ್ತದೆ.

ಈ ವಿಡಿಯೋನಲ್ಲಿ ಮತ್ತೊಬ್ಬ (ನೀಲಿ ಅಂಗಿ) ವ್ಯಕ್ತಿಯಿದ್ದಾರೆ. ಅವರು ಅ ಬದಿಯಿಂದ ನಿಂತುಕೊಂಡು ಎಲ್ಲವನ್ನು ಗಮನಿಸುತ್ತಿದ್ದಾರೆ. ಆದರೆ ಹಂದಿ ಆಚೆ ಬಂದು ಅವರು ನಿಂತಕಡೆ ಓಡುತ್ತಿರುವುದು ಕಾಣಿಸಿದಾಕ್ಷಣ, ಎಂತದ್ದು ಮಾರಾಯ ಇದು ಹಂದಿಯ ಪಿರಿಪಿರಿ, ನನ್ನ ಜೀವ ಉಳಿದರೆ ಸಾಕು, ಅಂದುಕೊಳ್ಳುತ್ತಾ ಕಾರಿನ ಹಿಂದೆ ಬಚ್ಚಿಟ್ಟುಕೊಳ್ಳುತ್ತಾರೆ.

ಹಂದಿ ಅವರ ಮೇಲೆ ಹಲ್ಲೆ ನಡೆಸದೆ ಡೆಡ್ ಎಂಡ್ ವರೆಗೆ ಹೋಗಿ ನಂತರ ತಾನು ಬಂದ ದಾರಿಯಲ್ಲಿ ವಾಪಸ್ಸು ಓಡಿಬರುತ್ತದೆ.

ಇದನ್ನೂ ಓದಿ:   ಹಾಸನದಲ್ಲಿ 24 ಆನೆಗಳ ದಾಳಿಗೆ ಅಪಾರ ಬೆಳೆ ಹಾನಿ! ಸಾಲಾಗಿ ಹೆಜ್ಜೆ ಹಾಕುತ್ತಿರುವ ಗಜಪಡೆಗಳ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *