ಬೆಂಗಳೂರು: ದೊಡ್ಡಮನೆ ಪ್ರಾಪರ್ಟಿ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಮಾಪತಿ ಶ್ರೀನಿವಾಸ್, ನಾನು ಬೀದಿಯಲ್ಲಿ ನಿಂತು ಮಾತಾಡುವ ಬೀದಿ ಬಸವ ನಾನಲ್ಲ, ಈ ಪ್ರಕರಣದ ಬಗ್ಗೆ ನಮ್ಮ ವಕೀಲರಾದ ಶ್ಯಾಮ್ ಸುಂದರ್, ಮತ್ತು ಹನುಮಂತ ರಾಯಪ್ಪ ಜೊತೆ ಮಾತಾಡಿದ್ದೇನೆ. ದರ್ಶನ್​ ಅವರಿಗೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಇನ್ನು ಇಂದ್ರಜಿತ್ ಲಂಕೇಶ್ ಮತ್ತು ಉಮಾಪತಿ ಅವರ ವಕೀಲ ಶ್ಯಾಮ್ ಸುಂದರ್ ಒಬ್ಬರೆ ಆಗಿರುವದರಿಂದ ಈ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಮೂಲಕ ದರ್ಶನ್ ವಿರುದ್ದ ಹೋರಾಡೋಕೆ ಇಂದ್ರಜಿತ್ ಜೊತೆ ಉಮಾಪತಿ ಕೈ ಜೋಡಿಸಿದರಾ ಎಂದು ಗಾಂಧಿನಗರದ ತುಂಬೆಲ್ಲ ಗುಲ್ಲೆದ್ದಿದೆ.

The post ‘ಕಾನೂನಿನ ಮೂಲಕವೇ ಉತ್ತರ ಕೊಡ್ತೀನಿ’ ತೆರೆಮರೆಯಲ್ಲಿ ಕೈಜೊಡಿಸಿದ್ರಾ ಇಂದ್ರಜಿತ್, ಉಮಾಪತಿ? appeared first on News First Kannada.

Source: newsfirstlive.com

Source link