ಕಾನ್ಪುರ್​ ಮ್ಯಾಚ್​ ವೇಳೆ ಫೇಮಸ್ ಆಗಿದ್ದ ‘ಗುಟ್ಕಾ ಮ್ಯಾನ್’ ತಿಂದಿದ್ದು ಗುಟ್ಕಾ ಅಲ್ವಂತೆ: ಮತ್ತೇನು?


ಮೊನ್ನೆಯಿಂದ ಉತ್ತರಪ್ರದೇಶದ ಕಾನ್ಪುರ್​ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಟೆಸ್ಟ್​ ಮ್ಯಾಚ್ ಆರಂಭವಾಗಿದೆ.ಪಂದ್ಯದ ವೇಳೆ ಆಟಗಾರರು ಮೈದಾನದಲ್ಲಿ ಬೆವರು ಹರಿಸಿ ಆಟ ಆಡುತ್ತಿದ್ದರೆ ಓರ್ವ ವ್ಯಕ್ತಿ ಬಾಯಲ್ಲಿ ಅದೆನೋ ಅಗಿಯುತ್ತಾ, ಮೊಬೈಲ್​ನಲ್ಲಿ ಮಾತನಾಡುತ್ತಾ ಸೀಟ್​ನ ಮೇಲೆ ವಿರಾಜಮಾನವಾಗಿ ಕೂತಿದ್ದ. ಅದ್ಯಾವ ಕ್ಷಣದಲ್ಲಿ ಕಾಮೆರಾಮನ್​ ಕಣ್ಣು ಈತನ ಮೇಲೆ ಬಿದ್ದಿತೋ ಗೊತ್ತಿಲ್ಲ. ಪರಿಣಾಮ ಅರೆಕ್ಷಣದಲ್ಲಿ ಆತ ವಿಶ್ವವಿಖ್ಯಾತಿಯಾಗಿಬಿಟ್ಟಿದ್ದ!

ಹೌದು.. ಆ ವ್ಯಕ್ತಿಯ ಹೆಸರು ಶೋಭೀತ್​ ಅಂತಾ.. ಕಾನ್ಪುರದ ಸರ್ವೋದಯ ನಗರದ ನಿವಾಸಿಯಾದ ಅವರ ಆ ಯುನಿಕ್​ ಸ್ಟೈಲ್​ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದ್ದವು. ಟ್ರೋಲ್​ ಪೇಜ್​ಗಳಲ್ಲಿ ಈತನ ಮೀಮ್ಸ್​ಗಳು ತುಂಬಿ ತುಳುಕುತ್ತಿದ್ದವು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ಮಾಹಿತಿಯನ್ನು ಅವರು  ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಅವರು. ನಾನು ನನ್ನ ಸಹೋದರಿ ಜೊತೆ ಪಂದ್ಯ ವೀಕ್ಷಿಸಲು ಆಗಮಿಸಿದ್ದೆ. ಆಗ ನಾನು ಬಾಯಲ್ಲಿ ಸಿಹಿ ಅಡಿಕೆಯನ್ನ ಅಗಿಯುವಾಗ ಕ್ಯಾಮೆರಾ ನನ್ನ ಬಳಿ ಪ್ಯಾನಿಂಗ್​ ಆಯಿತು. ಈ ವೇಳೆ ನಾನು ಗುಟ್ಕಾ ಅಗಿಯುತ್ತಿದ್ದೆ ಎಂದು ಕೆಲವರು ತಪ್ಪಾಗಿ ಭಾವಿಸಿಕೊಂಡು ಟ್ರೋಲ್​ ಮಾಡಿದರು. ಆದರೆ ನಾನು ಅಗಿಯುತ್ತಿದ್ದು ಸ್ವೀಟ್​ ಸುಪಾರಿ (ಸಿಹಿ ಅಡಿಕೆ) ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ನನಗೆ ಗುಟ್ಕಾ ತಿನ್ನುವ ಅಭ್ಯಾಸವಿಲ್ಲ ಎಂದು ಅವರು ಹೇಳಿದ್ದಾರೆ.

ಜೊತೆಗೆ ಕೆಲವೊಬ್ಬರು ನನ್ನ ಪಕ್ಕ ಕುಳಿತಿದ್ದ ನನ್ನ ಸಹೋದರಿಯ ಕುರಿತು ಅಶ್ಲೀಲವಾಗಿ ಕಮೆಂಟ್​​ ಮಾಡಿದ್ದಾರೆ. ಒಬ್ಬ ಹುಡುಗಿ ಪಕ್ಕದಲ್ಲಿ ಕುಳಿತರೆ ಅವರು ನಮ್ಮ ತಂಗಿ, ಅಕ್ಕ ಅಥವಾ ಮಗಳಾಗಿರಬಹುದು ಆದ್ರೆ ಸಾಕಷ್ಟು ಜನರು ಅಪಾರ್ಥ ಮಾಡಿಕೊಂಡು ಕೀಳ ಭಾಷೆಯಲ್ಲಿ ಕಮೆಂಟ್​ ಮಾಡಿದ್ದಾರೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ:INDvsNZ ಮ್ಯಾಚ್​​ನಲ್ಲಿ ಇವನದ್ದೇ ಮಾತು; ಈ ಗುಟ್ಕಾ ಭಾಯ್ swagಗೆ ಕ್ರಿಕೆಟರ್ ಫಿದಾ

News First Live Kannada


Leave a Reply

Your email address will not be published. Required fields are marked *