ಕಾನ್ಪುರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಕ್ಯಾಪ್ಟನ್, ಕೋಚ್​ಗೆ ಗೊಂದಲ- ನಂ.4 ಸ್ಲಾಟ್​​ಗೆ ತ್ರಿಮೂರ್ತಿಗಳು ಪೈಪೋಟಿ


ನಾಳೆಯಿಂದ ಆರಂಭವಾಗುವ ಮೊದಲ ಟೆಸ್ಟ್​​ ಪಂದ್ಯಕ್ಕೆ​​, ಭಾರತ-ನ್ಯೂಜಿಲೆಂಡ್​​​ ತಂಡಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಆದರೆ ಸರಣಿಗೂ ಮುನ್ನ ಟೀಮ್​ ಇಂಡಿಯಾಗೆ ಸಮಸ್ಯೆಯೊಂದು ಎದುರಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಮ್ಯಾನೇಜ್​ಮೆಂಟ್​ ಸಾಕಷ್ಟು ಇಕ್ಕಟಿಗೆ ಸಿಲುಕಿದೆ. ಹಾಗಾದ್ರೆ ಆ ಸಮಸ್ಯೆ ಏನು..? ಈ ಸ್ಟೋರಿ ನೋಡಿ

ಟಿ-20 ಗುಂಗಿನಿಂದ ಹೊರಬಂದಿರುವ ಟೀಮ್ ಇಂಡಿಯಾ, ಇದೀಗ ಟೆಸ್ಟ್ ಕ್ರಿಕೆಟ್​ನತ್ತ ಚಿತ್ತ ನೆಟ್ಟಿದೆ. ಇಂಗ್ಲೆಂಡ್ ಟೆಸ್ಟ್ ಸರಣಿ ನಂತರ ಭಾರತ ಈಗ ತವರಿನಲ್ಲಿ, ಕಿವೀಸ್​​​​ ವಿರುದ್ಧ ಟೆಸ್ಟ್ ಸರಣಿಯನ್ನ ಆಡಲು ಸಜ್ಜಾಗಿದೆ. ಪ್ರವಾಸಿ ನ್ಯೂಜಿಲೆಂಡ್​ ​​ವಿರುದ್ಧದ ಟಿ20​ ಸರಣಿ ವೈಟ್​ವಾಶ್​ ಮಾಡಿರುವ ದ್ರಾವಿಡ್​​ ಪಡೆ​​, ಇದೀಗ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ. ಆದರೆ ಮೊದಲ ಟೆಸ್ಟ್​​​ಗೆ ಅಲಭ್ಯರಾಗುವ ವಿರಾಟ್​​ ಕೊಹ್ಲಿ ಸ್ಥಾನಕ್ಕೆ, ಯಾರು ಅನ್ನೋ ಪ್ರಶ್ನೆ ಎದ್ದಿದೆ. ಈ ಮೂವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

  • ನಂ.1 ಸೂರ್ಯಕುಮಾರ್​​

ಯೆಸ್, ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟಿರೋ ಆಟಗಾರ, ಸೂರ್ಯಕುಮಾರ್​ ಯಾದವ್​. ವಿರಾಟ್​ ಸ್ಥಾನಕ್ಕೆ ಸೂಕ್ತ ಆಟಗಾರ ಕೂಡ. ಟಿ20 ಸರಣಿಯಲ್ಲಿ ಮಿಂಚಿದ ಸೂರ್ಯನನ್ನ, ಇದೇ ಮೊದಲ ಸಲ ಟೆಸ್ಟ್​​ ತಂಡಕ್ಕೂ ಸೇರಿಸಲಾಗಿದೆ. ಟಿ20 ಸರಣಿಯಲ್ಲಿ 4ನೇ ಸ್ಥಾನದಲ್ಲಿ ಬ್ಯಾಟ್​ ಬೀಸುವ ಅನುಭವ ಹೊಂದಿದ್ದಾರೆ. ರಣಜಿಯಲ್ಲಿ ಕೂಡ ಇದೇ ಸ್ಲಾಟ್​ನಲ್ಲಿ ಬ್ಯಾಟ್​ ಬೀಸಿ, 44.01ರ ಸರಾಸರಿಯಲ್ಲಿ ರನ್​​ ಕೂಡ ಕಲೆಹಾಕಿದ್ದಾರೆ. ಹಾಗೆಯೇ ಕೊಹ್ಲಿ ಅಲಭ್ಯತೆಯಲ್ಲೂ ಅವರದ್ದೇ ಸ್ಲಾಟ್​​​ನಲ್ಲೇ ಬ್ಯಾಟ್​​ ಬೀಸಿ ಸಕ್ಸಸ್​​ ಕಂಡ ಸೂರ್ಯ, ಆ ಸ್ಥಾನವನ್ನ ತುಂಬುವ ಪರಿಪೂರ್ಣ ಆಟಗಾರ.

  • ನಂ.2 ಶ್ರೇಯಸ್​ ಅಯ್ಯರ್​​​​

ವಿರಾಟ್​​​ ಜಾಗಕ್ಕೆ ಪೈಪೋಟಿ ನಡೆಸ್ತಿರೋ​ ಮತ್ತೊಬ್ಬ ಆಟಗಾರ, ಶ್ರೇಯಸ್​ ಅಯ್ಯರ್​​.! ಮಿಡಲ್​ ಆರ್ಡರ್​​​ನಲ್ಲಿ ಯಶಸ್ವಿ ಬ್ಯಾಟ್ಸ್​​ಮನ್​ ಎನಿಸಿರುವ ಶ್ರೇಯಸ್​, ಇದೇ ಮೊದಲ ಬಾರಿಗೆ ಟೆಸ್ಟ್​ ತಂಡಕ್ಕೆ ಆಯ್ಕೆಯಾಗಿರೋದು. ಐಪಿಎಲ್​​, ಟಿ20, ಏಕದಿನದಲ್ಲೂ ಶ್ರೇಯಸ್​​, 4ನೇ ಕ್ರಮಾಂಕದಲ್ಲೇ ಬ್ಯಾಟ್​​ ಬೀಸಿದ್ದಾರೆ. ಹಾಗೆಯೇ ರಣಜಿಯಲ್ಲೂ ಮುಂಬೈ ತಂಡಕ್ಕೆ ಮಧ್ಯಮ ಕ್ರಮಾಂಕದ ಶಕ್ತಿ, ಈ ಮುಂಬೈಕರ್. 52.18ರ ಸರಾಸರಿಯಲ್ಲಿ ರನ್​​ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಕೊಹ್ಲಿ ಸ್ಥಾನಕ್ಕೆ, ಪರ್ಫೆಕ್ಟ್​​ ರಿಪ್ಲೇಸ್​ಮೆಂಟ್​​ ಕೂಡ ಆಗಿದ್ದಾರೆ.

  • ನಂ.3 ಶುಭ್​​ಮನ್​​ ಗಿಲ್​​​

ಟೆಸ್ಟ್​​ನಲ್ಲಿ ಆರಂಭಿಕನಾಗಿ ಗಮನ ಸೆಳೆದ ಶುಭ್​​ಮನ್​​ ಗಿಲ್​​​ಗೆ, ಮ್ಯಾನೇಜ್​​ಮೆಂಟ್​​ ಹೊಸ ಜವಾಬ್ದಾರಿ ನೀಡಿದೆ. ಮಿಡಲ್​ ಆರ್ಡರ್​​​​ನಲ್ಲಿ ಕಣಕ್ಕಿಳಿಯುವಂತೆ ಸೂಚಿಸಿದ್ದು, ಗಿಲ್​​ ಕೂಡ​​ ಕೊಹ್ಲಿ ಸ್ಥಾನದತ್ತ ಚಿತ್ತ ನೆಟ್ಟಿದ್ದಾರೆ. ಓಪನಿಂಗ್​​ನಲ್ಲಿ ಅನುಭವ ಹೊಂದಿರುವ ಗಿಲ್​​, ಇದೇ ಮೊದಲ ಬಾರಿಗೆ ಮಧ್ಯಮ ಕ್ರಮಾಂಕದ ಸವಾಲು ಎದುರಿಸಲು ಸಿದ್ಧರಾಗ್ತಿದ್ದಾರೆ. ರಣಜಿಯಲ್ಲಿ 58.34ರ ಸರಾಸರಿ ಹೊಂದಿರುವ ಶುಭ್ಮನ್,​ ಆರಂಭಿಕನಾಗೇ ಇನ್ನಿಂಗ್ಸ್​​ ಶುರು ಮಾಡಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಗಿಲ್​, ಈ ಸವಾಲನ್ನ ಎದುರಿಸೋಕೆ ಸಿದ್ಧ ಅಂತಿದ್ದಾರೆ.

ಅದೇನೆ ಇರಲಿ, ಈ ಮೂವರು ಕೂಡ ಮೊದಲ ಟೆಸ್ಟ್​​​ಗಾಗಿ ವಿರಾಟ್​ ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟಿರೋದೇನೋ ನಿಜ. ಆದರೆ ನೂತನ ಕೋಚ್​ ರಾಹುಲ್​​​​ ದ್ರಾವಿಡ್​ ಒಲವು ಯಾರ ಮೇಲೆ ಬೀಳುತ್ತೆ ಅನ್ನೋದು, ಕುತೂಹಲ ಮೂಡಿಸಿದೆ.

News First Live Kannada


Leave a Reply

Your email address will not be published. Required fields are marked *